
ಅದ್ಭುತ ಫಾರ್ಮ್‌ನಲ್ಲಿರುವ ಶುಬ್ಮನ್ ಗಿಲ್
ಟೀಮ್ ಇಂಡಿಯಾದ ಯುವ ಆಟಗಾರ ಶುಬ್ಮನ್ ಗಿಲ್ ಅದ್ಭುತ ಫಾರ್ಮ್‌ನಲ್ಲಿದ್ದು ಆರಂಭಿಕ ಆಟಗಾರನಾಗಿ ವೈಟ್‌ಬಾಲ್ ಕ್ರಿಕೆಟ್‌ನಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಟೆಸ್ಟ್‌ನಲ್ಲಿಯೂ ಕೆಎಲ್ ರಾಹುಲ್ ಬದಲಿಗೆ ಶುಬ್ಮನ್ ಗಿಲ್ ಆರಂಭಿಕನಾಗಿ ಕಣಕ್ಕಿಳಿಯಲಿ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು ಕೆಎಲ್ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಲಿ ಎಂಬ ಒತ್ತಾಯಗಳು ಜೊರಾಗುತ್ತಿದೆ. ಇದಕ್ಕೆ ಪೂರಕವಾಗಿ ತಂಡದ ಉಪನಾಯಕ ಕೆಎಲ್ ರಾಹುಲ್ ಕೂಡ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ ತಾನು ಯಾವ ಕ್ರಮಾಂಕದಲ್ಲಿಯೂ ಆಡಲು ಸಿದ್ಧ ಎಂದಿದ್ದಾರೆ.

ಅವಕಾಶದ ನಿರೀಕ್ಷೆಯಲ್ಲಿ ಸೂರ್ಯಕುಮಾರ್ ಯಾದವ್
ಇನ್ನು ವೈಟ್‌ಬಾಳ್ ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿರುವ ಸೂರ್ಯಕುಮಾರ್ ಯಾದವ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅವಕಾಶ ಪಡೆದುಕೊಳ್ಳಲು ಕಾತರಿಸುತ್ತಿದ್ದಾರೆ. ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ಅದ್ಭುತ ದಾಖಲೆ ಹೊಂದಿರುವ ಸೂರ್ಯ ಭಾರತದ ಪರವಾಗಿಯೂ ಟೆಸ್ಟ್ ಮಾದರಿಯಲ್ಲಿ ಕಣಕ್ಕಿಳಿಯುವ ಇಂಗಿತವನ್ನು ಅನೇಕಬಾರಿ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಶ್ರೇಯಸ್ ಐಯ್ಯರ್ ಅಲಭ್ಯವಾಗಿರುವ ಹಿನ್ನೆಲೆಯಲ್ಲಿ ಸೂರ್ಯಕುಮಾರ್ ಯಾದವ್‌ಗೆ ಉತ್ತಮ ಅವಕಾಶವೊಂದು ಇದೆ.

ಸೂರ್ಯ vs ಗಿಲ್; ತನ್ನ ಆಯ್ಕೆ ಹೇಳಿದ ರವಿ ಶಾಸ್ತ್ರಿ
ಟೀಮ್ ಇಂಡಿಯಾದ ಮಾಜಿ ಕೋಚ್ ರವಿ ಶಾಸ್ತ್ರಿ ಸರಿಯಾದ ಕ್ರಮಾಂಕಕ್ಕೆ ಸೂಕ್ತವಾದ ಆಟಗಾರನನ್ನು ಆಯ್ಕೆ ಮಾಡುವುದು ಜಾಣತನದ ನಿರ್ಧಾರ ಎಂದಿದ್ದು ನೇರವಾಗಿ ತನ್ನ ಆಯ್ಕೆಯನ್ನು ಹೇಳಿದ್ದಾರೆ. "ಐದನೇ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಸೂಕ್ತ ಆಯ್ಕೆಯಾಗುತ್ತಾರೆ ಯಾಕೆಂದರೆ ಶ್ರೇಯಸ್ ಐಯ್ಯರ್ ಆಡುತ್ತಿಲ್ಲ. ಶುಬ್ಮನ್ ಗಿಲ್ ಐನದೇ ಕ್ರಮಾಂಕದಲ್ಲಿ ಆಡಬಹುದಾ ಎಂದು ಪ್ರಶ್ನೆಗಳು ಏಳುತ್ತಿವೆ. ನನ್ನ ಪ್ರಕಾರ ಸೂಕ್ರ ಕ್ರಮಾಂಕ್ಕೆ ಸರಿಯಾದ ಆಟಗಾರನ ಅಗತ್ಯವಿದೆ. ಐದನೇ ಕ್ರಮಾಂಕದಲ್ಲಿ ಆಡುವಾದ ಚೆಂಡು ಹೆಚ್ಚಾಗಿ ತಿರುವು ಪಡೆಯುತ್ತದೆ. ಅಂಥಾ ಸಂದರ್ಭದಲ್ಲಿ ಸ್ಪಿನ್‌ಗೆ ಉತ್ತಮವಾಗಿ ಆಡುವ ಆಟಗಾರನ ಅಗತ್ಯವಿದೆ. ಹಾಗಾಗಿ ಆ ಕ್ರಮಾಂಕಕ್ಕೆ ಸೂರ್ಯಕುಮಾರ್ ಯಾದವ್ ಉತ್ತಮ. ನನ್ನ ಪ್ರಕಾರ ಇದು ಅತ್ಯಂತ ಸ್ಪಷ್ಟವಾಗಿದೆ" ಎಂದಿದ್ದಾರೆ ರವಿ ಶಾಸ್ತ್ರಿ.

ವಿಕೆಟ್ ಕೀಪರ್ ಆಯ್ಕೆ ಬಗ್ಗೆಯೂ ಶಾಸ್ತ್ರಿ ಹೇಳಿಕೆ
ಇನ್ನು ಟೀಮ್ ಇಂಡಿಯಾದ ವಿಕೆಟ್ ಕೀಪರ್ ಆಗಿ ಯಾರು ಕಣಕ್ಕಿಳಿಯಬೇಕು ಎಂಬ ವಿಚಾರವಾಗಿಯೂ ರವಿ ಶಾಸ್ತ್ರಿ ತನ್ನ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ಕೆಎಲ್ ಭರತ್ ಹಾಗೂ ಇಶಾನ್ ಕಿಶನ್ ಮಧ್ಯೆ ಯಾರಿಗೆ ಅವಕಾಶ ನೀಡಬೇಕು ಎಂಬ ವಿಚಾರವಾಗಿ ಭಾರತ ತಂಡದಲ್ಲಿ ಗುಣಮಟ್ಟದ ಸ್ಪಿನ್ನರ್‌ಗಳು ಇರುವ ಕಾರಣ ಗುಣಮಟ್ಟದ ವಿಕೆಟ ಕೀಪರ್‌ನ ಅಗತ್ಯವಿದೆ ಎಂದಿದ್ದಾರೆ. ಎದುರಾಳಿ ತಂಡದಲ್ಲಿ ಅದ್ಭುತ ಆಟಗಾರರಿದ್ದು ಅವರನ್ನು ಸಾಧ್ಯವಾದಷ್ಟು ಬೇಗನೆ ಔಟ್ ಮಾಡಬೇಕು. ಅವರನ್ನು ಔಟ್ ಮಾಡುವ ಅವಕಾಶವನ್ನು ಕೈಚೆಲ್ಲಿದರೆ ಅದು ತಂಡಕ್ಕೆ ಬಹಳ ದುಬಾರಿಯಾಗಲಿದೆ ಎಂದಿದ್ದಾರೆ ರವಿ ಶಾಸ್ತ್ರಿ.


Click it and Unblock the Notifications












