Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2ನೇ ಏಕದಿನ ಪಂದ್ಯ: ಅಫ್ಘಾನಿಸ್ತಾನ ವಿರುದ್ಧ ಭರ್ಜರಿಯಾಗಿ ಗೆದ್ದ ಲಂಕಾ: ಸರಣಿ ಸಮಬಲ

ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೆಯ ಶ್ರೀಲಂಕಾ ಅಫ್ಘನ್ ಪಡೆಯನ್ನು ಭರ್ಜರಿಯಾಗಿ ಮಣಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಮೇಲುಗೈ ಸಾಧಿಸಿದ ಶ್ರೀಲಂಕಾ ತಂಡ ಸರಣಿಯ ಮೊದಲ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಭರ್ಜರಿಯಾಗಿ ಸೇಡು ತೀರಿಸಿಕೊಂಡಿದೆ. ಈ ಮೂಲಕ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ನಡೆಸಿದ ಶ್ರೀಲಂಕಾ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಅಗ್ರ ಕ್ರಮಾಂಕದ ನಾಲ್ವರು ಆಟಗಾರರು ಕೂಡ ಭರ್ಜರಿ ಪ್ರದರ್ಶನ ನೀಡಿದರು. ಅಲ್ಲದೆ ಮಧ್ಯಮ ಕ್ರಮಾಂಕದಿಂದಲೂ ಉಪಯುಕ್ತ ಕೊಡುಗೆ ಬಂದಿತು. ಹೀಗಾಗಿ ನಿಗದಿತ 50 ಓವರ್‌ಗಳಲ್ಲಿ ಶ್ರೀಲಂಕಾ ತಂಡ 6 ವಿಕೆಟ್ ಕಳೆದುಕೊಂಡು ಭರ್ಜರಿ 323 ರನ್‌ಗಳನ್ನು ಗಳಿಸಿತು. ಕುಸಲ್ ಮೆಂಡಿಸ್ ಹಾಗೂ ಕರುಣರತ್ನೆ ಅರ್ಧ ಶತಕ ಸಿಡಿಸಿದರೆ ಫತುಮ್ ನಿಸ್ಸಂಕ ಹಾಗೂ ಸಮರವಿಕ್ರಮ ಕ್ರಮವಾಗಿ 43 ಹಾಗೂ 44 ರನ್‌ಗಳನ್ನು ಗಳಿಸಿದರು.

SL vs AFG, 2nd ODI: Sri Lanka won 2nd ODI against Afghanistan by 132 runs

ಇನ್ನು ಶ್ರೀಲಂಕಾ ನೀಡಿದ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಅಫ್ಘನ್ ಪಡೆ ಮೊದಲ ವಿಕೆಟನ್ನು ಶೀಘ್ರವಾಗಿ ಕಳೆದುಕೊಂಡಿತು. ಆದರೆ ಎರಡನೇ ವಿಕೆಟ್‌ಗೆ ಜೊತೆಯಾದ ಇಬ್ರಾಹಿಮ್ ಜದ್ರಾನ್ ಹಾಗೂ ರಹ್ಮತ್ ಶಾ ನಿಧಾನವಾಗಿ ಚೇತರಿಕೆ ನೀಡುವ ಪ್ರಯತ್ನ ನಡೆಸಿದರು. ನಂತರ ಬಂದ ನಾಯಕ ಹಶ್ಮತುಲ್ಲಾ ಖಾನ್ ಕೂಡ ಉತ್ತಮ ಪ್ರದರ್ಶನ ನೀಡಿದರು. ಈ ಸಂದರ್ಭದಲ್ಲಿ ರನ್ ವೇಗ ಕುಂಟಿತವಾಗಿದ್ದು ಅಫ್ಘನ್ ದಾಂಡಿಗರ ಮೇಲೆ ಒತ್ತಡ ಹೆಚ್ಚಾಯಿತು.

ಈ ಮೂವರ ವಿಕೆಟ್ ಕಳೆದುಕೊಳ್ಳುತ್ತಿದ್ದಂತೆಯೇ ಅಫ್ಘಾನಿಸ್ತಾನದ ಉಳಿದ ಆಟಗಾರರು ಸುಲಭವಾಗಿ ಲಂಕಾ ಬೌಲರ್‌ಗಳಿಗೆ ವಿಕೆಟ್ ಒಪ್ಪಿಸಲು ಆರಂಭಿಸಿದರು. ಹೀಗಾಗಿ ಒಂದು ಹಣರದಲ್ಲಿ 143ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಅಫ್ಘನ್ ಪಡೆ 191 ರನ್‌ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ಮೂಲಕ 132 ರನ್‌ಗಳ ಬೃಹತ್ ಅಂತರದಿಂದ ಶ್ರೀಲಂಕಾಗೆ ಶರಣಾಯಿತು.

ಈ ಪಂದ್ಯದಲ್ಲಿ ಶ್ರೀಲಂಕಾ ಪರವಾಗಿ ವನಿಂದು ಹಸರಂಗ ಹಾಗೂ ಧನಂಜಯ ಡಿಸಿಲ್ವ ತಲಾ ಮೂರು ವಿಕೆಟ್ ಕಿತ್ತು ಮಿಂಚಿದರು. ಎರಡು ವಿಕೆಟ್ ದುಶ್ಮಂತ ಚಮೀರ ಪಾಲಾದರೆ ಮಥೀಶ ತೀಕ್ಷಣ ಹಾಗೂ ನಾಯಕ ದಾಸುನ್ ಶನಕಗೆ ಒಂದು ವಿಕೆಟ್ ದೊರೆಯಿತು. ಸರಣಿಯಲ್ಲಿ ಕೊನೆಯ ಒಂದು ಪಂದ್ಯ ಮಾತ್ರವೇ ಬಾಕಿಯಿದ್ದು ಆ ಪಂದ್ಯ ಈಗ ನಿರ್ಣಾತಕವನಿಸಿದೆ

ಶ್ರೀಲಂಕಾ ಆಡುವ ಬಳಗ: ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಸದೀರ ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ದಸುನ್ ಶನಕ (ನಾಯಕ), ವನಿಂದು ಹಸರಂಗ, ದುಷ್ಮಂತ ಚಮೀರ, ಮಹೀಶ್ ತೀಕ್ಷಣ, ಕಸುನ್ ರಜಿತ

ಬೆಂಚ್: ಏಂಜೆಲೊ ಮ್ಯಾಥ್ಯೂಸ್, ದುಶನ್ ಹೇಮಂತ, ಲಹಿರು ಕುಮಾರ, ಮತೀಶ ಪತಿರಣ, ಚಾಮಿಕ ಕರುಣರತ್ನ

ಅಫ್ಘಾನಿಸ್ತಾನ ಆಡುವ ಬಳಗ: ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಜದ್ರಾನ್, ರಹಮತ್ ಶಾ, ಹಶ್ಮತುಲ್ಲಾ ಶಾಹಿದಿ (ನಾಯಕ), ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರಾನ್, ಅಜ್ಮತುಲ್ಲಾ ಒಮರ್ಜಾಯ್, ಮುಜೀಬ್ ಉರ್ ರಹಮಾನ್, ನೂರ್ ಅಹ್ಮದ್, ಫಝಲ್ಹಕ್ ಫಾರೂಕಿ, ಫರೀದ್ ಅಹ್ಮದ್ ಮಲಿಕ್
ಬೆಂಚ್: ಅಬ್ದುಲ್ ರಹಮಾನ್, ರಿಯಾಜ್ ಹಸನ್, ಇಕ್ರಂ ಅಲಿಖಿಲ್

Story first published: Sunday, June 4, 2023, 18:18 [IST]
Other articles published on Jun 4, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+