For Quick Alerts
ALLOW NOTIFICATIONS  
For Daily Alerts
 

SMAT 2021: ಕ್ವಾರ್ಟರ್ ಫೈನಲ್: ಕರ್ನಾಟಕ vs ಬಂಗಾಳ, ಟಾಸ್ ರಿಪೋರ್ಟ್, ಆಡುವ ಬಳಗ

SMAT-2021, Quarter Final 2, Karnataka vs Bengal, Toss report and Playing XI

ಸಯ್ಯದ್ ಮುಷ್ತಾಕ್ ಟ್ರೋಫಿಯ ಕ್ವಾರ್ಟರ್ ಫೈನಲ್ ಪಂದ್ಯ ಆರಂಭವಾಗಿದ್ದು ಕರ್ನಾಟಕ ಹಾಗೂ ಬಂಗಾಳ ತಂಡಗಳು ಸೆಣೆಸಾಡುತ್ತಿದೆ. ಈ ಪಂದ್ಯದಲ್ಲಿ ಕರ್ನಾಟಕ ತಂಡ ಟಾಸ್ ಗೆಲ್ಲುವಲ್ಲಿ ವಿಫಲವಾಗಿದ್ದು ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಸ್ವೀಕರಿಸಿದೆ. ಬಂಗಾಳ ತಂಡದ ನಾಯಕ ಸುದೀಪ್ ಚಟರ್ಜೀ ಟಾಸ್ ಗೆದ್ದಿದ್ದು ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಬಂಗಾಳ ಹಾಗು ಕರ್ನಾಟಕ ತಂಡಗಳು ಅದ್ಭುತವಾದ ಪ್ರದರ್ಶನ ನೀಡುತ್ತಿದೆ. ಎಲೈಟ್ ಗ್ರೂ ಬಿಯಲ್ಲಿ ಕರ್ನಾಟಕ ಹಾಗೂ ಬಂಗಾಳ ತಂಡಗಳು ಒಂದೇ ಗುಂಪಿನಲ್ಲಿತ್ತು. ಕರ್ನಾಟಕ ತಂಡ ಈ ಬಾರಿಯ ಟೂರ್ನಿಯ ಏಕೈಕ ಸೋಲನ್ನು ಬಂಗಾಳ ವಿರುದ್ಧವೇ ಅನುಭವಿಸಿತ್ತು. ಹೀಗಾಗಿ ಇಂದಿನ ಪಂದ್ಯದಲ್ಲಿ ಬಂಗಾಳ ತಂಡ ಹೆಚ್ಚಿನ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿಯುತ್ತಿದೆ. ಇಂದಿನ ಪಂದ್ಯವನ್ನು ಗೆದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆಯಲು ಎರಡು ತಂಡಗಳು ಕೂಡ ಪ್ರಯತ್ನ ನಡೆಸುತ್ತಿದೆ.

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ತಂಡ ಬಂಗಾಳದ ವಿರುದ್ಧ ರೋಚಕವಾಗಿ ಗೆಲುವು ಸಾಧಿಸಿದೆ. ನಿಗದಿತ 20 ಓವರ್‌ಗಳ ಪಂದ್ಯದಲ್ಲಿ ಟೈ ಮಾಡಿಕೊಮಡ ಕರ್ನಾಟಕ ಹಾಗೂ ಬಂಗಾಳ ತಂಡಗಳು ನಂತರ ಸೂಪರ್ ಓವರ್‌ನಲ್ಲಿ ಫಲಿತಾಂಶವನ್ನು ಪಡೆಯಲಾಯಿತು. ಸೂಪರ್ ಓವರ್‌ನಲ್ಲಿ ಮಿಂಚಿದ ಕರ್ನಾಟಕದ ಬೌಲರ್ ಕಾರಿಯಪ್ಪ ಸುಲಭ ಗುರಿ ಪಡೆಯಲು ಕಾರಣವಾದರು. ನಂತರ ಕರ್ನಾಟಕ ಈ ಗುರಿಯನ್ನು ಸುಲಭವಾಗಿ ತಲುಪುವಲ್ಲಿ ಯಶಸ್ವಿಯಾಗಿದ್ದು ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ.

ಬಂಗಾಳ ತಂಡ ಈ ಪಂದ್ಯದಲ್ಲಿ ಉತ್ತಮವಾಗಿ ರನ್ ಗಳಿಸುತ್ತಾ ಸಾಗಿದರೂ ಕೂಡ ಕರ್ನಾಟಕ ವಿಕೆಟ್ ಪಡೆಯುತ್ತಾ ಸಾಗಿತ್ತು. ಪಂದ್ಯದುದ್ದಕ್ಕೂ ಒಮ್ಮೆ ಕರ್ನಾಟಕ ಮೇಲುಗೈ ಸಾಧಿಸಿದರೆ ಮತ್ತೊಮ್ಮೆ ಬಂಗಾಳ ಮೇಲುಗೈ ಸಾಧಿಸುತ್ತಾ ಸಾಗಿತ್ತು. ಕಡೆಗೆ ಅಂತಿಮ ಓವರ್‌ನಲ್ಲಿ 20 ರನ್‌ಗಳಿಸುವ ಸವಾಲು ಪಡೆಯಿತು ಬಂಗಾಳ. ಈ ಕಠಿಣ ಸವಾಲಿನಲ್ಲಿಯೂ ಬಹುತೇಕ ಯಶಸ್ಸು ಸಾಧಿಸಿದ ಬಂಗಾಳ 19.5 ಓವರ್‌ನಲ್ಲಿ ಪಂದ್ಯವನ್ನು ಟೈ ಮಾಡಿಕೊಂಡಿತ್ತು. ಅಂತಿಮ ಒಂದು ಎಸೆತದಲ್ಲಿ ಒಂದು ರನ್‌ಗಳಿಸುವ ಸವಾಲು ಬಂಗಾಳದ ಮುಂದಿತ್ತು. ಆದರೆ ಈ ಸಂದರ್ಭದಲ್ಲಿ ಮನೀಶ್ ಪಾಂಡೆಯ ಮಿಂಚಿನ ಫೀಲ್ಡಿಂಗ್‌ನಿಂದಾಗಿ ಕರ್ನಾಟಕ ತಂಡ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು

ಬಂಗಾಳ, ಪ್ಲೇಯಿಂಗ್ XI: ಸುದೀಪ್ ಚಟರ್ಜಿ (ನಾಯಕ), ಅಭಿಷೇಕ್ ದಾಸ್, ಶ್ರೀವತ್ಸ್ ಗೋಸ್ವಾಮಿ (ವಿಕೆಟ್ ಕೀಪರ್), ಕೈಫ್ ಅಹ್ಮದ್, ರಿತ್ವಿಕ್ ಚೌಧರಿ, ಶಹಬಾಜ್ ಅಹ್ಮದ್, ಸಯಾನ್ ಘೋಷ್, ರಿಟಿಕ್ ಚಟರ್ಜಿ, ಗೀತ್ ಪುರಿ, ಆಕಾಶ್ ದೀಪ್, ಮುಖೇಶ್ ಕುಮಾರ್

ಬೆಂಚ್: ಸುಜಿತ್ ಕುಮಾರ್ ಯಾದವ್, ಪ್ರದೀಪ್ತ ಪ್ರಮಾಣಿಕ್, ಪ್ರತಾಪ್ ಸಿಂಗ್, ಇಶಾನ್ ಪೊರೆಲ್, ಕರಣ್ ಲಾಲ್, ಸುವಂಕರ್ ಬಾಲ್, ಮೊಹಮ್ಮದ್ ಕೈಫ್, ರಂಜೋತ್ ಸಿಂಗ್, ಶಾಕಿರ್ ಗಾಂಧಿ

ಸಚಿನ್ ಹಾಗು ದ್ರಾವಿಡ್ ಹೆಸರಿನಿಟ್ಟುಕೊಂಡ ನ್ಯೂಜಿಲ್ಯಾಂಡ್ ಆಟಗಾರ ರಚಿನ್ | Oneindia Kannada

ಕರ್ನಾಟಕ, ಪ್ಲೇಯಿಂಗ್ XI: ರೋಹನ್ ಕದಂ, ಶರತ್ ಬಿಆರ್ (ವಿಕೆಟ್ ಕೀಪರ್), ಮನೀಶ್ ಪಾಂಡೆ (ನಾಯಕ), ಕರುಣ್ ನಾಯರ್, ಅಭಿನವ್ ಮನೋಹರ್, ಅನಿರುದ್ಧ ಜೋಶಿ, ಜಗದೀಶ ಸುಚಿತ್, ವಿಜಯ್‌ಕುಮಾರ್ ವೈಶಾಕ್, ಕೆಸಿ ಕಾರಿಯಪ್ಪ, ವಿದ್ಯಾಧರ್ ಪಾಟೀಲ್, ದರ್ಶನ್ ಎಂಬಿ
ಬೆಂಚ್: ವಿ ಕೌಶಿಕ್, ರವಿಕುಮಾರ್ ಸಮರ್ಥ್, ಶ್ರೇಯಸ್ ಗೋಪಾಲ್, ಪ್ರವೀಣ್ ದುಬೆ, ಆದಿತ್ಯ ಸೋಮಣ್ಣ, ಪ್ರತೀಕ್ ಜೈನ್, ನಿಹಾಲ್ ಉಳ್ಳಾಲ್, ರಿತೇಶ್ ಭಟ್ಕಳ್, ಕೃಷ್ಣಮೂರ್ತಿ ಸಿದ್ಧಾರ್ಥ್

Story first published: Thursday, November 18, 2021, 18:15 [IST]
Other articles published on Nov 18, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+