SL vs PAK 2nd Test: ಪಾಕ್ ಪಡೆಗೆ ಕಡಿವಾಣ ಹಾಕಲು ಲಂಕಾ ವಿಫಲ: 3ನೇ ದಿನದ ಹೈಲೈಟ್ಸ್
ಶ್ರೀಲಂಕಾ ಹಾಗೂ ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿಯೂ ಪಾಕಿಸ್ತಾನದ ಅಬ್ಬರ ಮುಂದುವರಿದಿದೆ. ಎರಡನೇ ದಿನದಾಟ ಮಳೆಗೆ ಆಹುತಿಯಾದ ಬಳಿಕ ಮೂರನೇ ದಿನದಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಪಾಕಿಸ್ತಾನ ಮೊದಲ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಕಳೆದುಕೊಂಡು 563 ರನ್‌ಗಳಿಸಿದ್ದು 397 ರನ್‌ಗಳ ಭಾರೀ ಮುನ್ನಡೆ ಗಳಿಸಿ ಮುನ್ನುಗ್ಗುತ್ತಿದೆ.
ಪಾಕಿಸ್ತಾನದ ಪರವಾಗಿ ಆರಂಭಿಕ ಆಟಗಾರ ಅಬ್ದುಲ್ಲಾ ಶಫೀಕ್ ಅಮೀಘ ದ್ವಿಶತಕ ಸಿಡಿಸಿ ಮಿಂಚಿದ್ದಾರೆ. ಕೆಳ ಕ್ರಮಾಂಕದ ಆಟಗಾರ ಅಘಾ ಸಲ್ಮಾನ್ ಅಜೇಯ 132 ರನ್‌ಗಳನ್ನು ಗಳಿಸಿದ್ದು ನಾಲ್ಕನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದಾರೆ. ಮೊಹಮ್ಮದ್ ರಿಜ್ವಾನ್ ಅವರಿಗೆ ಸಾಥ್ ನಿಡಿದ್ದು 37 ರನ್‌ಗಳಿಸಿ ಅಜೇಯವಾಗುಳಿದಿದ್ದಾರೆ. ಇನ್ನು ಉಳಿದಂತೆ ಪರವಾಗಿ ಶಾನ್ ಮಸೂದ್ ಹಾಗೂ ಸೌದ್ ಶಕೀಲಕ್ ಕೂಡ ತಲಾ ಅರ್ಧ ಶತಕದ ಕೊಡುಗೆ ನೀಡಿದ್ದಾರೆ.

ಇನ್ನು ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಮೊದಲ ದಿನ ಹೀನಾಯ ಪ್ರದರ್ಶನ ನೀಡಿತ್ತು. ಪಾಕಿಸ್ತಾನದ ಬೌಲರ್‌ಗಳ ದಾಳಿಯನ್ನು ಎದುರಿಸಲು ವಿಫಲವಾದ ಶ್ರೀಲಂಕಾ ತಂಡ 166 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಈ ಮೂಲಕ ತವರಿನಲ್ಲಿಯೇ ಅತ್ಯಂತ ಹೀನಾಯ ಪ್ರದರ್ಶನ ನೀಡಿದೆ. ಬಳಿಕ ಬೌಲಿಂಗ್‌ನಲ್ಲಿಯೂ ಲಂಕಾ ಆಟಗಾರು ನೀರಸ ಪ್ರದರ್ಶನ ನೀಡುತ್ತಿದ್ದಾರೆ.
ಶ್ರೀಲಂಕಾ ಆಡುವ ಬಳಗ: ನಿಶಾನ್ ಮದುಷ್ಕ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ಅಸಿತ ಫೆರ್ನಾಂಡೋ, ದಿಲ್ಶಾನ್ ಮಧುಶಂಕ
ಬೆಂಚ್: ಕಸುನ್ ರಜಿತ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ, ಕಾಮಿಂದು ಮೆಂಡಿಸ್, ಲಕ್ಷಿತಾ ಮಾನಸಿಂಗ್
ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನೋಮನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್
ಬೆಂಚ್: ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಅಮೀರ್ ಜಮಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications