Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Simon Doull On Pakistan: ಪಾಕಿಸ್ತಾನದಲ್ಲಿರುವುದು ಜೈಲಿನಲ್ಲಿದ್ದಂತೆ ಎಂದ ಮಾಜಿ ಕ್ರಿಕೆಟಿಗ

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗ ಮತ್ತು ವೀಕ್ಷಕ ವಿವರಣೆಗಾರ ಸೈಮನ್ ಡೌಲ್ ಪಾಕಿಸ್ತಾನವನ್ನು ಜೈಲಿಗೆ ಹೋಲಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ವೀಕ್ಷಕ ವಿವರಣೆಗಾರರಾಗಿ ಕೆಲಸ ಮಾಡುವ ಸಂದರ್ಭದಲ್ಲಿ ತಾವು ಎದುರಿಸಿದ ಮಾನಸಿಕ ಚಿತ್ರಹಿಂಸೆಯ ಬಗ್ಗೆ ಮಾತನಾಡಿದ್ದಾರೆ. ಪಾಕಿಸ್ತಾನ ಸೂಪರ್ ಲೀಗ್ ಸಂದರ್ಭದಲ್ಲಿ ಬಾಬರ್ ಅಜಂ ನಿಧಾನಗತಿಯ ಬ್ಯಾಟಿಂಗ್‌ ಅನ್ನು ಟೀಕಿಸುವ ಮೂಲಕ ಸುದ್ದಿ ಮಾಡಿದ್ದರು.

ಸೈಮನ್ ಡೌಲ್ ಸದ್ಯ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಕಾಮೆಂಟೇಟರ್ ಆಗಿ ಕೆಲಸ ಮಾಡುತ್ತಿದ್ದಾರೆ. ಪೇಶಾವರ್ ಝಲ್ಮಿ ನಾಯಕ ಬಾಬರ್ ಅಜಮ್ ಅಗ್ಗೆ ಟೀಕೆ ಮಾಡಿದ ಬಳಿಕ ಅನುಭವಿಸಿದ ಮಾನಸಿಕ ಹಿಂಸೆಯ ಕುರಿತು ಮಾತನಾಡಿದರು. ಅಜಮ್ ಬಗ್ಗೆ ಟೀಕೆ ಮಾಡಿದ ಬಳಿಕ ಅಭಿಮಾನಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಲು ಹೋಟೆಲ್ ಹೊರಗಡೆ ಕಾಯುತ್ತಿದ್ದರು ಎಂದು ಡೌಲ್ ಹೇಳಿದರು.

Simon Doull Compare Pakistan To Jail

ಅಭಿಮಾನಿಗಳ ಗುಂಪನ್ನು ನೋಡಿದ ಬಳಿಕ ಅವರು ಊಟ ಮಾಡಲು ಸಹ ಹೋಗಿರಲಿಲ್ಲ ಎನ್ನುವ ವಿಚಾರವನ್ನು ಬಹಿರಂಗಪಡಿಸಿದರು. ದೇಶದಿಂದ ಹೊರಬರಲು ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸಿದರು. ಸೈಮನ್ ಡೌಲ್ ಯಾವಾಗಲೂ ವಿವಾದಾತ್ಮಕ ಹೇಳಿಕೆ ಮೂಲಕ ಆಗಾಗ್ಗೆ ಸುದ್ದಿಯಾಗುತ್ತಿರುತ್ತಾರೆ.

ಪಾಕಿಸ್ತಾನದಲ್ಲಿರುವುದು ಜೈಲಿನಲ್ಲಿದ್ದಂತೆ

ಜಿಯೋ ನ್ಯೂಸ್ ಜೊತೆ ಮಾತನಾಡುವ ಸಂದರ್ಭದಲ್ಲಿ ಪಾಕಿಸ್ತಾನದಲ್ಲಿ ಆದ ಕಹಿ ಅನುಭವವನ್ನು ಬಿಚ್ಚಿಟ್ಟರು. "ಪಾಕಿಸ್ತಾನದಲ್ಲಿ ವಾಸಿಸುವುದು ಜೈಲಿನಲ್ಲಿ ವಾಸಿಸುವಂತಿದೆ. ಬಾಬರ್ ಅಜಮ್ ಅಭಿಮಾನಿಗಳು ನನಗಾಗಿ ಕಾಯುತ್ತಿದ್ದರಿಂದ ನನಗೆ ಹೊರಗೆ ಹೋಗಲು ಸಾಧ್ಯವಾಗಲಿಲ್ಲ. ನಾನು ಅನೇಕ ದಿನ ಆಹಾರವಿಲ್ಲದೆಯೇ ಹೋಟೆಲ್‌ನಲ್ಲಿ ಇದ್ದೆ. ಮಾನಸಿಕವಾಗಿ ತುಂಬಾ ಕಿರುಕುಳ ಅನುಭವಿಸಿದ್ದೇನೆ, ಆದರೆ ದೇವರ ದಯೆಯಿಂದ ನಾನು ಹೇಗಾದರೂ ತಪ್ಪಿಸಿಕೊಂಡು ಬರುವಂತಾಯಿತು" ಎಂದು ಹೇಳಿದರು.

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ವಿರುದ್ಧದ ಪಂದ್ಯದಲ್ಲಿ ಬಾಬರ್ ಅಜಮ್ ಶತಕವನ್ನು ಗಳಿಸಲು ನಿಧಾನವಾಗಿ ಬ್ಯಾಟಿಂಗ್ ಮಾಡಿದರು ಎಂದು ಡೌಲ್ ಟೀಕಿಸಿದ್ದರು. ಬಾಬರ್ ಅಜಂ 65 ಎಸೆತಗಳಲ್ಲಿ 115 ರನ್ ಗಳಿಸಿದ್ದರು. 83 ರನ್‌ಗಳಿಂದ 100 ರನ್ ತಲುಪಲು 14 ಎಸೆತಗಳನ್ನು ತೆಗೆದುಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಅವರು, ಬಾಬರ್ ತಂಡಕ್ಕಿಂತ ಹೆಚ್ಚಾಗಿ ವೈಯಕ್ತಿಕ ದಾಖಲೆಗಾಗಿ ಆಡುತ್ತಾರೆ ಎಂದಿದ್ದರು.

Simon Doull Compare Pakistan To Jail

ಕೊಹ್ಲಿಯನ್ನು ಟೀಕಿಸಿದ್ದ ಸೈಮನ್ ಡೌಲ್

ಸೈಮನ್ ಡೌಲ್ ಇತ್ತೀಚೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟರ್ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 44 ಎಸೆತಗಳಲ್ಲಿ 61 ರನ್ ಗಳಿಸುವ ಸಮಯದಲ್ಲಿ 42 ರಿಂದ 50 ರನ್ ಗಳಿಸಲು 10 ಎಸೆತಗಳನ್ನು ತೆಗೆದುಕೊಂಡಿದ್ದಕ್ಕಾಗಿ ಟೀಕಿಸಿದರು. ಕೊನೆಯ ಎಸೆತದವರೆಗೂ ರೋಚಕವಾಗಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ 1 ವಿಕೆಟ್‌ನಿಂದ ಪಂದ್ಯವನ್ನು ಗೆದ್ದುಕೊಂಡಿತು.

"42 ರಿಂದ 50 ರವರೆಗೆ ಅವರು 10 ಎಸೆತಗಳನ್ನು ತೆಗೆದುಕೊಂಡರು. ಅವರು ತಮ್ಮ ವೈಯಕ್ತಿಕ ಮೈಲಿಗಲ್ಲುಗಳ ಬಗ್ಗೆ ಕಾಳಜಿ ವಹಿಸುತ್ತಾರೆ. ಟಿ20 ಮಾದರಿಯಲ್ಲಿ ಅದಕ್ಕೆ ಅವಕಾಶ ಇಲ್ಲ ಎಂದು ನಾನು ಭಾವಿಸುತ್ತೇನೆ" ಎಂದಿದ್ದರು. ಡೌಲ್ ಈ ಹೇಳಿಕೆಗೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಕೊಹ್ಲಿ ಸ್ಪಿನ್ನರ್ ಗಳಿಗೆ ನಿಧಾನಗತಿಯಲ್ಲಿ ಆಡುತ್ತಾರೆ, ವೈಯಕ್ತಿಕ ದಾಖಲೆಗಾಗಿ ಅವರು ಆಡಿಲ್ಲ ಎಂದು ಅಭಿಮಾನಿಗಳು ಡೌಲ್‌ಗೆ ತರಾಟೆಗೆ ತೆಗೆದುಕೊಂಡರು.

Story first published: Thursday, April 13, 2023, 18:56 [IST]
Other articles published on Apr 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+