Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರೀ ಎಡ್ಡೆ ಗೊಬ್ಬಿಯ: ಸೂರ್ಯಕುಮಾರ್ ಅಟಕ್ಕೆ ತುಳುವಿನಲ್ಲೇ ಕೆಎಲ್ ಶ್ಲಾಘನೆ: SKY ಮಡದಿಯ ಪ್ರತಿಕ್ರಿಯೆ ಏನ್‌ಗೊತ್ತಾ!

SKY Century: KL Rahul praises Suryakumar yadav in Tulu language, Devisha Shetty responds

ಶ್ರೀಲಂಕಾ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ನೀಡಿದ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನಕ್ಕೆ ಶ್ರೀಲಂಕಾ ತತ್ತರಿಸಿದೆ. ಟಿ20 ಮಾದರಿಯಲ್ಲಿ ಸೂರ್ಯಕುಮಾರ್ ಯಾದವ್ 3ನೇ ಶತಕ ಸಿಡಿಸಿ ಅಬ್ಬರಿಸಿದ್ದಾರೆ. ಈ ಮೂಲಕ ಚುಟುಕು ಮಾದರಿಯಲ್ಲಿ ತಮ್ಮ 360 ಡಿಗ್ರಿ ಆಟಕ್ಕೆ 2023ರಲ್ಲಿಯೂ ಅದ್ಭುತ ಆರಂಭ ದೊರೆತಿದೆ.

ಸೂರ್ಯಕುಮಾರ್ ಯಾದವ್ ಅವರ ಈ ಅಬ್ಬರದ ಇನ್ನಿಂಗ್ಸ್ ಮಧ್ಯೆ ಟೀಮ್ ಇಂಡಿಯಾದ ಮತ್ತೋರ್ವ ಆಟಗಾರ ಕೆಎಲ್ ರಾಹುಲ್ ಇನ್‌ಸ್ಟಾಗ್ರಾಂ ಸ್ಟೋರಿ ಅಭಿಮಾನಿಗಳ ಗಮನ ಸೆಳೆದಿದೆ. ಸೂರ್ಯಕುಮಾರ್ ಯಾದವ್ ಆಬ್ಬರದ ಆಟಕ್ಕೆ ಕೆಎಲ್ ರಾಹುಲ್ ತುಳುವಿನಲ್ಲಿಯೇ ಶ್ಲಾಘಿಸಿ ಮೆಚ್ಚುಗೆ ಸೂಚಿಸಿದ್ದಾರೆ. ರಾಹುಲ್ ಸ್ಟೋರಿಯನ್ನು ಹಂಚಿಕೊಂಡಿರುವ ಸೂರ್ಯಕುಮಾರ್ ಯಾದವ್ ಪತ್ನಿ ದೇವಿಶಾ ಶೆಟ್ಟಿ ಕೂಡ ತುಳುವಿನಲ್ಲಿ ನೀಡಿರುವ ಪ್ರತಿಕ್ರಿಯೆ ತುಳುವರ ಹೃದಯ ಗೆದ್ದಿದೆ.

ತುಂಬಾ ಚೆನ್ನಾಗಿ ಆಡಿದ್ದೀಯ

ತುಂಬಾ ಚೆನ್ನಾಗಿ ಆಡಿದ್ದೀಯ

ಕೆಎಲ್ ರಾಹುಲ್ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೂರ್ಯಕುಮಾರ್ ಯಾದವ್ ಶತಕದ ಬಳಿಕ ಫೋಟೋ ಹಂಚಿಕೊಂಡು ಫೋಟೊ ಜೊತೆಗೆ ಭಾರೀ ತುಳುವಿನಲ್ಲಿ "ಭಾರೀ ಎಡ್ಡೆ ಗೊಬ್ಬಿಯ" (ತುಂಬಾ ಚೆನ್ನಾಗಿ ಆಡಿದ್ದೀಯಾ) ಎಂದು ಬರೆದುಕೊಂಡಿದ್ದಾರೆ. ಬಳಿಕ ಈ ಸ್ಟೋರಿಗೆ ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿಯನ್ನು ಕೂಡ ಕೆಎಲ್ ರಾಹುಲ್ ಮೆನ್ಶನ್ ಮಾಡಿದ್ದಾರೆ.

ತುಳುವಿನಲ್ಲಿ ಸೂರ್ಯಕುಮಾರ್ ಪತ್ನಿ ಹೇಳಿದ್ದೇನು?

ತುಳುವಿನಲ್ಲಿ ಸೂರ್ಯಕುಮಾರ್ ಪತ್ನಿ ಹೇಳಿದ್ದೇನು?

ಇದಕ್ಕೆ ಸೂರ್ಯಕುಮಾರ್ ಯಾದವ್ ಮಡದಿ ಮಂಗಳೂರು ಮೂಲದ ದೇವಿಶಾ ಶೆಟ್ಟಿ ಕೂಡ ತುಳುವಿನಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ. ಕೆಎಲ್ ರಾಹುಲ್ ಸ್ಟೋರಿಯನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ದೇವಿಶಾ "ಚೂರು ತುಳು ಕಲ್ಪಾವೊಡು ನನ ಆರೆಗ್" (ಇನ್ನು ಅವರಿಗೂ ಸ್ವಲ್ಪ ತುಳು ಕಲಿಸಬೇಕು) ಎಂದು ಬರೆದುಕೊಂಡಿದ್ದಾರೆ.

ದಕ್ಷಿಣ ಕನ್ನಡ ಮೂಲದ ದೇವಿಶಾ ಶೆಟ್ಟಿ

ದಕ್ಷಿಣ ಕನ್ನಡ ಮೂಲದ ದೇವಿಶಾ ಶೆಟ್ಟಿ

ಸೂರ್ಯಕುಮಾರ್ ಪತ್ನಿ ದೇವಿಶಾ ಶೆಟ್ಟಿ ಕರ್ನಾಟಕದ ಕರಾವಳಿ ಮೂಲದವರು. ದಕ್ಷಿಣ ಕನ್ನಡ ಮೂಲದವರಾದ ದೇವಿಶಾ ಶೆಟ್ಟಿಯ ಹೆತ್ತವರು ಮುಂಬೈನಲ್ಲಿ ನೆಲೆನಿಂತು ಹೋಟೆಲ್ ಉದ್ಯಮದಲ್ಲಿ ಯಶಸ್ಸು ಗಳಿಸಿದ್ದಾರೆ. 2012ರಲ್ಲಿ ಕಾಲೇಜಿನಲ್ಲಿ ಪರಿಚಯವಾದ ಈ ಇಬ್ಬರು ಬಳಿಕ ಪ್ರೇಮಿಸಿ ಮದುವೆಯಾಗಿದ್ದಾರೆ. ಎಂಬಿಎ ಪದವೀಧರೆಯಾಗಿರುವ ದೇವಿಶಾ ನೃತ್ಯಪಟುವಾಗಿಯೂ ಸಾಧನೆ ಮಾಡಿದ್ದಾರೆ.

ಟಿ20Iನಲ್ಲಿ 3ನೇ ಶತಕ ಸಿಡಿಸಿದ ಸೂರ್ಯ

ಟಿ20Iನಲ್ಲಿ 3ನೇ ಶತಕ ಸಿಡಿಸಿದ ಸೂರ್ಯ

ಈ ಪಂದ್ಯದಲ್ಲಿ ಒಟ್ಟು 51 ಎಸೆತ ಎದುರಿಸಿದ ಸೂರ್ಯಕುಮಾರ್ ಯಾದವ್ 7 ಬೌಂಡರಿ ಹಾಗೂ 9 ಸಿಕ್ಸರ್ ಸಿಡಿಸಿ ಅಬ್ಬರಿಸಿದ್ದಾರೆ. 219ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿರುವ ಸೂರ್ಯ 112 ರನ್‌ಗಳಿಸಿ ಅಜೇಯವಾಗುಳಿದರು. ರಾಜ್‌ಕೋಟ್ ಮೈದಾನದಲ್ಲಿ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟಿದ ಸೂರ್ಯಕುಮಾರ್ ಕೇವಲ 45 ಎಸೆತದಲ್ಲಿ ಶತಕ ಪೂರ್ಣಗೊಳಿಸಿದ್ದಾರೆ. ಈ ಮೂಲಕ ಚುಟುಕು ಮಾದರಿಯಲ್ಲಿ ತಮ್ಮ ಮೂರನೇ ಶತಕ ಪೂರ್ಣಗೊಳಿಸಿದರು.

Story first published: Saturday, January 7, 2023, 22:11 [IST]
Other articles published on Jan 7, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+