ಕ್ರಿಕೆಟ್ ದೇವರ ಹೊಸ ಅವತಾರ ಕಂಡು ಫ್ಯಾನ್ಸ್ ಫುಲ್ ಫಿದಾ!
ಮುಂಬೈ, ಏಪ್ರಿಲ್ 03: 'ಕ್ರಿಕೆಟ್ ದೇವರು' ಸಚಿನ್ ತೆಂಡೂಲ್ಕರ್ ಅವರ ಹೊಸ ಅವತಾರ ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ. ಹಿನ್ನಲೆ ಗಾಯಕ ಸೋನು ನಿಗಮ್ ಜೊತೆ ಸೇರಿ ಸಚಿನ್ ಅವರು ಹಾಡೊಂದಕ್ಕೆ ದನಿಗೂಡಿಸಿದ್ದಾರೆ.
9ನೇ ಆವೃತ್ತಿಯ 'ಇಂಡಿಯನ್ ಐಡಲ್' ಗ್ರಾಂಡ್ ಫಿನಾಲೆಗಾಗಿ ಈ ಹಾಡು ರಚಿಸಲಾಗಿತ್ತು. ಈ ಹಾಡಿಗೆ ಸೋನು ನಿಗಮ್ ಅವರ ಜತೆಗೆ ದನಿಗೂಡಿಸಲು ಸಚಿನ್ ಸಿದ್ಧರಾದರು.
'ಕ್ರಿಕೆಟ್ ವಾಲಿ ಬೀಟ್ ಪೆ!' ಎಂಬ ಹಾಡಿಗೆ ದನಿ ನೀಡಿರುವ ಸಚಿನ್ ಅವರು ಅಭಿಮಾನಿಗಳ ಮನ ಗೆದ್ದಿದ್ದು, ಹಾಡು ಈಗ ಸೂಪರ್ ಹಿಟ್ ಆಗಿದೆ.
ಸಚಿನ್ ಅವರ ಹೊಚ್ಚ ಹೊಸ ಇನ್ನಿಂಗ್ಸ್ ನ ಭಾಗವಾಗಿರುವುದಕ್ಕೆ ನಾನು ಅತ್ಯಂತ ಖುಷಿ ಪಡುತ್ತೇನೆ, 'ಕ್ರಿಕೆಟ್ ವಾಲಿ ಬೀಟ್' ಹಾಡಿಗೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಸಚಿನ್ ಅವರ ಕರಾರ್ ವಾಕ್ ಗಾಯನಕ್ಕೆ ನಾನು ತಲೆಗದೂಗಿದೆ. ಸಚಿನ್ ಅವರಿಗಿರುವ ಕೆಲಸದ ಮೇಲಿನ ಶ್ರದ್ಧೆ, ಉತ್ಸಾಹ ಅನುಕರಣೀಯ ಎಂದು ಸೋನು ನಿಗಮ್ ಪ್ರತಿಕ್ರಿಯಿಸಿದ್ದಾರೆ.

ಸೋನು ಹಾಗೂ ಸಚಿನ್
ನಿಜಕ್ಕೂ ಸಚಿನ್ ಅವರದ್ದು ನೈಜ ಗಾಯನ. ನಾವು ದನಿ ಸರಿಪಡಿಸಲು ಪಿಚ್ ಕರೆಕ್ಟರ್ ಬಳಸಿಲ್ಲ. ಸರಿಯಾದ ದನಿ(ಸುರ್) ಯಲ್ಲಿ ಬಿಂದಾಸ್ ಆಗಿ ಅವರು ಹಾಡುತ್ತಿದ್ದರೆ ನನಗೆ ಇನ್ನಷ್ಟು ಉತ್ಸಾಹ ಹೆಚ್ಚಾಯಿತು. ಹಾಡಿಗೆ ಬೇಕಾದ ಸಂತಸದ ಪಂಚ್ ನೀಡುವಲ್ಲಿ ಸಚಿನ್ ಅವರು ಸಾಥ್ ನೀಡಿದರು. ಜನಕ್ಕೆ ಈ ಹಾಡು ಇಷ್ಟ ಆಗಿರುವುದು ನಮ್ಮ ಸಂತೋಷವನ್ನು ಹೆಚ್ಚಿಸಿದೆ ಎಂದು ಸೋನು ಹೇಳಿದರು.
ನಾನು ಸ್ವಲ್ಪ ನರ್ವೆಸ್ : ಸಚಿನ್
ಹಾಡು ಹಾಡಲು ಸ್ಟುಡಿಯೋಗೆ ತೆರಳುವ ಮುನ್ನ ಸ್ವಲ್ಪ ಅಳುಕಿನಿಂದ ಇದ್ದೆ. ಮೇಕಪ್ ಮಾಡಿಸಿಕೊಳ್ಳುವಾಗಲೂ ಸ್ವಲ್ಪ ಟೆನ್ಷನ್ ಇತ್ತು. ಆದರೆ, ಸೋನು ಅವರ ಸಾಥ್ ನನಗೆ ಈ ಹೊಸ ಇನ್ನಿಂಗ್ಸ್ ನಲ್ಲಿ ಸುಲಭವಾಗಿ ಮುನ್ನುಗ್ಗಲು ಪ್ರೇರೇಪಿಸಿತು ಎಂದು ಸಚಿನ್ ಹೇಳಿದ್ದಾರೆ.
ಪ್ರೊಮೊ ಸಾಂಗ್
ತಮ್ಮ ಜೀವನಾಧಾರಿತ ಚಿತ್ರ 'ಸಚಿನ್: ಎ ಬಿಲಿಯನ್ ಡ್ರೀಮ್ಸ್' ಅನ್ನು ಪ್ರಚಾರ ಮಾಡುತ್ತಿರುವ ಸಚಿನ್ ಅವರು ಕ್ರಿಕೆಟ್ ವಾಲಿ ಬೀಟ್ ಪೆ ಸಾಂಗ್ ಡೌನ್ ಲೋಡ್ ಮಾಡಿಕೊಳ್ಳಿ ಎಂದು ಕೇಳಿಕೊಂಡಿದ್ದಾರೆ.
ಸಚಿನ್ ಹೊಸ ರೂಪ
ಕ್ರಿಕೆಟ್ ದೇವರು, ಬ್ಯಾಟಿಂಗ್ ಅಲ್ಲದೆ ಸಿಂಗಿಂಗ್ ಕೂಡಾ ಸಲೀಸಾಗಿ ಮಾಡಬಲ್ಲರು ಎಂದು ಕ್ರಿಕೆಟರ್ ರೋಹಿತ್ ಶರ್ಮ ಹೊಗಳಿದ್ದಾರೆ.
ಸಚಿನ್ ಹಾಗೂ ಸೋನು
ಕ್ರಿಕೆಟ್ ದೇವರು ಸಚಿನ್ ಹಾಗೂ ಸಂಗೀತದ ದೇವರು ಸೋನು ಇಬ್ಬರು ಒಟ್ಟಿಗೆ ಆಲ್ಬಂ ರಿಲೀಸ್ ಮಾಡುತ್ತಿರುವುದು ಜಗತ್ತಿನ ಅದ್ಭುತ ಕ್ಷಣ ಎಂದ ಅಭಿಮಾನಿಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications