Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SL vs AFG: ಏಕದಿನ ಕ್ರಿಕೆಟ್‌ನಲ್ಲಿ ಶುಭ್ಮನ್ ಗಿಲ್ ದಾಖಲೆ ಮುರಿದ ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್

ಶುಕ್ರವಾರ, ಜೂನ್ 2ರಂದು ಹಂಬಂಟೋಟಾದಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಆಲ್‌ರೌಂಡ್ ಪ್ರದರ್ಶನ ನೀಡಿ 1-0 ಮುನ್ನಡೆ ಸಾಧಿಸಿದೆ.

ಅಫ್ಘಾನಿಸ್ತಾನದ ಗೆಲುವಿನ ಮುಖ್ಯ ಪಾತ್ರ ವಹಿಸಿದ್ದು ಇಬ್ರಾಹಿಂ ಝದ್ರಾನ್. 21 ವರ್ಷದ ಈ ಆಟಗಾರ 98 ಎಸೆತಗಳಲ್ಲಿ ಅದ್ಭುತ 98 ರನ್ ಗಳಿಸಿ ಪ್ರವಾಸಿ ತಂಡವನ್ನು ಸಮಗ್ರ ಗೆಲುವಿಗೆ ಮಾರ್ಗದರ್ಶನ ನೀಡಿದರು.

SL vs AFG: Afghanistans Ibrahim Zadran Breaks Shubman Gills ODI Record

ವಿರಾಟ್ ಕೊಹ್ಲಿಯಂತೆ 18 ನಂಬರ್ ಜೆರ್ಸಿಯಲ್ಲಿ ಆಡುವ ಇಬ್ರಾಹಿಂ ಝದ್ರಾನ್, 11 ಬೌಂಡರಿಗಳು ಮತ್ತು 2 ಸಿಕ್ಸರ್ ನೆರವಿನಿಂದ ಸ್ಫೋಟಕ 98 ರನ್ ಗಳಿಸಿದರು. ಇದೇ ವೇಳೆ ತಮ್ಮ ನಾಲ್ಕನೇ ಏಕದಿನ ಶತಕವನ್ನು ತಪ್ಪಿಸಿಕೊಂಡರು. ಆದರೆ, ಇಬ್ರಾಹಿಂ ಜದ್ರಾನ್ ಅವರು ಭಾರತದ ಶುಭ್ಮನ್ ಗಿಲ್ ದಾಖಲೆಯನ್ನು ಮುರಿಯುವಲ್ಲಿ ಯಶಸ್ವಿಯಾದರು.

ಅಫ್ಘಾನಿಸ್ತಾನ ಟಾಸ್ ಗೆದ್ದ ಬಳಿಕ ಶ್ರೀಲಂಕಾ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಚರಿತ್ ಅಸಲಂಕಾ ಅವರ 91 ಮತ್ತು ಧನಂಜಯ ಡಿ ಸಿಲ್ವಾ ಅವರ 51 ರನ್‌ಗಳ ನೆರವಿನಿಂದ ಶ್ರೀಲಂಕಾ ಐವತ್ತು ಓವರ್‌ಗಳಲ್ಲಿ 10 ವಿಕೆಟ್‌ಗೆ 268 ರನ್ ಗಳಿಸಿತು. ಎರಡನೇ ಇನ್ನಿಂಗ್ಸ್‌ನಲ್ಲಿಯೂ ಸಹ ಬ್ಯಾಟಿಂಗ್‌ಗೆ ಸಹಕರಿಸುವ ಉತ್ತಮವಾದ ಟ್ರ್ಯಾಕ್‌ನಲ್ಲಿ ಈ ಮೊತ್ತ ಸಾಕಾಗಲಿಲ್ಲ.

ಅಫ್ಘಾನಿಸ್ತಾನ ಪರ ಫಝಲ್ಹಕ್ ಫಾರೂಕಿ ಮತ್ತು ಫರೀದ್ ಅಹ್ಮದ್ ತಲಾ ಎರಡು ವಿಕೆಟ್ ಪಡೆದರೆ, ಅಜ್ಮತುಲ್ಲಾ, ಮುಜೀಬ್ ಉರ್ ರೆಹಮಾನ್, ನೂರ್ ಅಹ್ಮದ್ ಮತ್ತು ಮೊಹಮ್ಮದ್ ನಬಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.

SL vs AFG: Afghanistans Ibrahim Zadran Breaks Shubman Gills ODI Record

269 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಪರ ಇಬ್ರಾಹಿಂ ಝದ್ರಾನ್ ಮತ್ತು ರಹಮಾನುಲ್ಲಾ ಗುರ್ಬಾಜ್ ಆರಂಭಿಕರಾಗಿ ಕ್ರೀಸ್‌ಗೆ ಆಗಮಿಸಿದರು. ರಹಮಾನುಲ್ಲಾ ಗುರ್ಬಾಜ್ ಕೇವಲ 14 ರನ್ ಗಳಿಸಿ ಔಟಾದರೆ, ಇಬ್ರಾಹಿಂ ಜದ್ರಾನ್ ಇನ್ನೊಂದು ತುದಿಯಲ್ಲಿ ಉತ್ತಮ ಬ್ಯಾಟಿಂಗ್ ಮುಂದುವರಿಸಿದರು.

ನಂತರ ಬಂದ ರಹಮತ್ ಶಾ ಜೊತೆ ಇಬ್ರಾಹಿಂ ಝದ್ರಾನ್ ಎರಡನೇ ವಿಕೆಟ್‌ಗೆ 146 ರನ್‌ಗಳ ಜೊತೆಯಾಟ ನೀಡಿದರು. ಕೊನೆಯಲ್ಲಿ ಮೊಹಮ್ಮದ್ ನಬಿ ಮತ್ತು ನಜಿಬುಲ್ಲಾ ಝದ್ರಾನ್ ಜೋಡಿ 3.1 ಓವರ್‌ಗಳು ಮತ್ತು ನಾಲ್ಕು ವಿಕೆಟ್‌ಗಳು ಉಳಿದಿರುವಾಗಲೇ ಅಫ್ಘಾನಿಸ್ತಾನಕ್ಕೆ ಗೆಲುವು ತಂದುಕೊಟ್ಟರು.

ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಟ್ರೋಫಿ ಗೆದ್ದ ನಂತರ ಭಾರತದಿಂದ ನೇರವಾಗಿ ಪಂದ್ಯಕ್ಕೆ ಆಗಮಿಸಿದ ಐಪಿಎಲ್ ಚಾಂಪಿಯನ್ ಮಥೀಶ ಪತಿರಾನ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು. ಆದರೆ, ಶ್ರೀಲಂಕಾ ವೇಗಿ 8.5 ಓವರ್‌ಗಳಲ್ಲಿ ಕೇವಲ ಒಂದು ವಿಕೆಟ್‌ಗೆ 66 ರನ್‌ಗಳನ್ನು ಬಿಟ್ಟುಕೊಟ್ಟರು. ಇದರಲ್ಲಿ 16 ರನ್‌ಗಳನ್ನು ವೈಡ್‌ಗಳ ರೂಪದಲ್ಲಿ ನೀಡಿದರು.

ಶುಭ್ಮನ್ ದಾಖಲೆ ಹಿಂದಿಕ್ಕಿದ ಇಬ್ರಾಹಿಂ ಝದ್ರಾನ್

ಇನ್ನು 98 ರನ್ ಗಳಿಸಿದ ಅಫ್ಘಾನಿಸ್ತಾನದ ಇಬ್ರಾಹಿಂ ಝದ್ರಾನ್ ಅವರು ಭಾರತದ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅವರ ದಾಖಲೆಯನ್ನು ಹಿಂದಿಕ್ಕಿದರು. ಇಬ್ರಾಹಿಂ ಝದ್ರಾನ್ ಏಕದಿನ ಕ್ರಿಕೆಟ್‌ನಲ್ಲಿ 500 ರನ್ ಗಳಿಸಿದ ಎರಡನೇ ವೇಗದ ಬ್ಯಾಟರ್ ಎನಿಸಿಕೊಂಡರು.

ಇಬ್ರಾಹಿಂ ಝದ್ರಾನ್ 9 ಇನ್ನಿಂಗ್ಸ್‌ಗಳಲ್ಲಿ 500 ರನ್‌ಗಳ ಹೆಗ್ಗುರುತನ್ನು ಸಾಧಿಸಿದರು. ಶುಭ್ಮನ್ ಗಿಲ್ 500 ರನ್ ಗಳಿಸಲು 10 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡಿದ್ದರು.

ಪಾಕಿಸ್ತಾನದ ಇಮಾಮ್-ಉಲ್-ಹಕ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ಇಬ್ರಾಹಿಂ ಝದ್ರಾನ್ ಅವರ ದಾಖಲೆಯು ಏಷ್ಯಾದ ಬ್ಯಾಟರ್‌ನಿಂದ ಜಂಟಿ-ವೇಗದ ದಾಖಲೆಯಾಗಿದೆ. ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ 500 ರನ್ ಗಳಿಸಿದ ದಾಖಲೆ ದಕ್ಷಿಣ ಆಫ್ರಿಕಾದ ಜನೆಮನ್ ಮಲಾನ್ ಅವರ ಹೆಸರಿನಲ್ಲಿದೆ.

Story first published: Saturday, June 3, 2023, 9:49 [IST]
Other articles published on Jun 3, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+