For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ ಇತಿಹಾಸಲ್ಲಿ ಯಾರೂ ಮಾಡದ ಸಾಧನೆ ಮಾಡಿದ ಕಿರಾನ್ ಪೊಲಾರ್ಡ್!

Sl Vs Wi: Kieron Pollards 500th T20 party

ವೆಸ್ಟ್ ಇಂಡೀಸ್ ಆಟಗಾರರು ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಟಿ20 ಕ್ರಿಕೆಟ್‌ನಲ್ಲಿ ಹೊಸದೊಂದು ಮೈಲಿಗಲ್ಲು ಸೃಷ್ಟಿಸುವಲ್ಲಿ ಪೊಲಾರ್ಡ್ ಯಶಸ್ವಿಯಾಗಿದ್ದಾರೆ. ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಮೊದಲ ಪಂದ್ಯದಲ್ಲಿ ಈ ವಿಶಿಷ್ಟ ಸಾಧನೆಯನ್ನು ಮಾಡಿದ್ದಾರೆ.

ಆಲ್‌ರೌಂಡರ್ ಆಟಗಾರನಾಗಿರುವ ಕಿರಾನ್ ಪೊಲ್ಲಾರ್ಡ್ ಟಿ20 ಕ್ರಿಕೆಟ್ ಮಾದರಿಗೆ ಹೇಳಿ ಮಾಡಿಸಿದ ಆಟಗಾರ. ಹೀಗಾಗಿ ವಿಶ್ವದ ಎಲ್ಲಾ ಟಿ20 ಕ್ರಿಕೆಟ್‌ ಲೀಗ್‌ಗಳಲ್ಲೂ ಕಿರಾನ್ ಪೊಲಾರ್ಡ್ ಆಡುತ್ತಾರೆ. ಕ್ರಕೆಟ್ ಆಡುವ ಎಲ್ಲಾ ದೇಶಗಳಲ್ಲೂ ತಮ್ಮದೇ ಆದ ಅಭಿಮಾನಿಗಳನ್ನೂ ಹೊಂದಿದ್ದಾರೆ.

ಹಾಗಾದರೆ ಕಿರಾನ್ ಪೊಲಾರ್ಡ್ ಮಾಡಿದ ದಾಖಲೆ ಏನು ಅನ್ನೋದನ್ನು ಮುಂದೆ ಓದಿ:

ಯಾರೂ ತಲುಪದ ಸಾಧನೆ

ಯಾರೂ ತಲುಪದ ಸಾಧನೆ

ಪ್ರಮುಖ ಎಲ್ಲಾ ಟಿ20 ಲೀಗ್‌ಗಳಲ್ಲಿ ಕಿರಾನ್ ಪೊಲಾರ್ಡ್ ಪಾಲ್ಗೊಳ್ಳುತ್ತಾರೆ. ಅಲ್ಲದೆ ಟಿ20ಯಲ್ಲಿ ವೆಸ್ಟ್‌ ಇಂಡೀಸ್‌ ತಂಡವನ್ನು ಮುನ್ನಡೆಸುತ್ತಲೂ ಇದ್ದಾರೆ. ಹೀಗಾಗಿ ಟಿ20 ಪಂದ್ಯಗಳನ್ನು ಆಡುವ ವಿಚಾರದಲ್ಲಿ ಕಿರಾನ್ ಪೊಲಾರ್ಡ್ ಯಾರೂ ತಲುಪದ ಎತ್ತರವನ್ನು ತಲುಪಿ ಸಾಧನೆಯನ್ನು ಮಾಡಿದ್ದಾರೆ.

500 ಪಂದ್ಯಗಳಲ್ಲಿ ಭಾಗಿ

500 ಪಂದ್ಯಗಳಲ್ಲಿ ಭಾಗಿ

ಟಿ20 ಕ್ರಿಕೆಟ್‌ನಲ್ಲಿ ಕಿರಾನ್ ಪೊಲಾರ್ಡ್ 500ನೇ ಪಂದ್ಯವನ್ನಾಡುತ್ತಿದ್ದಾರೆ. ಇದು ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಬಾರಿಗೆ ಆಟಗಾರನೋರ್ವ ಈ ಸಾಧನೆಯನ್ನು ಮಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡದ ನಾಯಕ ಪೊಲಾರ್ಡ್ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ.

ಮತ್ತೊಂದು ಸಾಧನೆ

ಮತ್ತೊಂದು ಸಾಧನೆ

ಈ ಸಾಧನೆಯ ಜೊತೆಗೆ ಕಿರಾನ್ ಪೊಲಾರ್ಡ್ ಮತ್ತೊಂದು ದಾಖಲೆಯನ್ನೂ ಮಾಡಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 10,000 ರನ್‌ಗಳಿಸಿದ ಎರಡನೇ ಆಟಗಾರ ಎಂಬ ಖ್ಯಾತಿಗೂ ಪೊಲಾರ್ಡ್ ಪಾತ್ರರಾಗಿದ್ದಾರೆ. ಶ್ರೀಲಂಕಾ ಪಂದ್ಯದಲ್ಲಿ 34ರನ್‌ ಗಳಿಸಿದ ಪೊಲಾರ್ಡ್ ಭರ್ತಿ 10,000 ರನ್ ಪೇರಿಸಿದ್ದಾರೆ.

10000 ರನ್‌ ದಾಖಲಿಸಿದ ಇಬ್ಬರೇ ಆಟಗಾರರು

10000 ರನ್‌ ದಾಖಲಿಸಿದ ಇಬ್ಬರೇ ಆಟಗಾರರು

ಟಿ20 ಕ್ರಿಕೆಟ್‌ನಲ್ಲಿ 10,000 ರನ್ ದಾಖಲಿಸಿದ ಆಟಗಾರರು ಇಬ್ಬರೇ. ಅದು ಇಬ್ಬರೂ ಕೂಡ ಕೆರೇಬಿಯನ್ ಆಟಗಾರರೇ ಎಂಬುದು ಮತ್ತೊಂದು ವಿಶೇಷತೆ. ಕಿರಾನ್ ಪೊಲಾರ್ಡ್‌ಗೂ ಮುನ್ನ ವೆಸ್ಟ್‌ ಇಂಡೀಸ್‌ನ ದಿಗ್ಗಜ ಕ್ರಿಸ್ ಗೇಲ್ ಈ ಸಾಧನೆಯನ್ನು ಮಾಡಿದ್ದಾರೆ.

17 ತಂಡಗಳಲ್ಲಿ ಪೊಲಾರ್ಡ್ ಭಾಗಿ

17 ತಂಡಗಳಲ್ಲಿ ಪೊಲಾರ್ಡ್ ಭಾಗಿ

ವೆಸ್ಟ್ ಇಂಡೀಸ್ ತಂಡವನ್ನು ಪ್ರತಿನಿಧಿಸುವ ಜೊತೆಗೆ ಕಿರಾನ್ ಪೊಲಾರ್ಡ್ ಈವರೆಗೆ 17 ಬೇರೆ ಬೇರೆ ತಂಡಗಳನ್ನು ಪ್ರತಿನಿಧಿಸಿದ್ದಾರೆ. ಇದು ಕಿರಾನ್ ಪೊಲಾರ್ಡ್‌ಗೆ ಟಿ20 ಕ್ರಕೆಟ್‌ನಲ್ಲಿ ಎಷ್ಟು ಬೇಡಿಕೆಯಿದ ಎಎಂಬುದನ್ನು ತೋರಿಸುತ್ತದೆ. ಭಾರತದ ಐಪಿಎಲ್‌ನಲ್ಲೂ ಪೊಲಾರ್ಡ್ ಪ್ರಮುಖ ಆಟಗಾರರಾಗಿದ್ದಾರೆ.

13 ಟ್ರೋಫಿ ಗೆದ್ದ ಸಾಧನೆ

13 ಟ್ರೋಫಿ ಗೆದ್ದ ಸಾಧನೆ

500 ಪಂದ್ಯಗಳಲ್ಲಿ ಆಡಿರುವ ಕಿರಾನ್ ಪೊಲಾರ್ಡ್ ಅನೇಕ ಟೂರ್ನಿಗಳ ಚಾಂಪಿಯನ್ ಕೂಡ ಆಗಿದ್ದಾರೆ. ಅದರಲ್ಲಿ ಪ್ರಮುಖವಾದನ್ನು ವೆಸ್ಟ್‌ ಇಂಡೀಸ್‌ನ ವಿಶ್ವಕಪ್ ಟ್ರೋಫಿ. ಈ ಟಿ20 ವಿಶ್ವಕಪ್‌ ಟ್ರೋಫಿ ಸೇರಿದಂತೆ 13 ಟ್ರೋಫಿಗಳನ್ನು ಗೆಲ್ಲುವಲ್ಲಿ ಕಿರಾನ್ ಪೊಲಾರ್ಡ್ ಪ್ರತಿನಿಧಿಸುವ ತಂಡಗಳು ಯಶಸ್ವಿಯಾಗಿವೆ.

ಐಪಿಎಲ್‌ನಲ್ಲಿ ಪೊಲಾರ್ಡ್

ಐಪಿಎಲ್‌ನಲ್ಲಿ ಪೊಲಾರ್ಡ್

2010 ರಿಂದ ಕಿರಾನ್ ಪೊಲಾರ್ಡ್ ಐಪಿಎಲ್‌ನಲ್ಲಿ ಆಟವಾಡುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸುವ ಕಿರಾನ್ ಪೊಲಾರ್ಡ್ 170 ಐಪಿಎಲ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಹಾಲಿ ಚಾಂಪಿಯನ್ ಆಗರುವ ಮುಂಬೈ ಐಪಿಎಲ್ 2020 ರಲ್ಲಿ ಮತ್ತೆ ಚಾಂಪಿಯನ್ ಆಗಿ ಮುಂದುವರಿಯಲು ಎದುರು ನೋಡುತ್ತಿದ್ದು ಅದಕ್ಕೆ ಪೊಲಾರ್ಡ್ ಪ್ರದರ್ಶನ ಬಹಳ ಪ್ರಮುಖವಾಗಿದೆ.

Story first published: Thursday, March 5, 2020, 16:28 [IST]
Other articles published on Mar 5, 2020
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+