For Quick Alerts
ALLOW NOTIFICATIONS  
For Daily Alerts
 

1000 ಸಿಕ್ಸರ್ ಸಿಡಿಸಿದ ಕ್ರಿಸ್‌ಗೇಲ್: ಯಾವ ತಂಡದ ಪರ ಎಷ್ಟು?

Sixes Hit By Chris Gayle For Each Team In T20 Cricket: Stats Here

ಶೇಖ್ ಜಾಯೆದ್ ಸ್ಟೇಡಿಯಂನಲ್ಲಿ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್‌ಗೇಲ್ ಟಿ20 ಕ್ರಿಕೆಟ್‌ನಲ್ಲಿ ಮತ್ತೊಂದು ಮೈಲಿಗಲ್ಲು ತಲುಪಿದರು. ಈಗಾಗಲೇ ಚುಟುಕು ಕ್ರಿಕೆಟ್‌ನಲ್ಲಿ ಅನೇಕ ದಾಖಲೆಗಳ ಒಡೆಯನಾಗಿರುವ ಕ್ರಿಸ್‌ಗೇಲ್ ಬರೋಬ್ಬರಿ 1000 ಸಿಕ್ಸರ್‌ಗಳ ಸರದಾರನಾಗಿದ್ದಾನೆ.

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದ ಗೇಲ್ 19ನೇ ಓವರ್‌ನಲ್ಲಿ ಕಾರ್ತಿಕ್ ತ್ಯಾಗಿ ಬೌಲಿಂಗ್‌ನಲ್ಲಿ ವಿಶ್ವದಾಖಲೆಯ 1000ನೇ ಟಿ20 ಸಿಕ್ಸರ್‌ ಸಿಡಿಸಿದ್ರು. ನಂತರದ ಓವರ್‌ನಲ್ಲಿ 1001ನೇ ಸಿಕ್ಸರ್ ಸಿಡಿಸಿದ ನಂತರ ಎಸೆತದಲ್ಲೇ ಜೊಫ್ರಾ ಆರ್ಚರ್‌ಗೆ 99ರನ್‌ಗೆ ವಿಕೆಟ್‌ ಒಪ್ಪಿಸಿದ್ರು.

63 ಎಸೆತಗಳಲ್ಲಿ 99 ರನ್‌ ಚಚ್ಚಿದ ಕ್ರಿಸ್‌ಗೇಲ್‌ ಇನ್ನಿಂಗ್ಸ್‌ನಲ್ಲಿ 8 ಭರ್ಜರಿ ಸಿಕ್ಸರ್‌ಗಳಿದ್ದವು. ಕಿಂಗ್ಸ್ ಇಲವೆನ್ ಪಂಜಾಬ್ ಈ ಪಂದ್ಯದಲ್ಲಿ ಸೋತರು ಕ್ರಿಸ್‌ಗೇಲ್ ದಾಖಲೆ ಮಾತ್ರ ಹಿಮಾಲಯ ಪರ್ವತದಂತೆ ಭಾಸವಾಗುತ್ತಿದೆ. ಹೀಗೆ ಟಿ20 ಕ್ರಿಕೆಟ್‌ನಲ್ಲಿ ಕ್ರಿಸ್‌ಗೇಲ್ 1000 ಸಿಕ್ಸರ್‌ಗಳನ್ನು ಯಾವ ತಂಡದ ಎಷ್ಟು ಸಿಡಿಸಿದ್ದಾರೆ ಬಾರಿಸಿದ್ದಾರೆ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ವಿಶೇಷ ಏನಪ್ಪಾ ಅಂದ್ರೆ ಗೇಲ್ ಅತಿ ಹೆಚ್ಚು ಸಿಕ್ಸರ್ ಸಿಡಿಸಿರುವುದು ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ.

ಆರ್‌ಸಿಬಿ ಪರ 91 ಪಂದ್ಯಗಳಲ್ಲಿ ಕ್ರಿಸ್‌ಗೇಲ್ ಭರ್ಜರಿ 263 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಇನ್ನುಳಿದಂತೆ ಯಾವ ತಂಡದ ಪರ ಎಷ್ಟು ಸಿಕ್ಸರ್ ಎಂಬುದು ಈ ಕೆಳಗಿದೆ.

ತಂಡ/ಸಿಕ್ಸರ್‌

ಆರ್‌ಸಿಬಿ 263

ಜಮೈಕಾ ತಲ್ಲವಾಸ್ 124

ವೆಸ್ಟ್ ಇಂಡೀಸ್ 105

ಕಿಂಗ್ಸ್ ಇಲವೆನ್ ಪಂಜಾಬ್ 84

ರಂಗ್‌ಪುರ್ ರೈಡರ್ಸ್ 60

ಸಾಮರ್ಸೆಟ್ 42

ಸೈಂಟ್ ಕಿಟ್ಸ್ ಮತ್ತು ಎನ್‌ಪಿ 38

ಸಿಡ್ನಿ ಥಂಡರ್ 31

ಬಲ್ಖ್ ಲೆಜೆಂಡ್ಸ್ 27

ಬರಿಸಲ್ ಬರ್ನರ್ಸ್‌ 26

ಜಮೈಕಾ 26

ಕೆಕೆಆರ್ 26

ಮೆಲ್ಬರ್ನ್ ರೆನೆಗೆಡ್ಸ್ 20

ಮ್ಯಾಟಾಬೆಲೆಲ್ಯಾಂಡ್ ಟಸ್ಕರ್ಸ್ 19

ವೆಸ್ಟ್ರನ್ ಆಸ್ಟ್ರೇಲಿಯಾ 17

ಕರಾಚಿ ಕಿಂಗ್ಸ್‌ 14

ಬರಿಸಲ್ ಬುಲ್ಸ್‌ 12

ಚಟ್ಟೋಗ್ರಾಮ್ ಚಾಲೆಂಜರ್ಸ್ 12

ಧಾಕಾ ಗ್ಲಾಡಿಯೇಟರ್ಸ್ 12

ಲಯನ್ಸ್‌ 12

ಚಿತ್ತಗಾಂಗ್ ವೀಕಿಂಗ್ಸ್ 10

ಜೋಝಿ ಸ್ಟಾರ್ಸ್ 8

ಲಾಹೋರ್ ಕ್ವಾಲಂಡರ್ಸ್ 8

ಸ್ಟ್ಯಾಂಡ್‌ಫೋರ್ಡ್ ಸೂಪರ್ ಸ್ಟಾರ್ಸ್ 5

ಪಿಸಿಎ ಮಾಸ್ಟರ್ಸ್ ಇಲೆವೆನ್ 0

ವೆಸ್ಟ್‌ ಇಂಡಿಯನ್ಸ್‌ 0

Story first published: Saturday, October 31, 2020, 9:39 [IST]
Other articles published on Oct 31, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+