For Quick Alerts
ALLOW NOTIFICATIONS  
For Daily Alerts
 

SL Vs NZ 1st Test: ನ್ಯೂಜಿಲೆಂಡ್‌ಗೆ ಡೇರಿಲ್ ಮಿಚೆಲ್, ಮ್ಯಾಟ್ ಹೆನ್ರಿ ಆಸರೆ: ಶ್ರೀಲಂಕಾಗೆ ಆಘಾತ

SL Vs NZ 1st Test : New Zealand Takes Firts Innings Lead, Sri Lanka Lost Three Wickets In The End Of Day 3

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಎರಡನೇ ದಿನದಾಟದ ಅಂತ್ಯಕ್ಕೆ 162 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು 193 ರನ್‌ಗಳಿಂದ ಹಿನ್ನಡೆಯಲಿದ್ದ ಕಿವೀಸ್ ಪಡೆಗೆ ಡೇರಿಲ್ ಮಿಚೆಲ್, ಮ್ಯಾಟ್ ಹೆನ್ರಿ ಆಸರೆಯಾದರು.

ಮೂರನೇ ದಿನದಾಟದಲ್ಲಿ ನ್ಯೂಜಿಲೆಂಡ್ ಅತ್ಯುತ್ತಮ ಬ್ಯಾಟಿಂಗ್ ಮಾಡಿತು. ಡೇರಿಲ್ ಮಿಚೆಲ್ ಅತ್ಯುತ್ತಮ ಶತಕ ಗಳಿಸಿದರೆ, ಮ್ಯಾಟ್ ಹೆನ್ರಿ ಅಮೂಲ್ಯವಾದ 72 ರನ್ ಗಳಿಸಿದರು. ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ 373 ರನ್‌ಗಳಿಗೆ ಆಲೌಟ್ ಆಗುವ ಮೂಲಕ 18 ರನ್‌ಗಳ ಮುನ್ನಡೆ ಪಡೆದುಕೊಂಡಿತು.

ಡೇರಿಲ್ ಮಿಚೆಲ್ ಅಮೋಘ ಶತಕ ಗಳಿಸುವ ಮೂಲಕ ನ್ಯೂಜಿಲೆಂಡ್‌ಗೆ ಇನ್ನಿಂಗ್ಸ್ ಮುನ್ನಡೆ ತಂದುಕೊಡುವಲ್ಲಿ ಯಶಸ್ವಿಯಾದರು. 193 ಎಸೆತಗಳಲ್ಲಿ 6 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 102 ರನ್‌ ಗಳಿಸಿದರು. ಮಿಚೆಲ್ ಬ್ರೇಸ್‌ವೆಲ್ 25 ರನ್ ಗಳಿಸಿದರೆ, ನಾಯಕ ಟಿಮ್ ಸೌಥಿ ಕೂಡ 25 ರನ್ ಗಳಿಸಿ ಔಟಾದರು.

ಮ್ಯಾಟ್ ಹೆನ್ರಿ 75 ಎಸೆತಗಳಲ್ಲಿ 10 ಬೌಂಡರಿ ಮೂರು ಸಿಕ್ಸರ್ ಸಹಿತ 72 ರನ್ ಗಳಿಸುವ ಮೂಲಕ ಮಿಂಚಿದರು. ವ್ಯಾಗ್ನರ್ ಕೂಡ 24 ಎಸೆತಗಳಲ್ಲಿ 27 ರನ್ ಗಳಿಸಿದರು. ಟೈಲ್ ಎಂಡರ್ ಗಳ ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ನ್ಯೂಜಿಲೆಂಡ್ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.

SL Vs NZ 1st Test : New Zealand Takes Firts Innings Lead, Sri Lanka Lost Three Wickets In The End Of Day 3

ಶ್ರೀಲಂಕಾ ತಂಡಕ್ಕೆ ಆರಂಭಿಕ ಆಘಾತ

ಶ್ರೀಲಂಕಾ ಪರವಾಗಿ ಅಸಿತಾ ಫರ್ನಾಂಡೊ 4 ವಿಕೆಟ್ ಪಡೆದರೆ, ಲಾಹಿರು ಕುಮಾರ 3 ವಿಕೆಟ್ ಪಡೆದರು, ಕಸುನ್ ರಜಿತ 2 ವಿಕೆಟ್ ಪಡೆದು ಮಿಂಚಿದರು. ಪ್ರಭಾತ್ ಜಯಸೂರ್ಯ ಒಂದು ವಿಕೆಟ್ ಪಡೆದುಕೊಂಡರು. ಎರಡನೇ ದಿನ ಬೇಗನೆ ವಿಕೆಟ್ ಪಡೆದುಕೊಂಡಿದ್ದ ಲಂಕಾ ಬೌಲರ್ ಗಳು ಮೂರನೇ ದಿನ ವಿಕೆಟ್ ಪಡೆಯಲು ತಡಕಾಡಿದರು.

ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಶ್ರೀಲಂಕಾ ಆರಂಭಿಕ ಆಘಾತ ಅನುಭವಿಸಿದೆ. ಒಶಾಡೋ ಫರ್ನಾಂಡೊ 28 ರನ್‌ ಗಳಿಸಿ ಔಟಾದರೆ, ದಿಮುತ್ ಕರುಣರತ್ನೆ ಕೇವಲ 17 ರನ್‌ಗಳಿಗೆ ಔಟಾದರು, ಕುಶಾಲ್ ಮೆಂಡಿಸ್ ಕೂಡ 14 ರನ್ ಗಳಿಸಿ ಔಟಾದರು.

ಮೂರನೇ ದಿನದಾಟದ ಅಂತ್ಯಕ್ಕೆ ಶ್ರೀಲಂಕಾ 3 ವಿಕೆಟ್ ಕಳೆದುಕೊಂಡು 83 ರನ್ ಗಳಿಸಿದ್ದು, 65 ರನ್‌ಗಳ ಮುನ್ನಡೆ ಪಡೆದುಕೊಂಡಿದೆ. ಏಂಜಲೋ ಮ್ಯಾಥ್ಯೂಸ್ ಅಜೇಯ 20 ರನ್ ಗಳಿಸಿದ್ದು ನಾಲ್ಕನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದಾರೆ, ಪ್ರಭಾತ್ ಜಯಸೂರ್ಯ ಕೂಡ ಅಜೇಯ 2 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ. ಬ್ಲೇರ್ ಟಿಕ್ನರ್ ಮೂರು ವಿಕೆಟ್‌ಗಳನ್ನು ಪಡೆದು ಮಿಂಚಿದರು.

SL Vs NZ 1st Test : New Zealand Takes Firts Innings Lead, Sri Lanka Lost Three Wickets In The End Of Day 3

ಶ್ರೀಲಂಕಾ, ನ್ಯೂಜಿಲೆಂಡ್ ಪ್ಲೇಯಿಂಗ್ ಇಲೆವೆನ್

ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್, ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ (ನಾಯಕ), ಮ್ಯಾಟ್ ಹೆನ್ರಿ, ನೀಲ್ ವ್ಯಾಗ್ನರ್, ಬ್ಲೇರ್ ಟಿಕ್ನರ್.

ಶ್ರೀಲಂಕಾ: ಓಷಾದ ಫೆರ್ನಾಂಡೊ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ಕಸುನ್ ರಜಿತ, ಪ್ರಭಾತ್ ಜಯಸೂರ್ಯ, ಅಸಿತ ಫೆರ್ನಾಂಡೋ, ಲಹಿರು ಕುಮಾರ.

Story first published: Saturday, March 11, 2023, 16:04 [IST]
Other articles published on Mar 11, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+