SL vs AUS: 18 ತಿಂಗಳ ನಂತರ ಶತಕದ ಬರ ನೀಗಿಸಿದ ಸ್ಟೀವ್ ಸ್ಮಿತ್; ಕೊಹ್ಲಿ ದಾಖಲೆ ಪುಡಿಪುಡಿ

ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಶುಕ್ರವಾರ, ಜುಲೈ 8ರಂದು ಕೊಲಂಬೊದ ಗಾಲೆ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಕ್ರಿಕೆಟ್‌ನಲ್ಲಿ 18 ತಿಂಗಳ ನಂತರ ತಮ್ಮ ಶತಕದ ಬರ ನೀಗಿಸಿಕೊಂಡರು.
ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಭರ್ಜರಿ ಶತಕ ದಾಖಲಿಸಿ ಅಬ್ಬರಿಸಿದರು. ಸ್ಟೀವ್ ಸ್ಮಿತ್ ಟೆಸ್ಟ್‌ನ ಮೊದಲ ದಿನದಂದು 109 ರನ್ ಗಳಿಸಿ ಅಜೇಯರಾಗುಳಿದಿದ್ದು, ಆಸ್ಟ್ರೇಲಿಯಾವು 298/5 ರಲ್ಲಿ ಆರಾಮದಾಯಕ ಸ್ಥಿತಿಯಲ್ಲಿದೆ.
ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ಆರಂಭದಲ್ಲೇ ಡೇವಿಡ್ ವಾರ್ನರ್ ಅವರ ವಿಕೆಟ್ ಕಳೆದುಕೊಂಡಿದ್ದರಿಂದ ಉತ್ತಮ ಆರಂಭ ಸಿಗಲಿಲ್ಲ. ಡೇವಿಡ್ ವಾರ್ನರ್ 13 ಎಸೆತಗಳಲ್ಲಿ 5 ರನ್ ಗಳಿಸಿದರು. ಮಾರ್ನಸ್ ಲ್ಯಾಬುಸ್ಚಾಗ್ನೆ 3ನೇ ಕ್ರಮಾಂಕದಲ್ಲಿ ಬಂದು 156 ಎಸೆತಗಳಲ್ಲಿ 104 ರನ್ ಗಳಿಸಿದರು. ಇದೇ ವೇಳೇ ಉಸ್ಮಾನ್ ಖವಾಜಾ 37 ರನ್ ಗಳಿಸಿ ಔಟಾದರು.

ಒಟ್ಟಾರೆ 28ನೇ ಶತಕ ಗಳಿಸಿದ ಸ್ಮಿತ್
ನಂತರ ಸ್ಟೀವ್ ಸ್ಮಿತ್ ಫಾರ್ಮ್‌ಗಾಗಿ ಹೋರಾಡುತ್ತಾ 4ನೇ ಸ್ಥಾನದಲ್ಲಿ ಕಣಕ್ಕಿಳಿದರು. ಆದರೆ ಈ ಬಾರಿ ಅವರು ಮಧ್ಯದಲ್ಲಿ ಸಮಯ ಕಳೆಯಲು ಮನಸ್ಸು ಮಾಡಿದ್ದರು. ಅವರ ತಾಳ್ಮೆ ಮತ್ತು ಪ್ರಯತ್ನದ ಫಲವಾಗಿ ಶತಕವನ್ನು ಬಾರಿಸಿದರು ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ ಒಟ್ಟಾರೆ 28ನೇ ಶತಕ ಗಳಿಸಿ, ಇಂಗ್ಲೆಂಡ್‌ನ ಜೋ ರೂಟ್‌ರನ್ನು ಸರಿಗಟ್ಟಿದರು.
ಇನ್ನು ಸುದೀರ್ಘ ಸ್ವರೂಪದ ಆಟದಲ್ಲಿ ಗಳಿಸಿದ ಶತಕಗಳ ದಾಖಲೆಯಲ್ಲಿ ಸ್ಟೀವ್ ಸ್ಮಿತ್ ಅವರು ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿಯನ್ನು ಮೀರಿಸಿದರು. ಜೋ ರೂಟ್ 121 ಟೆಸ್ಟ್‌ಗಳಿಂದ 28 ಶತಕಗಳನ್ನು ಹೊಂದಿದ್ದಾರೆ. ಸ್ಟೀವ್ ಸ್ಮಿತ್ 87 ಟೆಸ್ಟ್‌ಗಳಿಂದ 28 ಮತ್ತು ಕೇನ್ ವಿಲಿಯಮ್ಸನ್ 88 ಪಂದ್ಯಗಳಿಂದ 24 ಶತಕಗಳನ್ನು ಗಳಿಸಿದ್ದಾರೆ.

ವಿರಾಟ್ ಕೊಹ್ಲಿ 102 ಪಂದ್ಯಗಳಿಂದ 27 ಶತಕ
ವಿರಾಟ್ ಕೊಹ್ಲಿ 102 ಪಂದ್ಯಗಳಿಂದ 27 ಶತಕಗಳನ್ನು ಗಳಿಸಿದ್ದಾರೆ. 2019ರ ನವೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಅವರ ಕೊನೆಯ ಶತಕದೊಂದಿಗೆ ಅವರು 3 ವರ್ಷಗಳಿಂದ ಟೆಸ್ಟ್ ಶತಕವನ್ನು ಗಳಿಸದೇ ಕಳಪೆ ಫಾರ್ಮ್ ಅನುಭವಿಸುತ್ತಿದ್ದಾರೆ. ಆಧುನಿಕ ಶ್ರೇಷ್ಠರಲ್ಲಿ ಜೋ ರೂಟ್ ಮತ್ತು ಸ್ಟೀವ್ ಸ್ಮಿತ್ ಶತಕಗಳ ರೇಸ್‌ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ, ಆದರೆ ಅಭಿಮಾನಿಗಳು ವಿರಾಟ್ ಕೊಹ್ಲಿ 2.0 ಫಾರ್ಮ್‌ಗಾಗಿ ಕಾಯುತ್ತಿದ್ದಾರೆ.
ಆಸ್ಟ್ರೇಲಿಯದ ಸ್ಟೀವ್ ಸ್ಮಿತ್ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ವಿರಾಟ್ ಕೊಹ್ಲಿಯನ್ನು ಮೀರಿಸಿ ಔಟಾಗದೇ 109 ರನ್ ಗಳಿಸಿದರು. ಇದು 87 ಪಂದ್ಯಗಳಲ್ಲಿ ಸ್ಮಿತ್ ಅವರ 28 ಶತಕವಾಗಿದೆ ಮತ್ತು 8125 ರನ್ ಗಳಿಸಿದ್ದು, ಇದು ವಿರಾಟ್ ಕೊಹ್ಲಿಗಿಂತ 51 ರನ್ ಮುಂದೆ ಸಾಗಿದರು.

ಶ್ರೀಲಂಕಾದ ಮೇಲೆ ಪ್ರಾಬಲ್ಯ ಮುಂದುವರೆಸಿದ ಆಸ್ಟ್ರೇಲಿಯ
ಉಪಖಂಡದ ಪರಿಸ್ಥಿತಿಗಳಲ್ಲಿ ಆಸ್ಟ್ರೇಲಿಯ ಆತಿಥೇಯ ಶ್ರೀಲಂಕಾದ ಮೇಲೆ ಪ್ರಾಬಲ್ಯವನ್ನು ಮುಂದುವರೆಸಿದೆ ಮತ್ತು ಮತ್ತೊಮ್ಮೆ ದೊಡ್ಡ ಮೊತ್ತವನ್ನು ನಿರೀಕ್ಷಿಸುತ್ತಿದೆ. ಮೊದಲ ಟೆಸ್ಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯನ್ ಸ್ಪಿನ್ನರ್‌ಗಳು ಶ್ರೀಲಂಕಾವನ್ನು 25 ಓವರ್‌ಗಳ ಒಳಗೆ ಕಟ್ಟಿಹಾಕಿದರು. ನಾಥನ್ ಲಿಯಾನ್ ಅವರಿಗೆ ಪಾರ್ಟ್-ಟೈಮರ್ ಟ್ರಾವಿಸ್ ಹೆಡ್ ಮತ್ತು ಮಿಚೆಲ್ ಸ್ವೆಪ್ಸನ್ ಸಹಾಯ ಮಾಡಿದ್ದರು.
ಸ್ಟೀವ್ ಸ್ಮಿತ್ ಇನ್ನೂ ಅಜೇಯರಾಗಿದ್ದಾರೆ ಮತ್ತು 2ನೇ ಟೆಸ್ಟ್‌ನ 2ನೇ ದಿನದಂದು ಹೆಚ್ಚು ಸಮಯ ಬ್ಯಾಟಿಂಗ್ ಮಾಡಲು ಆಶಿಸಲಿದ್ದಾರೆ. ಬಹುಶಃ ಆಸ್ಟ್ರೇಲಿಯಾವನ್ನು ಉತ್ತಮ ಸ್ಥಾನದಲ್ಲಿ ಇರಿಸಲು ಪ್ರಯತ್ನಿಸಿ ಮತ್ತು ದ್ವಿಶತಕವನ್ನು ಗಳಿಸುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications