Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SL Vs NZ 1st Test: ನ್ಯೂಜಿಲೆಂಡ್‌ಗೆ 2 ವಿಕೆಟ್ ರೋಚಕ ಜಯ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಭಾರತ

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ 2 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಸೋಲಿನೊಂದಿಗೆ ಶ್ರೀಲಂಕಾದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಕನಸು ಭಗ್ನಗೊಂಡಿದ್ದು, ಭಾರತ ನೇರವಾಗಿ ಪ್ರವೇಶ ಪಡೆದುಕೊಂಡಿದೆ.

ಕೇನ್ ವಿಲಿಯಮ್ಸನ್ ಅಜೇಯ 121 ರನ್ ಬಾರಿಸಿದರೆ, ಡೇರಿಲ್ ಮಿಚೆಲ್ 86 ಎಸೆತಗಳಲ್ಲಿ 81 ರನ್ ಗಳಿಸಿ ನ್ಯೂಜಿಲೆಂಡ್ ಗೆಲುವಿಗೆ ಕಾರಣವಾದರು. ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದ ನ್ಯೂಜಿಲೆಂಡ್ ಕೊನೆಗೂ ಜಯ ಸಾಧಿಸಿತು. ಅಂತಿಮ ಓವರ್ ವರೆಗೂ ಶ್ರೀಲಂಕಾ ಕೂಡ ಪಟ್ಟುಬಿಡದೆ ಹೋರಾಡಿದರು, ಕೊನೆಗೆ ಸೋಲೊಪ್ಪಿಕೊಂಡಿದೆ. ಭಾರತ ಆಸ್ಟ್ರೇಲಿಯಾ ನಡುವಿನ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡರು ಭಾರತ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದುಕೊಂಡಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್ ಶ್ರೀಲಂಕಾ ತಂಡವನ್ನು ಕಟ್ಟಿಹಾಕುವಲ್ಲಿ ವಿಫಲವಾಯಿತು. ನಾಯಕ ಕರುಣರತ್ನೆ 50 ರನ್ ಗಳಿಸಿದರೆ, ಕುಶಾಲ್ ಮೆಂಡಿಸ್ 87 ರನ್ ಗಳಿಸಿದರು. ಶ್ರೀಲಂಕ ಮೊದಲ ಇನ್ನಿಂಗ್ಸ್‌ನಲ್ಲಿ 351 ರನ್‌ಗಳಿಗೆ ಆಲೌಟ್ ಆಯಿತು. ನಾಯಕ ಟಿಮ್ ಸೌಥಿ 5 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 4 ವಿಕೆಟ್ ಪಡೆದರು. ಮಿಚೆಲ್ ಬ್ರೇಸ್‌ವೆಲ್ 1 ವಿಕೆಟ್ ಪಡೆದುಕೊಂಡರು.

ಡೇರಿಲ್ ಮಿಚೆಲ್ ಅತ್ಯುತ್ತಮ ಇನ್ನಿಂಗ್ಸ್

ಡೇರಿಲ್ ಮಿಚೆಲ್ ಅತ್ಯುತ್ತಮ ಇನ್ನಿಂಗ್ಸ್

ನಂತರ ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಒಂದು ಹಂತದಲ್ಲಿ ಆಘಾತಕ್ಕೊಳದಾರು ನಂತರ ಚೇತರಿಸಿಕೊಂಡಿತು. ಆರಂಭಿಕರಾದ ಟಾಮ್ ಲಾಥಮ್ 67 ರನ್ ಮತ್ತು ಡಿವೊನ್ ಕಾನ್ವೆ 30 ರನ್ ಗಳಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ಕೇನ್ ವಿಲಿಯಮ್ಸನ್ ಮತ್ತು ಹೆನ್ರಿನಿಕೋಲಸ್ ಕ್ರಮವಾಗಿ 1 ಮತ್ತು 2 ರನ್ ಗಳಿಸಿ ಔಟಾದ ನಂತರ ಕಡಿಮೆ ಮೊತ್ತಕ್ಕೆ ಕುಸಿಯುವ ಭೀತಿ ಅನುಭವಿಸಿತು.

ಆದರೆ ಡೇರಿಲ್ ಮಿಚೆಲ್ ಶತಕ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು. ಮಿಚೆಲ್ 102 ರನ್ ಗಳಿಸಿದರೆ, ಮ್ಯಾಟ್ ಹೆನ್ರಿ 72 ರನ್ ಗಳಿಸಿ ಮಿಂಚಿದರು. ಮಿಚೆಲ್ ಬ್ರೇಸ್‌ವೆಲ್ 25, ನಾಯಕ ಟಿಮ್ ಸೌಥಿ 25, ವ್ಯಾಗ್ನರ್ 27 ರನ್ ಗಳಿಸಿವುದರೊಂದಿಗೆ ನ್ಯೂಜಿಲೆಂಡ್ ಮೊದಲನೇ ಇನ್ನಿಂಗ್ಸ್‌ನಲ್ಲಿ 373 ರನ್‌ಗಳಿಗೆ ಆಲೌಟ್ ಆದರೂ, 18 ರನ್‌ಗಳ ಮುನ್ನಡೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ನ್ಯೂಜಿಲೆಂಡ್‌ಗೆ ಸವಾಲಿನ ಗುರಿ ನೀಡಿದ ಶ್ರೀಲಂಕಾ

ನ್ಯೂಜಿಲೆಂಡ್‌ಗೆ ಸವಾಲಿನ ಗುರಿ ನೀಡಿದ ಶ್ರೀಲಂಕಾ

ಎರಡನೇ ಇನ್ನಿಂಗ್ಸ್‌ನಲ್ಲಿ ಕೂಡ ಶ್ರೀಲಂಕಾ ಉತ್ತಮ ಬ್ಯಾಟಿಂಗ್ ಮಾಡಿತು. ಏಂಜಲೋ ಮ್ಯಾಥ್ಯೂಸ್ 115 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ದಿನೇಶ್ ಚಾಂಡಿಮಾಲ್ 42 ರನ್, ಧನಜಂಜಯ ಡಿಸಿಲ್ವ 47 ರನ್ ಗಳಿಸುವ ಮೂಲಕ ಎರಡನೇ ಇನ್ನಿಂಗ್ಸ್‌ನಲ್ಲಿ 302 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ 284 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಬೇಲ್ ಟಿಕ್ನರ್ 4 ವಿಕೆಟ್ ಪಡೆದರೆ, ಮ್ಯಾಟ್ ಹೆನ್ರಿ 3 ವಿಕೆಟ್ ಪಡೆದುಕೊಂಡರು. ನಾಯಕ ಟಿಮ್ ಸೌಥಿ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಕೊನೆಯ ದಿನದ ಆಟ ಬಾಕಿ ಉಳಿದಿದ್ದರಿಂದ ನ್ಯೂಜಿಲೆಂಡ್ ಈ ಮೊತ್ತವನ್ನು ಸುಲಭವಾಗಿ ಬೆನ್ನತ್ತುವ ವಿಶ್ವಾಸದಲ್ಲಿತ್ತು.

ರೋಚಕ ಗೆಲುವು ಸಾಧಿಸಿದ ನ್ಯೂಜಿಲೆಂಡ್

ರೋಚಕ ಗೆಲುವು ಸಾಧಿಸಿದ ನ್ಯೂಜಿಲೆಂಡ್

5ನೇ ಪಂದ್ಯಕ್ಕೆ ಮಳೆ ಅಡ್ಡಿಯಾಯಿತು. ಸುಮಾರು 4 ಗಂಟೆಗಳಷ್ಟು ತಡವಾಗಿ 5ನೇ ದಿನ ಪಂದ್ಯ ಆರಂಭವಾಗಿದ್ದರಿಂದ 53 ಓವರ್ ಗಳಷ್ಟು ಓವರ್ ಗಳು ಮಾತ್ರ ಉಳಿದುಕೊಂಡಿತ್ತು. 4ನೇ ದಿನದಾಟದ ಅಂತ್ಯಕ್ಕೆ 28 ರನ್ ಗಳಿಸಿ 1 ವಿಕೆಟ್ ಕಳೆದುಕೊಂಡಿದ್ದ ನ್ಯೂಜಿಲೆಂಡ್ ಈ ಪಂದ್ಯವನ್ನು ಗೆಲ್ಲುವ ಉದ್ದೇಶದಿಂದಲೇ ಆರಂಭಿಸಿತು. ಕೇನ್ ವಿಲಿಯಮ್ಸನ್ ತಾಳ್ಮೆಯ ಆಟವಾಡಿದರೆ, ಡೇರಿಲ್ ಮಿಚೆಲ್ 86 ಎಸೆತಗಳಲ್ಲಿ 3 ಬೌಂಡರಿ 4 ಸಿಕ್ಸರ್ ಸಹಿತ 81 ರನ್ ಗಳಿಸುವ ಮೂಲಕ ನ್ಯೂಜಿಲೆಂಡ್‌ ತಂಡವನ್ನು ಗೆಲುವಿನ ಸಮೀಪ ತಂದರು.

ಕೊನೆಯ ಓವರ್ ನಲ್ಲಿ ನ್ಯೂಜಿಲೆಂಡ್ ಗೆಲುವಿಗೆ 8 ರನ್ ಬೇಕಿದ್ದಾಗ ಮೊದಲ ಎರಡು ಎಸೆತಗಳಲ್ಲಿ 2 ರನ್ ಬಂದಿತು, ಮೂರನೇ ಎಸೆತದಲ್ಲಿ ಮ್ಯಾಟ್ ಹೆನ್ರಿ ರನೌಟ್ ಆಗುವ ಮೂಲಕ ಪಂದ್ಯ ಮತ್ತಷ್ಟು ರೋಚಕವಾಯಿತು. 3 ಎಸೆತಗಳಲ್ಲಿ 6 ರನ್ ಬೇಕಿದ್ದಾಗ ವಿಲಿಯಮ್ಸನ್ 4ನೇ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಸ್ಕೋರ್ ಸಮವಾಗಿಸಿದರು, 5ನೇ ಎಸೆತದಲ್ಲಿ ರನ್ ಬರದಿದ್ದರೂ, ಕೊನೆಯ ಎಸೆತದಲ್ಲಿ ಒಂದು ರನ್ ಗಳಸಿದ ವಿಲಿಯಮ್ಸನ್ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

Story first published: Monday, March 13, 2023, 12:38 [IST]
Other articles published on Mar 13, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+