Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಭ್ಯಾಸದ ವೇಳೆ ಸಿಕ್ಸರ್‌ಗಳ ಸುರಿಮಳೆಗರೆದ ಎಂಎಸ್ ಧೋನಿ: ವಿಡಿಯೋ

Sixes galore as MS Dhoni hits the nets for CSK ahead of IPL 2021-Video

ಚೆನ್ನೈ: 2020ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೀಸನ್‌ನಲ್ಲಿ ಅತೀ ಕೆಟ್ಟ ಪ್ರದರ್ಶನ ನೀಡಿ ಮುಖಭಂಗ ಅನುಭವಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್‌ ಈ ಬಾರಿ ಭರ್ಜರಿ ತಯಾರಿ ನಡೆಸುತ್ತಿದೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಈಗಾಗಲೇ ಸಿಎಸ್‌ಕೆ ಅಭ್ಯಾಸ ನಡೆಸುತ್ತಿದೆ.

ಅಭ್ಯಾಸ ನಿರತ ಸಿಎಸ್‌ಕೆ ತಂಡದ ಜೊತೆಗಿರುವ ನಾಯಕ ಎಂಎಸ್ ಧೋನಿ ಕೂಡ ಚೆನ್ನಾಗಿ ಬೆವರಿಳಿಸುತ್ತಿದ್ದಾರೆ. ನೆಟ್‌ ಅಭ್ಯಾಸ ವೇಳೆ ಧೋನಿ ಸಿಕ್ಸ್‌ ಮೇಲೆ ಸಿಕ್ಸ್ ಚಚ್ಚಿರುವ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಾರಿ ಧೋನಿ ಬ್ಯಾಟಿಂಗ್‌ ಬಗ್ಗೆ ಹೆಚ್ಚು ನಿರೀಕ್ಷೆ ಮೂಡಿಸಿದೆ.

ಅಭ್ಯಾಸದ ವೇಳೆ ಧೋನಿ ಭರ್ಜರಿ ಬ್ಯಾಟಿಂಗ್‌ ಮಾಡಿರುವ ವಿಡಿಯೋವನ್ನು ಸಿಎಸ್‌ಕೆ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. 14ನೇ ಆವೃತ್ತಿ ಐಪಿಎಲ್ ಏಪ್ರಿಲ್ 9ರಂದು ಆರಂಭಗೊಂಡರೆ ಮೇ 30ರಂದು ಫೈನಲ್‌ನೊಂದಿಗೆ ಕೊನೆಗೊಳ್ಳಲಿದೆ.

ಬೆಂಗಳೂರು, ಮುಂಬೈ, ಕೋಲ್ಕತ್ತಾ, ದೆಹಲಿ, ಅಹ್ಮದಾಬಾದ್, ಚೆನ್ನೈ ತಾಣಗಳಲ್ಲಿ ಈ ಬಾರಿಯ ಐಪಿಎಲ್ ಪಂದ್ಯಗಳು ನಡೆಯಲಿವೆ. ಆದರೆ ಯಾವುದೇ ತಂಡಗಳಿಗೆ ತವರು ತಾಣದಲ್ಲಿ ಪಂದ್ಯಗಳಿಲ್ಲ. ಏಪ್ರಿಲ್ 10ರಂದು ಎರಡನೇ ಪಂದ್ಯವಾಗಿ ಚೆನ್ನೈ ಸೂಪರ್ ಕಿಂಗ್ಸ್‌ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮೊದಲ ಪಂದ್ಯ ಆಡಲಿವೆ.

Story first published: Friday, March 12, 2021, 15:48 [IST]
Other articles published on Mar 12, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+