Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SL vs PAK 2nd Test: ಲಂಕಾ ನೆಲದಲ್ಲಿ ಮುಂದುವರಿದ ಪಾಕ್ ಅಬ್ಬರ

ಶ್ರೀಲಂಕಾ ಪ್ರವಾಸ ಕೈಗೊಂಡು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿರುವ ಪಾಕಿಸ್ತಾನ ಎರಡನೇ ಟೆಸ್ಟ್‌ನಲ್ಲಿಯೂ ಪರಾಕ್ರಮ ಮೆರೆದಿದೆ. ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರೂ ಶ್ರೀಲಂಕಾ ತಂಡ ಸಂಪೂರ್ಣ ವೈಫಲ್ಯ ಕಂಡಿದೆ. ಕೇವಲ 166 ನ್‌ಗಳಿಗೆ ಶ್ರೀಲಂಕಾ ಆಲೌಟ್ ಆಗುವ ಮೂಲಕ ಆಘಾತ ಅನುಭವಿಸಿತು.

ಶ್ರೀಲಂಕಾ ತಂಡ ಪಂದ್ಯದಲ್ಲಿ ಆರಂಭದಿಂದಲೇ ಹಿನ್ನಡೆ ಅನುಭವಿಸುತ್ತಾ ಸಾಗಿತ್ತು. ಮೊದಲ ಸೆಶನ್‌ನಲ್ಲಿಯೇ ಲಂಕಾ ತಂಡ ನಾಳ್ಕು ವಿಕೆಟ್‌ಗಳನ್ನು ಕಳೆದುಕೊಳ್ಳುವ ಮೂಲಕ ಪಾಕ್ ತಂಡ ಮೇಲುಗೈ ಸಾಧಿಸಲು ಅವಕಾಶ ನೀಡಿತ್ತು. ನಂತರ ಈ ಮೇಲುಗೈಯನ್ನು ಮುಂದುವರಿಸಿದ ಪಾಕ್ ಪಡೆ ದೊಡ್ಡ ಮೊತ್ತದ ಜೊತೆಯಾಟ ಬಾರದಂತೆ ತಡೆಯುವಲ್ಲಿ ಯಶಸ್ವಿಯಾದರು. ಧನಂಜಯ ಡಿಸಿಲ್ವ ಮಾತ್ರ ಲಂಕಾ ಪರವಾಗಿ ಅರ್ಧ ಶತಕ ಸಿಡಿಸಿ ಮಿಂಚಿದರು. ಚಾಂಡಿಮಲ್ ಜೊತೆಗೆ ಸೇರಿ ಕುಸಿತವನ್ನು ತಡೆಯುವ ಪ್ರಯತ್ನ ನಡೆಸಿದರಾದರೂ ಅದು ಹೆಚ್ಚು ಸಾಧ್ಯವಾಗಲಿಲ್ಲ.

SL vs Pak 2nd Test: Pakistan dominates 2nd test with bat and bowl in day 1, Highlights

ಕೇವಲ 48.4 ಓವರ್‌ಗಳ ಬ್ಯಾಟಿಂಗ್ ನಡೆಸಿ ಶ್ರೀಲಂಕಾ ತಂಡ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಪಾಕಿಸ್ತಾನ ಪರವಾಗಿ ಅಬ್ರಾರ್ ಅಹ್ಮದ್ ನಾಲ್ಕು ವಿಕೆಟ್ ಪಡದರೆ ನಸೀಮ್ ಶಾ ಮೂರು ವಿಕೆಟ್ ಹಾಗೂ ಶಾಹೀನ್ ಅಫ್ರಿದಿ ಒಂದು ವಿಕೆಟ್ ಪಡೆದರು. ಇಬ್ಬರು ಆಟಗಾರರು ರನೌಟ್‌ ಆಗುವ ಮೂಲಕ ವಿಕೆಟ್ ಕಳೆದುಕೊಂಡಿದ್ದರು.

ಇನ್ನು ನಂತರ ಬ್ಯಾಟಿಂಗ್ ನಡೆಸಿರುವ ಪಾಕಿಸ್ತಾನ ತಂಡ ಮೊದಲ ವಿಕೆಟನ್ನು 13 ರನ್ ಆಗುವಷ್ಟರಲ್ಲಿ ಕಳೆದಿಕೊಂಡರೂ ಎರಡನೇ ವಿಕೆಟ್‌ಗೆ ಶತಕದ ಜೊತೆಯಾಟ ಪಡೆದುಕೊಂಡಿದೆ. ಅಬ್ದುಲ್ಲಾ ಶಫೀಕ್ ಹಾಗೂ ಶಾನ್ ಮಸೂದ್ 108 ರನ್‌ಗಳ ಜೊತೆಯಾಟ ನಡೆಸಿ ಬೇರ್ಪಟ್ಟರು. ಶಾನ್ ಮಸೂದ್ 51 ರನ್‌ಗಳಿಸಿ ವಿಕೆಟ್ ಕಳೆದುಕೊಳ್ಳುವ ಮೂಲಕ ಈ ಜೊತೆಯಾಟ ಮುರಿದಿದೆ. ಶಫೀಕ್ 74 ರನ್‌ಗಳಿಸಿ ಎರಡನೇ ದಿನಕ್ಕೆ ಕ್ರೀಸ್ ಕಾಯ್ದಿರಿಸಿದ್ದು ಅವರಿಗೆ ನಾಯಕ ಬಾಬರ್ ಅಜಂ 8 ರನ್‌ಗಳಿಸಿ ಸಾಥ್ ನೀಡುತ್ತಿದ್ದಾರೆ.

ಇನ್ನು ಎರಡು ಪಂದ್ಯಗಳ ಈ ಸರಣಿಯ ಮೊದಲ ಪಂದ್ಯವನ್ನು ಪಾಕಿಸ್ತಾನ ತಂಡ 4 ವಿಕೆಟ್‌ಗಳ ಅಂತರದಿಂದ ಗೆದ್ದುಕೊಂಡಿತ್ತು. ಎರಡನೇ ಪಂದ್ಯದಲ್ಲಿಯೂ ಭರ್ಜರಿ ಮೇಲುಗೈ ಸಾಧಿಸುವ ಮೂಲಕ ಸರಣಿಯನ್ನು ವೈಟ್‌ವಾಶ್ ಮಾಡುವ ಕನಸು ಕಾಣುತ್ತಿದೆ. ಮತ್ತೊಂದೆಡೆ ಶ್ರೀಲಂಕಾ ತವರಿನಲ್ಲಿ ಭಾರೀ ಮುಖಭಂಗದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ತೊಡಗಿಸಿಕೊಂಡಿದೆ.

ಶ್ರೀಲಂಕಾ ಆಡುವ ಬಳಗ: ನಿಶಾನ್ ಮದುಷ್ಕ, ದಿಮುತ್ ಕರುಣಾರತ್ನೆ (ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ಸದೀರ ಸಮರವಿಕ್ರಮ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ಅಸಿತ ಫೆರ್ನಾಂಡೋ, ದಿಲ್ಶಾನ್ ಮಧುಶಂಕ
ಬೆಂಚ್: ಕಸುನ್ ರಜಿತ, ವಿಶ್ವ ಫೆರ್ನಾಂಡೋ, ಪ್ರವೀಣ್ ಜಯವಿಕ್ರಮ, ಕಾಮಿಂದು ಮೆಂಡಿಸ್, ಲಕ್ಷಿತಾ ಮಾನಸಿಂಗ್

ಪಾಕಿಸ್ತಾನ ಆಡುವ ಬಳಗ: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಶಾನ್ ಮಸೂದ್, ಬಾಬರ್ ಅಜಮ್ (ನಾಯಕ), ಸೌದ್ ಶಕೀಲ್, ಸರ್ಫರಾಜ್ ಅಹ್ಮದ್ (ವಿಕೆಟ್ ಕೀಪರ್), ಅಘಾ ಸಲ್ಮಾನ್, ನೋಮನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ, ಅಬ್ರಾರ್ ಅಹ್ಮದ್
ಬೆಂಚ್: ಮೊಹಮ್ಮದ್ ಹುರೈರಾ, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಅಮೀರ್ ಜಮಾಲ್

Story first published: Monday, July 24, 2023, 21:04 [IST]
Other articles published on Jul 24, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+