For Quick Alerts
ALLOW NOTIFICATIONS  
For Daily Alerts
 

SL vs AFG: ಶ್ರೀಲಂಕಾ ವಿರುದ್ಧ ಮೊದಲ 2 ಏಕದಿನ ಪಂದ್ಯಗಳಿಂದ ಹೊರಬಿದ್ದ ಅಫ್ಘಾನ್ ಸ್ಟಾರ್ ರಶೀದ್ ಖಾನ್

ಜೂನ್ 2ರಿಂದ ಹಂಬಂಟೋಟಾದಲ್ಲಿ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವೆ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ.

ಇದರ ಮಧ್ಯೆ ಅಫ್ಘಾನಿಸ್ತಾನ ತಂಡದ ಪ್ರಮುಖ ಸ್ಪಿನ್ನರ್ ರಶೀದ್ ಖಾನ್ ಬೆನ್ನಿನ ನೋವಿನ ಕಾರಣದಿಂದ ಶ್ರೀಲಂಕಾ ವಿರುದ್ಧದ ಮೊದಲ ಎರಡು ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಜೂನ್ 7ರಂದು ಹಂಬಂಟೋಟಾದಲ್ಲಿ ನಡೆಯಲಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯಕ್ಕೆ ಸ್ಟಾರ್ ಆಲ್‌ರೌಂಡರ್ ಮರಳುವ ನಿರೀಕ್ಷೆಯಿದೆ.

SL vs AFG: Afghanistan Star Spinner Rashid Khan Ruled Out Of The first 2 ODIs Against Sri Lanka

ಮೂರು ಪಂದ್ಯಗಳ ಅಂತಾರಾಷ್ಟ್ರೀಯ ಏಕದಿನ ಸರಣಿಯು ಶುಕ್ರವಾರ, ಜೂನ್ 2ರಿಂದ ಆರಂಭವಾಗಲಿದ್ದು, ಮೊದಲ ಏಕದಿನ ಹಂಬಂಟೋಟಾದಲ್ಲಿ ನಡೆಯಲಿದೆ. ಎರಡನೇ ಏಕದಿನ ಪಂದ್ಯವು ಜೂನ್ 4 ಭಾನುವಾರದಂದು ಅದೇ ಸ್ಥಳದಲ್ಲಿ ನಡೆಯಲಿದೆ.

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಮುಕ್ತಾಯದ ನಂತರ ಅಫ್ಘಾನಿಸ್ತಾನವು ಚಟ್ಟೋಗ್ರಾಮ್‌ನಲ್ಲಿ ಏಕೈಕ ಟೆಸ್ಟ್ ಆಡಲು ಬಾಂಗ್ಲಾದೇಶಕ್ಕೆ ಪ್ರಯಾಣ ಬೆಳೆಸಲಿದೆ.

ರಶೀದ್ ಖಾನ್ ಅವರ ಕೆಳ ಬೆನ್ನಿನ ಗಾಯದಿಂದಾಗಿ ಮೊಹಮ್ಮದ್ ನಬಿ, ಮುಜೀಬ್ ಉರ್ ರೆಹಮಾನ್ ಮತ್ತು ಯುವ ಸ್ಪಿನ್ ಪ್ರಾಡಿಜಿ ನೂರ್ ಅಹ್ಮದ್ ಅವರು ಸ್ಪಿನ್ ವಿಭಾಗದಲ್ಲಿ ಹೆಚ್ಚುವರಿ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗುತ್ತದೆ.

SL vs AFG: Afghanistan Star Spinner Rashid Khan Ruled Out Of The first 2 ODIs Against Sri Lanka

ಹಶ್ಮತುಲ್ಲಾ ಶಾಹಿದಿ ಅಫ್ಘಾನಿಸ್ತಾನ ತಂಡವನ್ನು ಮುನ್ನಡೆಸಲಿದ್ದಾರೆ. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ತನ್ನ ಹೇಳಿಕೆಯಲ್ಲಿ ರಶೀದ್ ಅವರ ಗಾಯದ ಬಗ್ಗೆ ನವೀಕರಣವನ್ನು ನೀಡಿದೆ. ""ರಶೀದ್ ಖಾನ್ ಸಂಪೂರ್ಣ ವೈದ್ಯಕೀಯ ನಿಗಾದಲ್ಲಿ ಇರುತ್ತಾರೆ ಮತ್ತು ಜೂನ್ 7ರಂದು ಅಂತಿಮ ಏಕದಿನ ಪಂದ್ಯಕ್ಕೆ ಮರಳುವ ನಿರೀಕ್ಷೆಯಿದೆ,'' ಎಂದು ತಿಳಿಸಿದ್ದಾರೆ.

ಐಪಿಎಲ್ 2023ರಲ್ಲಿ ಪ್ರಭಾವಿಶಾಲಿ ಪ್ರದರ್ಶನ ನಂತರ ರಾಷ್ಟ್ರೀಯ ತಂಡಕ್ಕೆ ಆಗಮನ
ಇಂಡಿಯನ್ ಪ್ರೀಮಿಯರ್ ಲೀಗ್ 2023ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಟೈಟನ್ಸ್ ತಂಡದ ಪರ ಆಡುವಾಗ ರಶೀದ್ ಖಾನ್ ಅದ್ಭುತವಾದ ಪ್ರದರ್ಶನವನ್ನು ನೀಡಿದರು.

ಮೇ 29ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಕೊನೆಯ ಬಾಲ್ ಥ್ರಿಲ್ಲರ್‌ನಲ್ಲಿ ಗುಜರಾತ್ ಟೈಟನ್ಸ್ ಸೋಲು ಕಂಡಿತು. ಹಾಲಿ ಚಾಂಪಿಯನ್‌ಗಳಾಗಿ ಋತುವನ್ನು ಪ್ರವೇಶಿಸಿದ್ದ ಹಾರ್ದಿಕ್ ಪಾಂಡ್ಯ ಪಡೆ ಅಂತಿಮವಾಗಿ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ವಿಫಲವಾಯಿತು.

24 ವರ್ಷದ ಮಣಿಕಟ್ಟಿನ ಸ್ಪಿನ್ನರ್ ರಶೀದ್ ಖಾನ್ ಗುಜರಾತ್ ಟೈಟನ್ಸ್ ತಂಡದ ಸ್ಪಿನ್ ದಾಳಿಯನ್ನು ಮುನ್ನಡೆಸಿದರು. 8.24ರ ಎಕಾನಮಿ ದರದಲ್ಲಿ 17 ಪಂದ್ಯಗಳಲ್ಲಿ 27 ವಿಕೆಟ್‌ಗಳನ್ನು ಪಡೆದರು. ತಮ್ಮ ಸಹ ಆಟಗಾರ ಮೋಹಿತ್ ಶರ್ಮಾ ಜೊತೆಗೆ ಋತುವಿನ ಜಂಟಿ ಎರಡನೇ ಹೆಚ್ಚು ಪ್ರಮುಖ ವಿಕೆಟ್-ಟೇಕರ್ ಆಗಿ ಋತುವನ್ನು ಮುಗಿಸಿದರು.

ಐಪಿಎಲ್ 2023ರಲ್ಲಿ ರಶೀದ್ ಅವರ ಪ್ರಭಾವಿ ಪಂದ್ಯಗಳಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಹ್ಯಾಟ್ರಿಕ್ (ಐಪಿಎಲ್ 2023ರ ಏಕೈಕ ಹ್ಯಾಟ್ರಿಕ್) ಸಾಧನೆ ಮಾಡಿದರು. ಈ ವೇಳೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದರು.

Story first published: Thursday, June 1, 2023, 15:29 [IST]
Other articles published on Jun 1, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+