SMAT 2021: ರೋಚಕ ಪಂದ್ಯ ಟೈ, ಸೂಪರ್ ಓವರ್‌ನಲ್ಲಿ ಬಂಗಾಳ ವಿರುದ್ಧ ಗೆದ್ದ ಕರ್ನಾಟಕ ಸೆಮಿಫೈನಲ್‌ಗೆ ಲಗ್ಗೆ

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡ ಬಂಗಾಳದ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿದೆ. ನಿಗದಿತ 20 ಓವರ್‌ಗಳ ಪಂದ್ಯದಲ್ಲಿ ಟೈ ಮಾಡಿಕೊಮಡ ಕರ್ನಾಟಕ ಹಾಗೂ ಬಂಗಾಳ ತಂಡಗಳು ನಂತರ ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ಪಡೆಯಲಾಯಿತು. ಸೂಪರ್ ಓವರ್‌ನಲ್ಲಿ ಮಿಂಚಿದ ಕರ್ನಾಟಕದ ಬೌಲರ್ ಕಾರಿಯಪ್ಪ ಸುಲಭ ಗುರಿ ಪಡೆಯಲು ಕಾರಣವಾದರು. ನಂತರ ಕರ್ನಾಟಕ ಈ ಗುರಿಯನ್ನು ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.
ಬಂಗಾಳ ತಂಡ ಈ ಪಂದ್ಯದಲ್ಲಿ ಉತ್ತಮವಾಗಿ ರನ್ ಗಳಿಸುತ್ತಾ ಸಾಗಿದರೂ ಕೂಡ ಕರ್ನಾಟಕ ವಿಕೆಟ್ ಪಡೆಯುತ್ತಾ ಸಾಗಿತ್ತು. ಪಂದ್ಯದುದ್ದಕ್ಕೂ ಒಮ್ಮೆ ಕರ್ನಾಟಕ ಮೇಲುಗೈ ಸಾಧಿಸಿದರೆ ಮತ್ತೊಮ್ಮೆ ಬಂಗಾಳ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಕಡೆಗೆ ಅಂತಿಮ ಓವರ್‌ನಲ್ಲಿ 20 ರನ್‌ಗಳಿಸುವ ಸವಾಲು ಪಡೆಯಿತು ಬಂಗಾಳ. ಈ ಕಠಿಣ ಸವಾಲಿನಲ್ಲಿಯೂ ಬಹುತೇಕ ಯಶಸ್ಸು ಸಾಧಿಸಿದ ಬಂಗಾಳ 19.5 ಓವರ್‌ನಲ್ಲಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಅಂತಿಮ ಒಂದು ಎಸೆತದಲ್ಲಿ ಒಂದು ರನ್‌ಗಳಿಸುವ ಸವಾಲು ಬಂಗಾಳದ ಮುಂದಿತ್ತು. ಆದರೆ ಈ ಸಂದರ್ಭದಲ್ಲಿ ಮನೀಶ್ ಪಾಂಡೆಯ ಮಿಂಚಿನ ಫೀಲ್ಡಿಂಗ್‌ನಿಂದಾಗಿ ಕರ್ನಾಟಕ ತಂಡ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಕರುಣ್ ಭರ್ಜರಿ ಆಟ, ಸಾಧಾರಣ ಗುರಿ ನೀಡಿದ ಕರ್ನಾಟಕ
ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಕರ್ನಾಟಕ ಉತ್ತಮ ಆರಂಬ ಪಡೆಯುವಲ್ಲಿ ವಿಫಲವಾಯಿತು. ನಂತರ ತಂಡದ ಮೊತ್ತವು ಕೂಡ ನಿಧಾನಗತಿಯಲ್ಲಿ ಸಾಗಿತ್ತು. ಕರ್ನಾಟಕದ ರನ್‌ವೇಗವನ್ನು ಹೆಚ್ಚಿಸಿದ್ದು ಅನುಭವಿ ಆಟಗಾರ ಕರುಣ್ ನಾಯರ್. 29 ಎಸೆತ ಎದುರಿಸಿದ ಕರುಣ್ ಭರ್ಜರಿ 55 ರನ್ ಬಾರಿಸಿ ತಂಡ ಗೌರವದ ಮೊತ್ತ ಗಳಿಸಲು ಕಾರಣವಾದರು. ರೋಹನ್ ಕದಮ್ 29 ಎಸೆತಗಳಲ್ಲಿ 30 ರನ್ ಗಳಿಸಿದರೆ ನಾಯಕ ಮನೀಶ್ ಪಾಂಡೆ 34 ಎಸೆತಗಳಲ್ಲಿ 29 ರನ್‌ಗಳಿಸಿದರು. ಅಂತಿಮವಾಗಿ ಕರ್ನಾಟಕ ನಿಗದಿತ 20 ಓವರ್‌ಗಳಲ್ಲಿ 160 ರನ್‌ಗಳಿಸಲು ಶಕ್ತವಾಯಿತು.

ಬಂಗಾಳದ ಹೋರಾಟ
ಈ ಮೊತ್ತವನ್ನು ಬೆನ್ನಟ್ಟಿದ ಬಂಗಾಳ ಮೊದಲ ಓವರ್‌ನಲ್ಲಿಯೇ 20 ರನ್‌ಗಳಿಸುವ ಮೂಲಕ ಅಬ್ಬರಿಸುವ ಸೂಚನೆ ನೀಡಿತ್ತು. ಆದರೆ ವಿದ್ಯಾದರ್ ಪಾಟೀಲ್ ಎರಡನೇ ಓವರ್‌ನ ಮೊದಲ ಎಸೆತದಲ್ಲಿಯೇ ಈ ಜೋಡಿಯನ್ನು ಬೇರ್ಪಡಿಸಿ ಕರ್ನಾಟಕಕ್ಕೆ ಮೊದಲ ಯಶಸ್ಸು ದೊರಕಿಸಿದರು. ನಂತರ ಬಂಗಾಳ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೂ ಕೂಡ ಮತ್ತೊಂದು ತುದಿಯಲ್ಲಿ ವೃತ್ತಿಕ್ ಚಟರ್ಜೀ ಕರ್ನಾಟಕಕ್ಕೆ ಕಾಲ ಕಾಡಿದರು. 40 ಎಸೆತಗಳಲ್ಲಿ 51 ರನ್‌ಗಳಿಸಿದ ವೃತ್ತಿಕ್ ಚಟರ್ಜಿಯನ್ನು ದರ್ಶನ್ ಎಂಬಿ ಔಟ್ ಮಾಡುವ ಮೂಲಕ ಕರ್ನಾಟಕಕ್ಕೆ ಮೇಲುಗೈ ಒದಗಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ತಂಡ 108 ರನ್‌ಗಳಿಗೆ 6 ವಿಕೆಟ್ ಪಡೆದುಕೊಂಡು ಗೆಲುವಿನ ಆತ್ಮ ವಿಶ್ವಾಸದಲ್ಲಿತ್ತು. ಆದರೆ ಕ್ರೀಸ್‌ನಲ್ಲಿದ್ದ ರಿತ್ವಿಕ್ ಚೌಧರಿ ಬಂಗಾಳದ ಗೆಲುವಿನ ಅವಕಾಶವನ್ನು ತೆರೆದಿಟ್ಟರು. 18 ಎಸೆತಗಳಲ್ಲಿ 36 ರನ್ ಸಿಡಿಸಿದ ರಿತ್ವಿಕ್ ಕರ್ನಾಟಕದಿಂದ ಜಯವನ್ನು ಬಹುತೇಕ ಕಸಿದಿದ್ದರು. ಆದರೆ ಅಂತಿಮ ಎಸೆತವನ್ನು ಎದುರಿಸಲು ಸ್ಟ್ರೈಕ್‌ನಲ್ಲಿದ್ದ ಆಕಾಶ್ ದೀಪ್ ರನೌಟ್ ಆಗುವ ಮೂಲಕ ಕರ್ನಾಟಕ ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಸೂಪರ್ ಓವರ್‌ನಲ್ಲಿ ಕರ್ನಾಟಕಕ್ಕೆ ಗೆಲುವು
ಇನ್ನು ಈ ಕ್ವಾರ್ಟರ್‌ಫೈನಲ್ ಪಂದ್ಯ ರೋಚಕ ಟೈ ಫಲಿತಾಂಶವನ್ನು ಕಂಡ ಕಾರಣ ಸೂಪರ್ ಓವರ್‌ನಲ್ಲಿ ಪಲಿತಾಂಶವನ್ನು ಪಡೆಯಲಾಯಿತು. ಈ ಸೂಪರ್ ಓವರ್‌ನಲ್ಲಿ ಬಂಗಾಳ ಮೊದಲಿಗೆ ಬ್ಯಾಟಿಂಗ್ ನಡೆಸಿತು. ಕರ್ನಾಟಕದ ಪರವಾಗಿ ಬೌಲಿಂಗ್ ದಾಳಿಗಿಳಿದ ಕಾರಿಯಪ್ಪ ಅದ್ಭುತ ಪ್ರದರ್ಶನ ನೀಡಿ ಬಂಗಾಳವನ್ನು ಕೇವಲ 5 ರನ್‌ಗಳಿಗೆ ಕಟ್ಟಿ ಹಾಕುವಲ್ಲಿ ಯಶಸ್ವಿಯಾದರು. ಕರ್ನಾಟಕ ಸೆಮಿಫೈನಲ್‌ಗೆ ಪ್ರವೇಶಿಸಲು ಒಂದು ಓವರ್‌ನಲ್ಲಿ 6 ರನ್‌ಗಳಿಸುವ ಸವಾಲು ಪಡೆಯಿತು. ಕರ್ನಾಟಕ ಪರವಾಗಿ ಬ್ಯಾಟಿಂಗ್‌ಗೆ ನಾಯಕ ಮನೀಶ್ ಪಾಂಡೆ ಹಾಗೂ ಕರುಣ್ ನಾಯರ್ ಕಣಕ್ಕಿಳಿದರು. ಮೊದಲ ಎಸೆತದಲ್ಲಿ ಮನೀಶ್ ಪಾಂಡೆ ಎರಡು ರನ್ ಗಳಿಸಿದರು. ಮುಖೇಶ್ ಕುಮಾರ್ ಎಸೆದ ಎರಡನೇ ಎಸೆತವನ್ನು ಮನೀಶ್ ಪಾಂಡೆ ಭರ್ಜರಿಯಾಗಿ ಸಿಕ್ಸರ್‌ಗೆ ಅಟ್ಟಿದರು. ಈ ಮೂಲಕ ಕರ್ನಾಟಕ ಅದ್ಭುತವಾದ ಗೆಲುವು ಸಾಧಿಸಿದೆ. ಈ ಗೆಲುವು ಕರ್ನಾಟಕಕ್ಕೆ ಸೆಮಿಫೈನಲ್‌ನ ಟಿಕೆಟ್ ನೀಡಿದೆ. ಸೆಮಿಫೈನಲ್‌ನಲ್ಲಿ ಕರ್ನಾಟಕ ವಿದರ್ಭ ತಂಡವನ್ನು ಎದುರಿಸಲಿದೆ.
ಬಂಗಾಳ, ಪ್ಲೇಯಿಂಗ್ XI: ಸುದೀಪ್ ಚಟರ್ಜಿ (ನಾಯಕ), ಅಭಿಷೇಕ್ ದಾಸ್, ಶ್ರೀವತ್ಸ್ ಗೋಸ್ವಾಮಿ (ವಿಕೆಟ್ ಕೀಪರ್), ಕೈಫ್ ಅಹ್ಮದ್, ರಿತ್ವಿಕ್ ಚೌಧರಿ, ಶಹಬಾಜ್ ಅಹ್ಮದ್, ಸಯಾನ್ ಘೋಷ್, ರಿಟಿಕ್ ಚಟರ್ಜಿ, ಗೀತ್ ಪುರಿ, ಆಕಾಶ್ ದೀಪ್, ಮುಖೇಶ್ ಕುಮಾರ್
ಬೆಂಚ್: ಸುಜಿತ್ ಕುಮಾರ್ ಯಾದವ್, ಪ್ರದೀಪ್ತ ಪ್ರಮಾಣಿಕ್, ಪ್ರತಾಪ್ ಸಿಂಗ್, ಇಶಾನ್ ಪೊರೆಲ್, ಕರಣ್ ಲಾಲ್, ಸುವಂಕರ್ ಬಾಲ್, ಮೊಹಮ್ಮದ್ ಕೈಫ್, ರಂಜೋತ್ ಸಿಂಗ್, ಶಾಕಿರ್ ಗಾಂಧಿ
ಕರ್ನಾಟಕ, ಪ್ಲೇಯಿಂಗ್ XI: ರೋಹನ್ ಕದಂ, ಶರತ್ ಬಿಆರ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಅಭಿನವ್ ಮನೋಹರ್, ಅನಿರುದ್ಧ ಜೋಶಿ, ಜಗದೀಶ ಸುಚಿತ್, ವಿಜಯ್‌ಕುಮಾರ್ ವೈಶಾಕ್, ಕೆಸಿ ಕಾರಿಯಪ್ಪ, ವಿದ್ಯಾಧರ್ ಪಾಟೀಲ್, ದರ್ಶನ್ ಎಂಬಿ
ಬೆಂಚ್: ವಿ ಕೌಶಿಕ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ಆದಿತ್ಯ ಸೋಮಣ್ಣ, ಪ್ರತೀಕ್ ಜೈನ್, ನಿಹಾಲ್ ಉಳ್ಳಾಲ್, ರಿತೇಶ್ ಭಟ್ಕಳ್, ಕೃಷ್ಣಮೂರ್ತಿ ಸಿದ್ಧಾರ್ಥ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications