For Quick Alerts
ALLOW NOTIFICATIONS  
For Daily Alerts
 

SL vs AFG: ಅಫ್ಘಾನಿಸ್ತಾನ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಿಗೆ ಬಲಿಷ್ಠ ಶ್ರೀಲಂಕಾ ತಂಡ ಪ್ರಕಟ

ಜೂನ್ 2ರಂದು ಹಂಬಂಟೋಟಾದಲ್ಲಿ ಪ್ರಾರಂಭವಾಗುವ ಅಫ್ಘಾನಿಸ್ತಾನ ವಿರುದ್ಧದ ಮೂರು ಏಕದಿನ ಪಂದ್ಯಗಳ ಮೊದಲ ಎರಡು ಪಂದ್ಯಗಳಿಗೆ ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ತನ್ನ ತಂಡವನ್ನು ಪ್ರಕಟಿಸಿದೆ. ಆತಿಥೇಯ ತಂಡವು ಮೂರು ಪಂದ್ಯಗಳ ಏಕದಿನ ಸರಣಿಗೆ ಪೂರ್ಣ ಸಾಮರ್ಥ್ಯದ ಬಲಿಷ್ಠ ತಂಡವನ್ನು ಹೆಸರಿಸಿದೆ.

ಗುಜರಾತ್ ಟೈಟನ್ಸ್ ತಂಡಕ್ಕಾಗಿ ಐಪಿಎಲ್ 2023ರ ಅಭಿಯಾನದ ನಂತರ ದಸುನ್ ಶನಕ ನಾಯಕನಾಗಿ ಹಿಂತಿರುಗುತ್ತಿದ್ದಾರೆ. ಅಲ್ಲದೇ ಶ್ರೀಮಂತ ಕ್ರಿಕೆಟ್ ಲೀಗ್‌ನ ಇತರ ಎಲ್ಲ ಆಟಗಾರರನ್ನು ಸಹ ಹೊಂದಿದೆ.

SL vs AFG ODI Series

ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡ ಪ್ರಶಸ್ತಿ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಮಥೀಶ್ ಪತಿರಾನ ಮತ್ತು ಮಹೇಶ್ ತೀಕ್ಷಣ ಕೂಡ ಶ್ರೀಲಂಕಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

2022ರ ಅಕ್ಟೋಬರ್‌ನಿಂದ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡದಿರುವ ಬಲಗೈ ವೇಗಿ ದುಷ್ಮಂತ ಚಮೀರ ಕೂಡ ತಂಡಕ್ಕೆ ಮರಳಿದ್ದಾರೆ. ಮಾರ್ಚ್ 2021ರಿಂದ ಅಂತಾರಾಷ್ಟ್ರೀಯ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಕಾಣಿಸಿಕೊಂಡಿಲ್ಲದ ದಿಮುತ್ ಕರುಣಾರತ್ನೆ ಅವರನ್ನು ಅತ್ಯಂತ ಆಶ್ಚರ್ಯಕರವಾಗಿ ಶ್ರೀಲಂಕಾ ತಂಡದಲ್ಲಿ ಸೇರ್ಪಡೆಗೊಳಿಸಲಾಗಿದೆ.

ಎಡಗೈ ಆಟಗಾರ ದಿಮುತ್ ಕರುಣಾರತ್ನೆ ಏಕದಿನ ಕ್ರಿಕೆಟ್‌ನಲ್ಲಿ ಕಳಪೆ ಫಾರ್ಮ್ ಹೊಂದಿದ್ದಾರೆ. 34 ಏಕದಿನ ಪಂದ್ಯಗಳಲ್ಲಿ 27.39 ಸರಾಸರಿ, ಆರು ಅರ್ಧ ಶತಕಗಳೊಂದಿಗೆ 767 ರನ್ ಗಳಿಸಿದ್ದಾರೆ.

SL vs AFG ODI Series

ಇನ್ನು ಆಲ್‌ರೌಂಡರ್ ದುನಿತ್ ವೆಲ್ಲಲಾಗೆ ತಂಡದಿಂದ ಹೊರಗುಳಿದಿದ್ದು, ಅವರ ಸ್ಥಾನಕ್ಕೆ ಅನ್‌ಕ್ಯಾಪ್ಡ್ ಲೆಗ್ ಸ್ಪಿನ್ನರ್ ದುಶಾನ್ ಹೇಮಂತ ಆಯ್ಕೆಯಾಗಿದ್ದಾರೆ. ಹೇಮಂತ ಅವರು 58 ಲಿಸ್ಟ್ ಎ ಪಂದ್ಯಗಳಿಂದ 64 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಬ್ಯಾಟಿಂಗ್‌ನಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಬ್ಯಾಟ್‌ನೊಂದಿಗೆ ಒಟ್ಟು 1114 ರನ್‌ಗಳನ್ನು ಕಲೆಹಾಕಿದ್ದಾರೆ.

ಅಫ್ಘಾನಿಸ್ತಾನ ವಿರುದ್ಧ ಮೊದಲೆರಡು ಏಕದಿನ ಪಂದ್ಯಗಳಿಗೆ ಶ್ರೀಲಂಕಾ ತಂಡ

ದಸುನ್ ಶನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್/ ಉಪನಾಯಕ), ಏಂಜೆಲೊ ಮ್ಯಾಥ್ಯೂಸ್, ಚರಿತ್ ಅಸಲಂಕಾ, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ, ಚಾಮಿಕ ಕರುಣಾರತ್ನೆ, ದುಷ್ಮನ್ ಹೇಮಂತ, ವನಿಂದು ಹಸರಂಗ, ಲಹಿರು ಕುಮಾರ, ದುಷ್ಮಂತ ಚಮೀರ, ಕಸುನ್ ರಜಿತ, ಮತೀಶ್ ಪತಿರಣ, ಮಹೇಶ್ ತೀಕ್ಷಣ.

ಅಫ್ಘಾನಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಕಳೆದ ವರ್ಷ ನವೆಂಬರ್‌ನಲ್ಲಿ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊನೆಯದಾಗಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ, ಎರಡನೇ ಪಂದ್ಯ ಮಳೆಯಿಂದಾಗಿ ಫಲಿತಾಂಶ ಕಾಣದೆ ರದ್ದುಗೊಂಡಿತ್ತು. ಅಂತಿಮ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆದ್ದಿತ್ತು.

SL vs AFG ODI Series

ಇನ್ನು ಮುಂಬರುವ ಏಕದಿನ ಸರಣಿಯು 2023ರ ಅಕ್ಟೋಬರ್-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಏಷ್ಯಾದ ಬಲಾಢ್ಯ ತಂಡಗಳಿಗೆ ಉತ್ತಮ ಅಭ್ಯಾಸವಾಗಲಿದೆ.

ಐಸಿಸಿ ಏಕದಿನ ಪಂದ್ಯಾವಳಿಗೆ ಅಫ್ಘಾನಿಸ್ತಾನ ಈಗಾಗಲೇ ನೇರವಾಗಿ ಅರ್ಹತೆ ಪಡೆದಿದ್ದರೆ, ಜುಲೈನಲ್ಲಿ ಶ್ರೀಲಂಕಾ ಅರ್ಹತಾ ಪಂದ್ಯಗಳನ್ನು ಆಡಬೇಕಿದೆ. ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ಕೂಡ ಅರ್ಹತಾ ಸುತ್ತಿನಲ್ಲಿ ಆಡಲಿದೆ.

Story first published: Tuesday, May 30, 2023, 20:24 [IST]
Other articles published on May 30, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+