ಭಾರತ-ಶ್ರೀಲಂಕಾ: ಮುಂದೂಡಲಾದ 2ನೇ ಟಿ20ಯ ವೇಳಾಪಟ್ಟಿ ಘೋಷಣೆ

ಕೊಲಂಬೋ: ಟೀಮ್ ಇಂಡಿಯಾದ ಆಲ್ ರೌಂಡರ್ ಕೃನಾಲ್ ಪಾಂಡ್ಯಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಶ್ರೀಲಂಕಾ ಪ್ರವಾಸದಲ್ಲಿರುವ ಭಾರತೀಯ ತಂಡದಲ್ಲಿ ಕೋವಿಡ್-19 ಪ್ರಕರಣ ಕಾರಣಿಸಿಕೊಂಡಿರುವುದರಿಂದ ಜುಲೈ 27ರಂದು ನಡೆಯಲಿದ್ದ ದ್ವಿತೀಯ ಟಿ20ಐ ಪಂದ್ಯವನ್ನು ಮುಂದೂಡಲಾಗಿದೆ. ಆದರೆ ಈ ಬೆಳವಣೆಗೆ ಇಡೀ ಭಾರತ ತಂಡಕ್ಕೆ ಎಚ್ಚರಿಕೆ ಕರೆಗಂಟೆ ನೀಡಿದೆ.
ಭಾರತೀಯ ತಂಡದಲ್ಲಿ ಕೊರೊನಾ ಪ್ರಕರಣ ಕಾಣಿಸಿಕೊಂಡಿರುವುದರಿಂದ ಇಡೀ ತಂಡ ಜುಲೈ 27ರಂದು ಆರ್‌ಟಿ-ಪಿಸಿಆರ್ ಪರೀಕ್ಷೆಗೆ ಒಳಗಾಗಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಟ್ವೀಟ್ ಮೂಲಕ ತಿಳಿಸಿದೆ.

ಮುಂದೂಡಲಾದ ಪಂದ್ಯ ಯಾವಾಗ?
ಮಾಹಿತಿಯ ಪ್ರಕಾರ ಜುಲೈ 27ರ ಮಂಗಳವಾರ ನಡೆಯಲಿದ್ದ ದ್ವಿತೀಯ ಟಿ20ಐ ಪಂದ್ಯ ಜುಲೈ 28ರ ಬುಧವಾರ ನಡೆಯಲಿದೆ. ತೃತೀಯ ಪಂದ್ಯ ಶುಕ್ರವಾರ ಅಂದರೆ ಜುಲೈ 30ರಂದು ನಡೆಯಲಿದೆ. ಇಂಗ್ಲೆಂಡ್‌ನಲ್ಲಿರುವ ಭಾರತೀಯ ತಂಡದಲ್ಲೂ ಕೋವಿಡ್ ಪಾಸಿಟಿವ್ ಪ್ರಕರಣ ಕಾಣಿಸಿಕೊಂಡಿದ್ದವು.

ಹೆಚ್ಚಿನವರಿಗೆ ಪಾಸಿಟಿವ್ ಬಂದರೆ?
ಸದ್ಯ ಭಾರತೀಯ ತಂಡದಲ್ಲಿ ಕೃನಾಲ್ ಪಾಂಡ್ಯಗೆ ಕೋವಿಡ್-19 ಪಾಸಿಟಿವ್ ಬಂದಿರುವುದು ವರದಿಯಾಗಿದೆ. ಇಡೀ ತಂಡಕ್ಕೆ ಕೋವಿಡ್-19 ಪರೀಕ್ಷೆ ನಡೆಸಿದಾಗ ತಂಡದ ಹೆಚ್ಚಿನವರಿಗೆ ಪಾಸಿಟಿವ್ ಬಂದರೆ ಉದ್ದೇಶಿತ ಟಿ20ಐ ಸರಣಿಗೆ ಅಡಚಣೆಯಾಗಲಿದೆ. ಈಗ ದ್ವಿತೀಯ ಟಿ20ಐ ಜುಲೈ 28ರಂದು ನಡೆಯಲಿದೆ ಎಂದು ಹೇಳಲಾಗಿದೆಯಾದರೂ ಈ ವೇಳಾಪಟ್ಟಿಯ ಮೇಲೆ ಇಡೀ ತಂಡದ ಕೋವಿಡ್-ಫಲಿತಾಂಶ ಪರಿಣಾಮ ಬೀರಲಿದೆ.

ದ್ವಿತೀಯ ಟಿ20ಐ ಪಂದ್ಯದ ಮಾಹಿತಿ
ಭಾರತ-ಶ್ರೀಲಂಕಾ ದ್ವಿತೀಯ ಟಿ20ಐ ಪಂದ್ಯ ಜುಲೈ 28ರ ಬುಧವಾರ ಕೊಲಂಬೋದಲ್ಲಿರುವ ಆರ್ ಪ್ರೇಮದಾಸ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 8 PMನಂತೆ ಪಂದ್ಯ ಶುರುವಾಗಲಿದೆ. ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಭಾರತ ಈಗಾಗಲೇ 1-0ಯ ಮುನ್ನಡೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications