SMAT 2021-22: ಕರ್ನಾಟಕ ತಂಡಕ್ಕೆ ಮುಂಬೈ ಸವಾಲು: ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಪಂದ್ಯಗಳು ಆರಂಭವಾಗಿದ್ದು ಕರ್ನಾಟಕ ಈ ಬಾರಿಯ ಆವೃತ್ತಿಯಲ್ಲಿ ತನ್ನ ಮೊದಲ ಪಂದ್ಯವನ್ನು ಇಂದು ಆಡುತ್ತಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮುಂಬೈ ಎದುರಾಳಿಯಾಗಿದೆ. ಟಾಸ್ ಗೆದ್ದಿರುವ ಮುಂಬೈ ತಂಡ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ.
ಕರ್ನಾಟಕ ಹಾಗೂ ಮುಂಬೈ ಎರಡು ತಂಡಗಳು ಕೂಡ ಬಲಿಷ್ಠವಾಗಿದ್ದು ಪಂದ್ಯ ತೀವ್ರ ಕುತೂಹಲ ಮೂಡಿಸಿದೆ. ಕರ್ನಾಟಕ ತಂಡದ ನಾಯಕತ್ವ ಮನೀಶ್ ಪಾಂಡೆ ವಹಿಸಿಕೊಂಡಿದ್ದರೆ ಮುಂಬೈ ತಂತದ ನಾಯಕತ್ವ ಅಜಿಂಕ್ಯ ರಹಾನೆ ಹೆಗಲೇರಿದೆ.
ಕರ್ನಾಟಕ ತಂಡದಲ್ಲಿ ನಾಯಕ ಮನೀಶ್ ಪಾಂಡೆ ಸೇರಿದಂತೆ ಮಯಾಂಕ್ ಅಗರ್ವಾಲ್, ದೆವದತ್ ಪಡಿಕ್ಕಲ್, ಕರುಣ್ ನಾಯರ್, ಕೆ ಗೌತಮ್, ಪ್ರಸಿದ್ಧ್ ಕೃಷ್ಣ ಅವರಂತಾ ಸ್ಟಾರ್ ಆಟಗಾರರನ್ನು ಹೊಂದಿದೆ. ಮುಂಬೈ ತಂಡದಲ್ಲಿಯೂ ಅಜಿಂಕ್ಯ ರಹಾನೆ ಜೊತೆಗೆ ಪೃಥ್ವಿ ಶಾ, ಯಶಸ್ವೀ ಜೈಸ್ವಾಲ್, ಆದಿತ್ಯ ತಾರೆ ಮುಂತಾದ ಸ್ಟಾರ್ ಆಟಗಾರರಿದ್ದಾರೆ. ಇನ್ನು ಇಂದು ನಡೆಯುವ ಪಂದ್ಯದ ಮೂಲಕ ವಿದ್ಯಾಧರ್ ಪಾಟೀಲ್ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕ ಭರ್ಜರಿ ಆರಂಭವನ್ನು ಪಡೆದಿದೆ. ಅಜಿಂಕ್ಯಾ ರಹಾನೆ ನೇತೃತ್ವದ ಮುಂಬೈ ತಂಡದ ವಿರುದ್ಧ ನಡೆದ ರೋಚಕ ಕದನದಲ್ಲಿ ಮನೀಶ್ ಪಾಂಡೆ ಬಳಗ ಎಲ್ಲಾ ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಗೆದ್ದು ಬೀಗಿದೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಕರ್ನಾಟಕ ತಂಡವನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತು. ಈ ಸವಾಲು ಸ್ವೀಕರಿಸಿದ ಕರ್ನಾಟಕ ಪರವಾಗಿ ಉತ್ತಮ ಆರಂಭ ಬರಲಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ್ದ ಮಯಾಂಕ್ ಅಗರ್ವಾಕ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ರನ್ ಗಳಿಸುವ ಮೊದಲೇ ಬೇರ್ಪಟ್ಟಿತ್ತು. ಮಯಾಂಕ್ ಪಂದ್ಯದ ಮೊದಲ ಎಸೆತದಲ್ಲಿಯೇ ಮೋಹಿತ್ ಅವಸ್ತಿ ಎಸೆತಕ್ಕೆ ಕ್ಯಾಚ್ ನೀಡಿ ನಿರ್ಗಮಿಸಿದರು. ಅದಾದ ಬಳಿಕ ದೇವದತ್ ಪಡಿಕ್ಕಲ್ ಕೂಡ ತಂಡದ ಮೊತ್ತ 15 ರನ್ ಆಗುವಷ್ಟರಲ್ಲಿ ವಿಕೆಟ್ ಕಳೆದುಕೊಂಡು ಫೆವಿಲಿಯನ್ ಸೇರಿದ್ದರು. ಕರ್ನಾಟಕದ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿತ್ತು.
ಕರುಣ್ಈ ಸಂದರ್ಭದಲ್ಲಿ ಜೊತೆಯಾಗಿದ್ದು ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್. ಈ ಜೋಡಿ ಕರ್ನಾಟಕ ಪರವಾಗಿ ಅಮೋಘ ಜೊತೆಯಾಟವನ್ನು ನೀಡಿದರು. ಮುಂಬೈ ತಂಡದ ಬೌಲರ್‌ಗಳನ್ನು ದಂಡಿಸುತ್ತಾ ಸಾಗಿರ ಈ ಜೋಡಿ ಬೃಹತ್ ಜೊತೆಯಾಟವನ್ನು ನೀಡಿದರು. ಬಹುತೇಕ ಇನ್ನಿಂಗ್ಸ್‌ನ ಕೊನೆಯ ವರೆಗೂ ಆಡಿದ್ದ ಈ ಜೋಡಿ ಇನ್ನುಂಗ್ಸ್‌ನ ಅಂತಿಮ ಓವರ್‌ನ ನಾಲ್ಕನೇ ಹಾಗೂ ಆರನೇ ಎಸೆತದಲ್ಲಿ ವಿಕೆಟ್ ಕಳೆದುಕೊಂಡರು. ಆದರೆ ಅಷ್ಟರಲ್ಲಿ ಇವರಿಬ್ಬರು ಸವಾಲಿನ ಮೊತ್ತವನ್ನು ಪೇರಿಸುವಲ್ಲಿ ಯಶಸ್ವಿಯಾಗಿದ್ದರು.
ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಭರ್ಜರಿ 149 ರನ್‌ಗಳ ಜೊತೆಯಾಟವನ್ನು ತಂಡಕ್ಕೆ ನೀಡಿದರು. ನಾಯಕ ಮನೀಶ್ ಪಾಂಡೆ ಈ ಪಂದ್ಯದಲ್ಲಿ 64 ಎಸೆತಗಳನ್ನು ಎದುರಿಸಿದ್ದು 84 ರನ್ ಸಿಡಿಸಿದ್ದಾರೆ. ಕರುಣ್ ನಾಯರ್ 53 ಎಸೆತಗಳಲ್ಲಿ 72 ರನ್‌ಗಳ ಕೊಡುಗೆ ನೀಡಿದರು. ಈ ಮೂಲಕ ಅನುಭವಿಗಳಿಬ್ಬರು ಕರ್ನಾಟಕ ತಂಡಕ್ಕೆ ಆಸರೆಯಾದರು.
ಕರ್ನಾಟಕ ಆಡುವ ಬಳಗ: ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಶರತ್ ಬಿಆರ್ (ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ವಿದ್ಯಾಧರ್ ಪಾಟೀಲ್, ಅನಿರುದ್ಧ ಜೋಶಿ, ಪ್ರತೀಕ್ ಜೈನ್, ಕೆಸಿ ಕಾರಿಯಪ್ಪ, ಪ್ರಸಿದ್ಧ್ ಕೃಷ್ಣ
ಬೆಂಚ್: ರೋಹನ್ ಕದಂ, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ಜಗದೀಶ ಸುಚಿತ್, ವಿಜಯ್‌ಕುಮಾರ್ ವೈಶಾಕ್, ಅಭಿನವ್ ಮನೋಹರ್, ನಿಹಾಲ್ ಉಳ್ಳಾಲ್, ಕೃಷ್ಣಮೂರ್ತಿ ಸಿದ್ಧಾರ್ಥ್, ದರ್ಶನ್ ಎಂ.ಬಿ.
ಮುಂಬೈ ಆಡುವ ಬಳಗ: ಯಶಸ್ವಿ ಜೈಸ್ವಾಲ್, ಪೃಥ್ವಿ ಶಾ, ಅಜಿಂಕ್ಯ ರಹಾನೆ (ನಾಯಕ), ಆದಿತ್ಯ ತಾರೆ (ವಿಕೆಟ್ ಕೀಪರ್), ಶಿವಂ ದುಬೆ, ತುಷಾರ್ ದೇಶಪಾಂಡೆ, ಸಿದ್ಧೇಶ್ ಲಾಡ್, ಅಥರ್ವ ಅಂಕೋಲೆಕರ್, ಅಮನ್ ಹಕೀಮ್ ಖಾನ್, ತನುಷ್ ಕೋಟ್ಯಾನ್, ಮೋಹಿತ್ ಅವಸ್ತಿ
ಬೆಂಚ್: ಧವಳ್ ಕುಲಕರ್ಣಿ, ರಾಯ್ಸ್ಟನ್ ಡಯಾಸ್, ಅರ್ಮಾನ್ ಜಾಫರ್, ಸಾಯಿರಾಜ್ ಪಾಟೀಲ್, ಪ್ರಶಾಂತ್ ಸೋಲಂಕಿ, ಹಾರ್ದಿಕ್ ತಮೋರ್, ದೀಪಕ್ ಶೆಟ್ಟಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications