Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಪಾಕಿಸ್ತಾನ ಹೈ-ವೋಲ್ಟೇಜ್ ಪಂದ್ಯದ ಟಿಕೆಟ್‌ಗಳು ಅನ್‌ಸೋಲ್ಡ್; ಖಾಲಿ ಕುರ್ಚಿಗಳದ್ದೆ ಕಾರುಬಾರು

ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯವೆಂದರೆ, ಅಲ್ಲಿ ಕ್ರಿಕೆಟ್ ಅಭಿಮಾನಿಗಳ ಕಣ್ಣಿಗೆ ಹಬ್ಬವಿದ್ದಂತೆ. ಈ ಹೈ-ವೋಲ್ಟೇಜ್ ಪಂದ್ಯ ವೀಕ್ಷಿಸಲು ದೇಶ-ವಿದೇಶಗಳಿಂದ ಬೇಡಿಕೆ ಇರುತ್ತದೆ.

ಈ ಹಿಂದೆ ಉಭಯ ತಂಡಗಳ ನಡುವಿನ ಪಂದ್ಯಗಳೇ ಇದಕ್ಕೆ ಸಾಕ್ಷಿಯಾಗಿದೆ. ಅದರಲ್ಲಿಯೂ ಈ ಎರಡೂ ತಂಡಗಳು ಏಷ್ಯಾಕಪ್ ಮತ್ತು ವಿಶ್ವಕಪ್‌ನಂತಹ ಟೂರ್ನಿಗಳಲ್ಲಿ ಮಾತ್ರ ಭಾಗವಹಿಸುತ್ತವೆ ಎಂಬುದನ್ನು ಮರೆಯಬಾರದು.

Silence Surrounds High-voltage India vs Pakistan Asia Cup Match As Stadium Tickets Goes Unsold


ಆದರೆ, ಕೊಲೊಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದ ಸಾಮರ್ಥ್ಯ 35,000 ಇದ್ದರೂ, ಅದರಲ್ಲಿ ಬರೋಬ್ಬರಿ 15 ಸಾವಿರ ಟಿಕೆಟ್‌ಗಳು​ ಮಾರಾಟವಾಗದೇ ಉಳಿದಿರುವುದು ಅಚ್ಚರಿ ಮೂಡಿಸಿದೆ.

ಭಾರತ ಮತ್ತು ಪಾಕಿಸ್ತಾನ ಪಂದ್ಯ ವೀಕ್ಷಿಸಲು ಇಡೀ ಜಗತ್ತೇ ಕಾದು ಕುಳಿತಿರುತ್ತದೆ. ಆದರೆ, ಶ್ರೀಲಂಕಾದಲ್ಲಿ ನಡೆಯುತ್ತಿರುವ 2023ರ ಏಷ್ಯಾ ಕಪ್​​​​ನಲ್ಲಿ ಭಾರೀ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳಪೆ ವೇಳಾಪಟ್ಟಿ ಮತ್ತು ಮಳೆಯ ಕಾರಣದಿಂದ ಸೆಪ್ಟೆಂಬರ್​ 10ರಂದು ನಡೆದ ಸೂಪರ್ 4 ಪಂದ್ಯದಲ್ಲಿ ಮೈದಾನವು ಖಾಲಿ ಖಾಲಿಯಾಗಿತ್ತು. ಬರೋಬ್ಬರಿ 15000 ಟಿಕೆಟ್​​ಗಳು ಮಾರಾಟವಾಗಿಲ್ಲ.

Silence Surrounds High-voltage India vs Pakistan Asia Cup Match As Stadium Tickets Goes Unsold

ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಿಗದಿಯಾದ ಈ ಪಂದ್ಯ ಪೂರ್ಣಗೊಳ್ಳುವ ಸಾಧ್ಯತೆ ತೀರಾ ಕಡಿಮೆ. ಹವಾಮಾನ ಮುನ್ಸೂಚನೆಯಂತೆ ಭಾನುವಾರ ಮತ್ತು ಸೋಮವಾರ (ಪಂದ್ಯದ ದಿನ ಮತ್ತು ಮೀಸಲು ದಿನ) ಶೇ.90ರಷ್ಟು ಮಳೆಯಾಗುವ ಸಾಧ್ಯತೆ ಇದೆ. ಇದೇ ಟಿಕೆಟ್​​ಗಳು ಮಾರಾಟವಾಗದೆ ಉಳಿಯಲು ಕಾರಣವಾಗಿದೆ.

ಬಿಸಿಸಿಐ ಮತ್ತು ಪಿಸಿಬಿ ನಡುವಿನ ಗೊಂದಲವೇ ಈ ಸಮಸ್ಯೆಗೆ ಕಾರಣ ಎಂದು ಹೇಳಲಾಗಿದೆ. ಈ ಪಂದ್ಯಕ್ಕೂ ಎರಡು ನಾಲ್ಕೈದು ದಿನಗಳ ಹಿಂದೆ ಸೂಪರ್ 4 ಪಂದ್ಯ ಸ್ಥಳಾಂತರ ಆಗಬಹುದು, ರದ್ದಾಗಬಹುದು ಎಂಬ ಗೊಂದಲದಿಂದ ಅಭಿಮಾನಿಗಳು ಟಿಕೆಟ್‌ಗಳನ್ನು ಖರೀದಿಸಲು ಮುಂದೆ ಬರಲಿಲ್ಲ ಎಂದು ಹೇಳಲಾಗಿದೆ.

ಕೊಲಂಬೊದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ ಆರಂಭಗೊಂಡ ವೇಳೆ ಹವಾಮಾನವು ಶುಭ್ರವಾಗಿತ್ತು. ಆದರೆ ಹವಾಮಾನ ಇಲಾಖೆ ಸೂಚಿಸಿದಂತೆ, ಸಂಜೆ ಅಥವಾ ರಾತ್ರಿ ಜೋರು ಮಳೆಯಾಗುವ ಸಾಧ್ಯತೆ ಇತ್ತು. ಮುನ್ಸೂಚನೆಯಂತೆ ಭಾನುವಾರ ಸಂಜೆ ಧಾರಾಕಾರ ಮಳೆ ಸುರಿಯಿತು. ಸೋಮವಾರ ಬೆಳಿಗ್ಗೆ ವರುಣನ ಆರ್ಭಟ ಜೋರಾಗಿತ್ತು.

35 ಸಾವಿರ ಪ್ರೇಕ್ಷಕರ ಸಾಮರ್ಥ್ಯ ಹೊಂದಿರುವ ಆರ್ ಪ್ರೇಮದಾಸ ಕ್ರೀಡಾಂಗಣವು ಕಳಪೆ ವೇಳಾಪಟ್ಟಿಯಿಂದ ಮತ್ತು ನಿರಂತರ ಮಳೆ ಕಾರಣ ಶೇ.40ರಷ್ಟು ಟಿಕೆಟ್​ಗಳು ಉಳಿದಿವೆ ಎಂಬ ಮಾಹಿತಿ ಲಭ್ಯವಾಗಿದೆ.

Story first published: Monday, September 11, 2023, 17:54 [IST]
Other articles published on Sep 11, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+