For Quick Alerts
ALLOW NOTIFICATIONS  
For Daily Alerts
 

SL vs AFG 3rd ODI: ಶ್ರೀಲಂಕಾ ಆಲ್‌ರೌಂಡ್ ಪ್ರದರ್ಶನ; ಅಫ್ಘಾನ್ ವಿರುದ್ಧ ಸರಣಿ ಜಯ

ಬುಧವಾರ, ಜೂನ್ 7ರಂದು ನಡೆದ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಆತಿಥೇಯ ತಂಡ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ 2-1 ಅಂತರದಲ್ಲಿ ಸರಣಿಯನ್ನು ಜಯಿಸಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ 22.2 ಓವರ್‌ಗಳಲ್ಲಿ 116 ರನ್‌ಗಳಿಗೆ ಸರ್ವಪತನ ಕಂಡಿತು. 117 ರನ್‌ಗಳ ಸುಲಭ ಗುರಿ ಬೆನ್ನಟ್ಟಿದ ಶ್ರೀಲಂಕಾ 16 ಓವರ್‌ಗಳಲ್ಲಿ 1 ವಿಕೆಟ್ ಕಳೆದುಕೊಂಡು 116 ರನ್ ಗಳಿಸಿ ಗೆದ್ದು ಬೀಗಿತು.

SL vs AFG

ಶ್ರೀಲಂಕಾದ ಆರಂಭಿಕರಾದ ದಿಮುತ್ ಕರುಣಾರತ್ನೆ ಮತ್ತು ಪಾಥುಮ್ ನಿಸ್ಸಾಂಕಾ ಅವರ ತಲಾ ಅರ್ಧಶತಕಗಳು ಅಫ್ಘಾನಿಸ್ತಾನವನ್ನು 9 ವಿಕೆಟ್‌ಗಳಿಂದ ಸೋಲಿ ಆತಿಥೇಯರಿಗೆ 2-1 ಏಕದಿನ ಸರಣಿಯನ್ನು ಗೆದ್ದುಕೊಟ್ಟರು. ಶ್ರೀಲಂಕಾ ಪರ 4 ವಿಕೆಟ್ ಪಡೆದ ದುಷ್ಮಂತ ಚಮೀರಾ ಪಂದ್ಯ ಪುರುಷೋತ್ತಮ ಆಟಗಾರ ಎನಿಸಿಕೊಂಡರು.

ಜಿಂಬಾಬ್ವೆಯಲ್ಲಿ ನಡೆಯುವ ಅರ್ಹತಾ ಪಂದ್ಯಾವಳಿಗೆ ತೆರಳುವ ಮೊದಲು ಶ್ರೀಲಂಕಾಗೆ ಅಗತ್ಯವಾದ ಉತ್ತೇಜನ ಇದಾಗಿದ್ದು, ವಿಶ್ವಕಪ್‌ಗಾಗಿ ಉಳಿದ ಎರಡು ಸ್ಲಾಟ್‌ಗಳಿಗೆ ಸ್ಪರ್ಧೆ ನಡೆಯುತ್ತಿದೆ.

ಅಫ್ಘಾನಿಸ್ತಾನ ತಂಡವು ಈಗಾಗಲೇ ಅಕ್ಟೋಬರ್‌-ನವೆಂಬರ್‌ನಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವಕಪ್‌ಗೆ ಪ್ರವೇಶ ಪಡೆದಿದೆ. ಆದರೆ ನಾಯಕ ಹಶ್ಮತುಲ್ಲಾ ಶಾಹಿದಿ "ನಮ್ಮ ಬ್ಯಾಟರ್‌ಗಳಿಗೆ ಕೆಟ್ಟ ದಿನ' ಎಂದು ಹೇಳಲು ಮರೆಯಲಿಲ್ಲ.

SL vs AFG

"ನಾವು ಆರಂಭದಲ್ಲಿಯೇ ಕೆಲವು ವಿಕೆಟ್‌ಗಳನ್ನು ಕಳೆದುಕೊಂಡೆವು ಮತ್ತು ಅದು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿತು. ಮೊದಲು ಬ್ಯಾಟ್ ಮಾಡಲು ಇದು ಉತ್ತಮ ನಿರ್ಧಾರ ಎಂದು ನಾನು ಈಗಲೂ ಭಾವಿಸುತ್ತೇನೆ. ಆದರೆ ವಿಕೆಟ್ ಕಳೆದುಕೊಂಡಿದ್ದರಿಂದ, ಅದು ನಮ್ಮಿಂದ ಆವೇಗವನ್ನು ಕಸಿದುಕೊಂಡಿತು," ಎಂದು ಹಶ್ಮತುಲ್ಲಾ ಶಾಹಿದಿ ಸುದ್ದಿಗಾರರಿಗೆ ತಿಳಿಸಿದರು.

ಚೇಸಿಂಗ್ ಸಮಯದಲ್ಲಿ ಪಾಥುಮ್ ನಿಸ್ಸಾಂಕ ಸಮಯ ವ್ಯರ್ಥ ಮಾಡದೆ, 32 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಎರಡು ಸಿಕ್ಸರ್‌ಗಳೊಂದಿಗೆ 51 ರನ್ ಗಳಿಸಿ, ತಮ್ಮ ಏಳನೇ ಏಕದಿನ ಅರ್ಧಶತಕವನ್ನು ಬಾರಿಸಿದರು.

ಶ್ರೀಲಂಕಾದ ಮೊದಲ ವಿಕೆಟ್‌ಗೆ 84 ರನ್‌ಗಳ ಜೊತೆಯಾಟವನ್ನು ಕೊನೆಗೊಳಿಸಲು ಅಫ್ಘಾನಿಸ್ತಾನದ ಗುಲ್ಬದಿನ್ ನೈಬ್ ಅವರು ಪಾಥುಮ್ ನಿಸ್ಸಾಂಕ ಅವರನ್ನು ಎಲ್‌ಬಿಡಬ್ಲ್ಯುಗೆ ಔಟ್ ಮಾಡಿದರು.

ಮತ್ತೊಬ್ಬ ಆರಂಭಿಕ ಕರುಣಾರತ್ನೆ ಅವರು ಎರಡು ವರ್ಷಗಳ ನಂತರದ ತಮ್ಮ ಮೊದಲ ಏಕದಿನ ಸರಣಿಯಲ್ಲಿ 45 ಎಸೆತಗಳಲ್ಲಿ ಅಜೇಯ 56 ರನ್ ಗಳಿಸಿ ಶ್ರೀಲಂಕಾ ಮತ್ತೊಂದು ವಿಕೆಟ್ ಕಳೆದುಕೊಳ್ಳದೆ ಗುರಿಯನ್ನು ತಲುಪಿತು. ಏಕದಿನ ಕ್ರಿಕೆಟ್‌ನಲ್ಲಿ ಕರುಣಾರತ್ನೆ ಅವರ 8ನೇ ಅರ್ಧಶತಕವಾಗಿದೆ.

ಇನ್ನು ಕುಸಾಲ್ ಮೆಂಡಿಸ್ 11 ರನ್ ಗಳಿಸಿ ಅಜೇಯರಾಗುಳಿದರು. ಶ್ರೀಲಂಕಾ ತಂಡ ಕೇವಲ 16 ಓವರ್‌ಗಳಲ್ಲಿ ಗುರಿ ತಲುಪಿ 34 ಓವರ್ ಮತ್ತು 9 ವಿಕೆಟ್ ಬಾಕಿ ಇರುವಂತೆಯೇ ಪಂದ್ಯವನ್ನು ಗೆದ್ದರು.

ಇದಕ್ಕೂ ಮೊದಲು ಅಫ್ಘಾನಿಸ್ತಾನವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ ಶ್ರೀಲಂಕಾದ ವೇಗಿ ಚಮೀರಾ ಅವರ ಬಿಗಿ ಬೌಲಿಂಗ್ ದಾಳಿಗೆ ಸಿಲುಕಿದ ಅಫ್ಘಾನಿಸ್ತಾನ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡರು.

ಪಾದದ ಶಸ್ತ್ರಚಿಕಿತ್ಸೆಯ ನಂತರ, ಏಳು ತಿಂಗಳ ಸುದೀರ್ಘ ವಿಶ್ರಾಂತಿಯ ಬಳಿಕ ಮೊದಲ ಸರಣಿಯನ್ನು ಆಡಿದ ಚಮೀರಾ 63 ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದರು.

ಪ್ರವಾಸಿ ಅಫ್ಘಾನಿಸ್ತಾನ ಮೊದಲ ಪಂದ್ಯವನ್ನು ಆರು ವಿಕೆಟ್‌ಗಳಿಂದ ಗೆದ್ದುಕೊಂಡಿತು. ನಂತರ ಶ್ರೀಲಂಕಾ ತಂಡ ಎರಡನೇ ಪಂದ್ಯವನ್ನು 132 ರನ್‌ಗಳಿಂದ ಗೆದ್ದುಬೀಗಿತ್ತು.

Story first published: Thursday, June 8, 2023, 9:31 [IST]
Other articles published on Jun 8, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+