ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ 13 ವರ್ಷಗಳ ಬಳಿಕ 1000 ರನ್ ಪೂರೈಸಿದ ಪಾಕ್ ಆಟಗಾರ!

ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ಗಾಲೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಎರಡನೇ ದಿನದಾಟದಲ್ಲಿಯೂ ಶ್ರೀಲಂಕಾ ತಂಡ ಪಂದ್ಯದಲ್ಲಿ ಉತ್ತಮ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮೊದಲಿಗೆ ಬ್ಯಾಟಿಂಗ್‌ನಲ್ಲಿ ಮಿಂಚಿದ್ದ ಆತಿಥೇಯ ಲಂಕಾ ಪಡೆ ಬಳಿಕ ಪಾಕಿಸ್ತಾನದ ವಿರುದ್ಧ ಬೌಲಿಂಗ್‌ನಲ್ಲಿಯೂ ಮೇಲುಗೈ ಸಾಧಿಸಿದೆ. ಈ ಮೂಲಕ ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಕೊಳ್ಳುವ ಆತ್ಮ ವಿಶ್ವಾಸದಲ್ಲಿದೆ.
ಶ್ರೀಲಂಕಾದ ಸ್ಪಿನ್ನರ್ ರಮೇಶ್ ಮೆಂಡಿಸ್ ಬೌಲಿಂಗ್ ದಾಳಿಯಿಂದ ಕಂಗೆಟ್ಟಿರುವ ಪಾಕಿಸ್ತಾನದ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲು ವಿಫಲವಾಗಿದ್ದಾರೆ. ಈ ಮೂಲಕ ಪಂದ್ಯದ ಮೇಲೆ ಲಂಕಾ ಪಡೆ ಬಿಗಿ ಹಿಡಿತವನ್ನು ಮುಂದುವರಿಸಿದೆ. ಈ ಪಂದ್ಯದಲ್ಲಿ ಪಾಕಿಸ್ತಾನದ ಹಿರಿಯ ಆಟಗಾರನೋರ್ವ ವಿಶೇಷ ಸಾಧನೆ ಮಾಡಿದ್ದು ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ 13 ವರ್ಷಗಳ ಬಳಿಕ 1000 ರನ್ ಪೂರೈಸಿದ್ದಾರೆ.

ಸಾವಿರ ರನ್ ಗಳಿಸಿದ ಪಾಕ್ ಆಟಗಾರ
ಈ ವಿಶೇಷ ಸಾಧನೆ ಮಾಡಿದ್ದು ಪಾಕಿಸ್ತಾನದ ಅನುಭವಿ ಬ್ಯಾಟರ್ ಫಾವದ್ ಅಲಂ. 35ರ ಹರೆಯದ ಫಾವದ್ ಅಲಂ 2009ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾಕಿಸ್ತಾನದ ಪರವಾಗಿ ಪದಾರ್ಪಣೆ ಮಾಡಿದ್ದು ನಂತರ ಹೆಚ್ಚು ಅವಕಾಶ ಪಡೆಯಲು ವಿಫಲವಾಗಿ ತಂಡದಿಂದ ಹೊರಬಿದ್ದಿದ್ದರು. ಬಳಿಕ 2020ರಲ್ಲಿ ಫಾವದ್ ಅಲಂ ಮತ್ತೆ ಪಾಕಿಸ್ತಾನದ ಟೆಸ್ಟ್ ತಂಡದಲ್ಲಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು ಮಾತ್ರವಲ್ಲದೆ ತಂಡದಲ್ಲಿ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ.

ಎರಡನೇ ಪಂದ್ಯದಲ್ಲಿ ಕಣಕ್ಕಿಳಿದ ಫಾವದ್ ಅಲಂ
ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆಯಲು ವಿಫಲವಾಗಿದ್ದ ಫಾವದ್ ಅಲಂ ಎರಡನೇ ಪಂದ್ಯದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಜಿ ನಾಯಕ ಅಜರ್ ಅಲಿ ಒಂದಂಕಿಯನ್ನು ದಾಟಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ಅವರ ಸ್ಥಾನದಲ್ಲಿ ಫಾವದ್ ಅಲಂ ಅವಕಾಶ ಪಡೆದುಕೊಂಡಿದ್ದಾರೆ. ಇಂದಿನ ಈ ಪಂದ್ಯದಲ್ಲಿ ಕಣಕ್ಕಿಳಿಯುವ ಮುನ್ನ ಅಲಂ 28 ಇನ್ನಿಂಗ್ಸ್‌ಗಳಲ್ಲಿ 986 ರನ್‌ಗಳನ್ನು ಗಳಿಸಿದ್ದರು. 41.08ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ಅವರು ಐದು ಶತಕ ಹಾಗೂ ಎರಡು ಅರ್ಧ ಶತಕ ಗಳಿಸಿದ್ದಾರೆ.

11 ವರ್ಷಗಳ ಬಳಿಕ ಕಮ್‌ಬ್ಯಾಕ್
2009ರಲ್ಲಿ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ್ದ ಫಾವದ್ ಅಲಂ ಬಳಿಕ ಟೆಸ್ಟ್ ತಂಡದಿಂದ ಹೊರಬಿದ್ದಿದ್ದರು. ಸುದೀರ್ಘ 11 ವರ್ಷಗಳ ಬಳಿಕ ತಮ್ಮ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡುವ ಅವಕಾಶವನ್ನು ಪಡೆದುಕೊಳ್ಳುವಲ್ಲಿ ಅಲಂ ಯಶಸ್ವಿಯಾಗಿದ್ದರು. ಹೀಗೆ ಕಮ್‌ಬ್ಯಾಕ್ ಮಾಡಿದ ಫಾವದ್ ಅಲಂ 40ರ ಸರಾಸರಿಯಲ್ಲಿ 760 ರನ್ ಗಳಿಸಿದ್ದಾರೆ. ಜಿಂಬಾಬ್ವೆ ವಿರುದ್ಧ 140 ರನ್‌ಗಳಿಸಿದ್ದು ಫಾವದ್ ಅಲಂ ಅವರ ಅತಿ ಹೆಚ್ಚಿನ ಸ್ಕೋರ್ ಆಗಿದೆ.
ಇನ್ನು ಎರಡನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಶ್ರೀಲಂಕಾ ತಂಡ 378 ರನ್‌ಗಳಿಸಿ ಆಲೌಟ್ ಆಗಿದ್ದು ಪಾಕಿಸ್ತಾನ ಮೊದಲ ಸರದಿಯ ಬ್ಯಾಟಿಂಗ್ ನಡೆಸುತ್ತಿದೆ. ಪ್ರಮುಖ ಆಟಗಾರರು ದೊಡ್ಡ ಮೊತ್ತಗಳಿಸುವಲ್ಲಿ ವಿಫಲವಾಗಿದ್ದು ಮಧ್ಯಮ ಕ್ರಮಾಂಕದ ಆಟಗಾರ ಅಘಾ ಸಲ್ಮಾನ್ ಅರ್ಧ ಶತಕಗಳಿಸಿ ಆಡುತ್ತಿದ್ದಾರೆ. ಪ್ರಮುಖ ಆರು ವಿಕೆಟ್‌ಗಳನ್ನು ಪಾಕಿಸ್ತಾನ ಕಳೆದುಕೊಂಡಿದೆ.

ಇತ್ತಂಡಗಳ ಪ್ಲೇಯಿಂಗ್ XI ಹೀಗಿದೆ
ಶ್ರೀಲಂಕಾ: ದಿಮುತ್ ಕರುಣಾರತ್ನೆ (ಸಿ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಾಲ್, ಧನಂಜಯ ಡಿ ಸಿಲ್ವ, ನಿರೋಶನ್ ಡಿಕ್ವೆಲ್ಲಾ (WK), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೋ
ಬೆಂಚ್: ಲಕ್ಷಿತಾ ಮಾನಸಿಂಗ್, ಕಸುನ್ ರಜಿತಾ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ಕಾಮಿಂದು ಮೆಂಡಿಸ್, ಪಾತುಮ್ ನಿಸ್ಸಾಂಕ, ದಿಲ್ಶನ್ ಮಧುಶಂಕ
ಪಾಕಿಸ್ತಾನ ಸ್ಕ್ವಾಡ್: ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (c), ಮೊಹಮ್ಮದ್ ರಿಜ್ವಾನ್ (wk), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ
ಬೆಂಚ್: ಅಜರ್ ಅಲಿ, ಫಹೀಮ್ ಅಶ್ರಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಹಾರಿಸ್ ರೌಫ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications