SMAT 2021-22: ಬರೋಡಾ ವಿರುದ್ಧವೂ ಗೆದ್ದ ಕರ್ನಾಟಕ: ಸತತ ನಾಲ್ಕನೇ ಗೆಲುವು ಪಡೆದ ಮನೀಶ್ ಪಡೆ

ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಮತ್ತೊಂದು ಗೆಲುವು ಸಾಧಿಸಿದೆ. ಬರೋಡಾ ವಿರುದ್ಧ ಇಂದು ನಡೆದ ಪಂದ್ಯದಲ್ಲಿಯೂ ಕರ್ನಾಟಕ ಭರ್ಜರಿ ಗೆಲುವು ದಾಖಲಿಸಿದ್ದು ಟೂರ್ನಿಯಲ್ಲಿ ಆಡಿದ ನಾಲ್ಕು ಪಂದ್ಯಗಳ ಪೈಕಿ ನಾಲ್ಕರಲ್ಲಿಯೂ ಗೆಲುವು ಸಾಧಿಸಿದೆ. ಬರೋಡಾ ವಿರುದ್ಧ ನಡೆದ ಪಂದ್ಯದಲ್ಲಿ 135 ರನ್‌ಗಳ ಗುರಿ ಪಡೆದ ಕರ್ನಾಟಕ ಇನ್ನು ಐದು ಎಸೆತಗಳು ಬಾಕಿಯಿರುವಂತೆಯೇ 7 ವಿಕೆಟ್‌ಗಳ ಅಂತರದಿಂದ ಭರ್ಜರಿಯಾಗಿ ಗೆದ್ದು ಬೀಗಿದೆ.
ಟಾಸ್ ಗೆದ್ದ ಬರೋಡಾ ತಂಡದ ನಾಯಕ ಕೃನಾಲ್ ಪಾಂಡ್ಯ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಈ ನಿರ್ಧಾರಕ್ಕೆ ಪೂರಕವಾದ ಬ್ಯಾಟಿಂಗ್ ಪ್ರದರ್ಶನ ನೀಡಲು ಕೃನಾಲ್ ನೇತೃತ್ವದ ತಂಡ ವಿಫಲವಾಯಿತು. ಆರಂಭದಿಂದಲೇ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ ಬರೋಡಾ ಉತ್ತಮ ಜೊತೆಯಾಟ ನೀಡಲು ಆಟಗಾರರು ವಿಫಲವಾದರು. ಭಾನು ಪನಿಯಾ ಗಳಿಸಿದ 36 ರನ್ ಬರೋಡಾ ಪರವಾಗಿ ಗಳಿಸಿದ ಹೈಯೆಸ್ಟ್ ಸ್ಕೋರ್ ಆಗಿದೆ. ಪಾರ್ಥ್ ಕೊಹ್ಲಿ 24 ರನ್‌ಗಳಿಸಿದರೆ ದ್ರುವ್ ಪಟೇಲ್ 23 ರನ್ ಸಿಡಿಸಿದರು. ಸ್ವತಃ ನಾಯಕ ಕೃನಾಲ್ ಪಾಂಡ್ಯ ಕೇವಲ 7 ರನ್‌ಗಳಿಸಿ ವೈಫಲ್ಯವನ್ನು ಅನುಭವಿಸಿದ್ದಾರೆ. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಬರೋಡಾ ತಂಡ 7 ವಿಕೆಟ್ ಕಳೆದುಕೊಂಡು 134 ರನ್‌ಗಳಿಸಲು ಶಕ್ತವಾಯಿತು.
ಇನ್ನು ಈ ಪಂದ್ಯದಲ್ಲಿ ಕರ್ನಾಟಕದ ಪರವಾಗಿ ಬೌಲಿಂಗ್ ವಿಭಾಗದಲ್ಲಿ ವಿಜಯ್ ಕುಮಾರ್ ವೈಶಾಕ್ ಹಾಗೂ ಕೆ ಗೌತಮ್ ತಲಾ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಪ್ರಸಿದ್ಧ್ ಕೃಷ್ಣ ಹಾಗೂ ಸುಜಿತ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.

ಉತ್ತಮ ಆರಂಭ ಪಡೆದ ಕರ್ನಾಟಕ
ಇನ್ನು ಬರೋಡಾ ತಂಡ ನೀಡಿದ 135 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಅದ್ಭುತ ಆರಂಭ ದೊರೆಯಿತು. ಮಯಾಂಕ್ ಅಗರ್ವಾಲ್ ಹಾಗೂ ದೇವದತ್ ಪಡಿಕ್ಕಲ್ ಈ ಪಂದ್ಯದಲ್ಲಿ 73 ರನ್‌ಗಳ ಜಿತೆಯಾಟವನ್ನು ಆಡಿದರು. 25 ಎಸೆತಗಳಲ್ಲಿ 28 ರನ್‌ಗಳಿಸಿದ ಮಯಾಂಕ್ ಅಗರ್ವಾಲ್ ನಂತರ ನಿನಾದ್ ನಿತ್ವಾಗೆ ವಿಕೆಟ್ ಒಪ್ಪಿಸಿ ಹೊರ ನಡೆಯುವ ಮೂಲಕ ಮಯಾಂಕ್ ಹೋರಾಟ ಮುಕ್ತಾಯವಾಯಿತು. ನಂತರ ನಾಯಕ ಮನೀಶ್ ಪಾಂಡೆ ಕೇವಲ 3 ರನ್‌ಗಳಿಗೆ ಔಟ್ ಆಗುವ ಮೂಲಕ ಆತಂಕವನ್ನು ಮೂಡಿಸಿದರು.

ಆತಂಕ ದೂರಮಾಡಿದ ಪಡಿಕ್ಕಲ್, ನಾಯರ್
ಇನ್ನು ಈ ಪಂದ್ಯದಲ್ಲಿ ಕರ್ನಾಟಕ ತಂಡದ ಆರಂಬಿಕ ಆಟಗಾರ ದೇವದತ್ ಪಡಿಕ್ಕಲ್ ಅದ್ಭುತ ಪ್ರದರ್ಶನ ನೀಡಿದ್ದಾರೆ. ನಂತರ ಕರುಣ್ ನಾಯರ್ ಕೂಡ ಉತ್ತಮ ಪ್ರದರ್ಶನ ನಿಡುವ ಮೂಲಕ ತಂಡದ ಜಯವನ್ನು ಸಾರಿದ್ದಾರೆ. ದೇವದತ್ ಪಡಿಕ್ಕಲ್ 47 ಎಸೆತಗಳಲ್ಲಿ ಭರ್ಜರಿ 56 ರನ್‌ಗಳನ್ನು ಸಿಡಿಸಿದ್ದಾರೆ. ನಂತರ ಅವರು ಕೂಡ ನಿನಾದ್ ರಿತ್ವಾ ಎಸೆತಕ್ಕೆ ಔಟಾಗಿ ನಿರ್ಗಸಿದ್ದಾರೆ.

ಗೆಲುವನ್ನು ಸಾರಿದ ಕರುಣ್, ಜೋಶಿ
ದೇವದತ್ ಪಡಿಕ್ಕಲ್ ವಿಕೆಟ್ ಕಳೆದುಕೊಂಡಾಗ ಕರ್ನಾಟಕ 15.5 ಓವರ್‌ಗಳಲ್ಲಿ 104 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ನಂತರ ಬಂದ ಅನಿರುದ್ಧ ಜೋಶಿ ಜೊತೆಗೆ 33 ರನ್‌ಗಳ ಜೊತೆಯಾಟದಲ್ಲಿ ಭಾಗಿಯಾಗುವ ಮೂಲಕ ಭರ್ಜರಿಯಾಗಿ ಗೆಲುವು ಪಡೆದುಕೊಂಡಿದೆ. ಕರ್ನಾಟಕ ತಂಡ ಕೇವಲ 3 ವಿಕೆಟ್ ಕಳೆದುಕೊಂಡು ಈ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications