ಅಪಾಯದಲ್ಲಿದೆ ವಿರಾಟ್ ಕೊಹ್ಲಿ ದಾಖಲೆ, ಈ ರೆಕಾರ್ಡ್ ಸನಿಹದಲ್ಲಿ ಸಿಕಂದರ್ ರಾಜ್
ಜಿಂಜಾಬ್ವೆ ತಂಡದ ಸ್ಟಾರ್ ಆಟಗಾರ ಸಿಕಂದರ್ ರಾಜ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಇವರು ಟಿ20ಯ ನಂಬರ್ ಒನ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರ ಒಂದು ದಾಖಲೆಯನ್ನು ಅಳಿಸಿದ್ದು, ಈಗ ವಿರಾಟ್ ಕೊಹ್ಲಿಯ ದಾಖಲೆಯ ಮೇಲೆ ಕಣ್ಣು ನೆಟ್ಟಿದ್ದಾರೆ.
ಜಿಂಬಾಬ್ವೆಯ ಸಿಕಂದರ್ ರಜಾ ಅವರು ಅಫ್ಘಾನಿಸ್ತಾನದ ಮೊಹಮ್ಮದ್ ನಬಿ 109 ಪಂದ್ಯಗಳಲ್ಲಿ ಮಾಡಿದ ದಾಖಲೆಯನ್ನು ಕೇವಲ 78 ಪಂದ್ಯಗಳಲ್ಲಿ ಮಾಡಿ ಮುಗಿಸಿದ್ದಾರೆ. ಸಿಕಂದರ್ ರಜಾ T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು 'ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಗಳನ್ನು ಗೆದ್ದ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಈಗ ವಿರಾಟ್ ಕೊಹ್ಲಿಯ ಅವರ ಸಾಧನೆಯನ್ನು ತಲುಪಲು ಅವರಿಗೆ ಇನ್ನೂ ಒಂದೇ ಪಂದ್ಯ ಶ್ರೇಷ್ಠ ಪ್ರಶಸ್ತಿಯ ಅಗತ್ಯವಿದೆ.

ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಜಿಂಬಾಬ್ವೆ ತಂಡ ಐರ್ಲೆಂಡ್ ತಂಡವನ್ನು 1 ವಿಕೆಟ್‌ನಿಂದ ಸೋಲಿಸಿತು. ನಾಯಕ ಸಿಕಂದರ್ ರಜಾ ಜಿಂಬಾಬ್ವೆ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುರಿ ಬೆನ್ನಟ್ಟಿದ ತಂಡದ ಪರ ಸಿಕಂದರ್ 42 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡ 65 ರನ್ ಗಳಿಸಿದರು. ಈ ಅವಧಿಯಲ್ಲಿ ಅವರ ಬ್ಯಾಟಿಂಗ್ ಸರಾಸರಿ 154.76 ಆಗಿತ್ತು. ಇದಕ್ಕೂ ಮೊದಲು ಭರ್ಜರಿ ಬೌಲಿಂಗ್ ಮಾಡಿ 3 ವಿಕೆಟ್ ಪಡೆದಿದ್ದರು. ಅಲ್ಲದೆ 4 ಓವರ್ಗಳಲ್ಲಿ ಕೇವಲ 28 ರನ್‌ಗಳನ್ನು ನೀಡಿದ್ದರು. ಈ ಅದ್ಭುತ ಆಲ್ ರೌಂಡ್ ಪ್ರದರ್ಶನಕ್ಕಾಗಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಈ ಮೂಲಕ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14ನೇ ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದ ಸಾಧನೆಯನ್ನು ಮಾಡೊಇದರು. ಇದರೊಂದಿಗೆ ಸಿಕಂದರ್ ಅವರು ಅಫ್ಘಾನಿಸ್ತಾನದ ಮೊಹಮ್ಮದ್ ನಬಿ ದಾಖಲೆಯನ್ನು ಸರಿಗಟ್ಟಿದರು. T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ನಬಿ 14 ಬಾರಿ ಪ್ಲೇಯರ್ ಆಫ್ ದಿ ಮ್ಯಾಚ್' ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ನಬಿ 109 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ಟಿ20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ದಾಖಲೆಯು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಅವರು ಇದುವರೆಗೆ 115 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 15 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ.
ಸಿಕಂದರ್ ರಜಾ ಈಗ ಜಂಟಿಯಾಗಿ ಅತಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. 58 ಪಂದ್ಯಗಳಲ್ಲಿ 13 'ಪಂದ್ಯ ಶ್ರೇಷ್ಠ' ಪ್ರಶಸ್ತಿಗಳನ್ನು ಗೆದ್ದಿರುವ ಭಾರತದ ಬ್ಯಾಟ್ಸ್‌ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಜಿಂಬಾಬ್ವೆ ನಾಯಕ ಹಿಂದಿಕ್ಕಿದ್ದಾರೆ.

T20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ಪಂದ್ಯ ಶ್ರೇಷ್ಠ ಪಡೆದ ಆಟಗಾರರು
ವಿರಾಟ್ ಕೊಹ್ಲಿ - 15 (115 ಪಂದ್ಯಗಳು)
ಸಿಕಂದರ್ ರಜಾ - 14 (78 ಪಂದ್ಯಗಳು)
ಮೊಹಮ್ಮದ್ ನಬಿ - 14 (109 ಪಂದ್ಯಗಳು)
ಸೂರ್ಯಕುಮಾರ್ ಯಾದವ್ - 13 (58 ಪಂದ್ಯಗಳು)
ರೋಹಿತ್ ಶರ್ಮಾ - 12 (148 ಪಂದ್ಯಗಳು).
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications