SMAT 2022 Semifinals : ಪಂಜಾಬ್ ವಿರುದ್ಧ ಗೆದ್ದು ಫೈನಲ್ ಪ್ರವೇಶಿಸಿದ ಹಿಮಾಚಲ ಪ್ರದೇಶ

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ 2022ರ ಮೊದಲ ಸೆಮಿಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಹಿಮಾಚಲ ಪ್ರದೇಶ 13ರನ್‌ಗಳಿಂದ ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಿದೆ.
ಹಿಮಾಚಲ ಪ್ರದೇಶ ನೀಡಿದ್ದ 177ರನ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಅಭಿಷೇಕ್ ಶರ್ಮಾ 1ರನ್, ಪ್ರಭಸಿಮ್ರಾನ್ ಸಿಂಗ್ 8 ರನ್‌ಗೆ ವಿಕೆಟ್ ಒಪ್ಪಿಸಿದ್ರು. ಆದ್ರೆ ಕರ್ನಾಟಕ ವಿರುದ್ಧ ಸ್ಪೋಟಕ ಶತಕ ದಾಖಲಿಸಿದ್ದ ಶುಭಮನ್ ಗಿಲ್ ಈ ಪಂದ್ಯದಲ್ಲೂ ಅಮೋಘ ಆಟವಾಡಿದ್ರು.
32 ಎಸೆತಗಳಲ್ಲಿ 45 ರನ್ ಸಿಡಿಸಿದ ಶುಭಮನ್ ಗಿಲ್ ಜೊತೆಗೆ ಅಲ್ಮೋನ್‌ಪ್ರಿತ್ ಕೌರ್ ಉತ್ತಮ ಇನ್ನಿಂಗ್ಸ್ ಆಡುವ ಮೂಲಕ ತಂಡಕ್ಕೆ ನೆರವಾದರು. ಮೂರನೇ ವಿಕೆಟ್‌ಗೆ ಉತ್ತಮ ಜೊತೆಯಾಟದ ಭರವಸೆ ನೀಡಿದ್ದ ಈ ಜೋಡಿಯು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲಿಲ್ಲ. 45ರನ್‌ಗಳಿಸಿದ್ದ ಶುಭಮನ್ ಗಿಲ್ ಮಯಾಂಕ್ ಡಗಾರ್‌ಗೆ ವಿಕೆಟ್ ಒಪ್ಪಿಸುತ್ತಿದ್ದಂತೆ ತಂಡವು ಸೋಲಿನ ಹಾದಿ ಹಿಡಿಯಿತು.
ಪುಕರಾಜ್ ಮನ್ 10 ರನ್‌ಗೆ ಔಟಾದ್ರೆ, ಅಲ್ಮೋನ್‌ಪ್ರೀತ್ ಸಿಂಗ್ ಆಟವು 30ರನ್‌ಗೆ ಕೊನೆಗೊಂಡಿತು. ಸಣವೀರ್ ಸಿಂಗ್ ಆಟವು 4ರನ್‌ಗೆ ಕೊನೆಗೊಂಡಿತು. ಆದ್ರೆ ಕೊನೆಯಲ್ಲಿ ತಂಡದ ನಾಯಕ ಮಂದೀಪ್ ಸಿಂಗ್ 15 ಎಸೆತಗಳಲ್ಲಿ ಅಜೇಯ 29 ರನ್ ಕಲೆಹಾಕಿದ್ರೆ, ರಮಣದೀಪ್ ಸಿಂಗ್ 15 ಎಸೆತಗಳಲ್ಲಿ 29ರನ್‌ಗೆ ವಿಕೆಟ್ ಒಪ್ಪಿಸಿದ್ರು . ಈ ಮೂಲಕ ಪಂಜಾಬ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163ರನ್‌ಗೆ ಇನ್ನಿಂಗ್ಸ್ ಮುಗಿಸಿತು. ಈ ಮೂಲಕ ಪಂಜಾಬ್ ತಂಡವು 13ರನ್‌ಗಳಿಂದ ಸೋಲುವ ಮೂಲಕ ಫೈನಲ್ ತಲುಪುವ ಅವಕಾಶ ಕಳೆದುಕೊಂಡಿದೆ.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಹಿಮಾಚಲ ಪ್ರದೇಶ ತಂಡದ ಪರ ಟಾಪ್ ಆರ್ಡರ್ ಬ್ಯಾಟರ್‌ಗಳು ಕೈ ಕೊಟ್ಟರು. ಪ್ರಶಾಂತ್ ಚೋಪ್ರಾ 17, ಅಭಿಮನ್ಯು ರಾಣಾ 2, ಅಂಕುಶ್ ಬೈನ್ಸ್ಸ್ 16ರನ್‌ಗಳಿಸಿ ಬೇಗನೆ ವಿಕೆಟ್ ಒಪ್ಪಿಸಿದರು.
ಆದ್ರೆ ಅಬ್ಬರದ ಬ್ಯಾಟಿಂಗ್ ಮಾಡಿದ ಮಧ್ಯಮ ಕ್ರಮಾಂಕದ ಬ್ಯಾಟರ್ ಸುಮೀತ್ ವರ್ಮಾ 25 ಎಸೆತಗಳಲ್ಲಿ 51ರನ್ ಚಚ್ಚಿದರು. ಇವರ ಇನ್ನಿಂಗ್ಸ್ ತಲಾ 3 ಬೌಂಡರಿ ಮತ್ತು ಸಿಕ್ಸರ್ ಒಳಗೊಂಡಿದ್ದವು. ಈತನಿಗೆ ಉತ್ತಮ ಸಾಥ್ ಕೊಟ್ಟ ಆಕಾಶ್ ವಸಿಷ್ಠ 25 ಎಸೆತಗಳಲ್ಲಿ 43ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ ತಲಾ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿದ್ದವು.
ಕೆಳಕ್ರಮಾಂಕದಲ್ಲಿ ಪಂಕಜ್ ಜೈಸ್ವಾಲ್ ಕೇವಲ 16 ಎಸೆತಗಳಲ್ಲಿ 27ರನ್ ಕಲೆಹಾಕಿದರು. ಪರಿಣಾಮ ಹಿಮಾಚಲ ಪ್ರದೇಶ ತಂಡವು 7 ವಿಕೆಟ್ ನಷ್ಟಕ್ಕೆ 176ರನ್ ಕಲೆಹಾಕಿತು. ಆದ್ರೆ ಈ ಗುರಿ ಬೆನ್ನತ್ತಿದ ಪಂಜಾಬ್ 13ರನ್‌ಗಳಿಂದ ಸೋಲನ್ನ ಅನುಭವಿಸಿದೆ.
ಹಿಮಾಚಲ ಪ್ರದೇಶ ಪರ ನಾಯಕ ರಿಶಿ ಧವನ್ 4 ಓವರ್‌ಗಳಲ್ಲಿ 25ರನ್ ನೀಡಿ 3 ಪ್ರಮುಖ ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications