SMAT 2022: ಒಡಿಶಾ ವಿರುದ್ಧ ಸ್ಪೋಟಕ ಶತಕ ಸಿಡಿಸಿದ ಇಶಾನ್ ಕಿಶನ್, 64 ಎಸೆತ 102* ರನ್

ಗುರುವಾರ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಮಹತ್ವದ ಪಂದ್ಯದಲ್ಲಿ ಒಡಿಶಾ ವಿರುದ್ಧ ಇಶಾನ್ ಕಿಶನ್ ಭರ್ಜರಿ ಶತಕ ಸಿಡಿಸಿದ್ದಾರೆ. ಮೊದಲ ಎಸೆತದಿಂದ ಕೊನೆಯ ಎಸೆತದವರೆಗೆ ತಂಡದ ಪರ ಬ್ಯಾಟ್ ಬೀಸಿದ ಇಶಾನ್ ಕಿಶನ್ ಭರ್ಜರಿ ಆಟವಾಡುವ ಮೂಲಕ ಮಿಂಚಿದ್ದಾರೆ.
ಅವರ ಇನ್ನಿಂಗ್ಸ್ ನಲ್ಲಿ 7 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಸಿಡಿಸಿದ್ದಾರೆ. ಈ ಪಂದ್ಯದಲ್ಲಿ ಒಡಿಶಾ ನಾಯಕ ಅಭಿಷೇಕ್ ರಾವುತ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಜಾರ್ಖಂಡ್ ತಂಡದ ಪರ ಓಪನರ್ ಇಶಾನ್ ಕಿಶನ್ ಅವರ ಶತಕದ ನೆರವಿನಿಂದ 5 ವಿಕೆಟ್ ನಷ್ಟಕ್ಕೆ 188 ರನ್ ಗಳಿಸಿತು.
ಇಶಾನ್ ಕಿಶನ್ ಅವರ ಸ್ಫೋಟಕ ಇನ್ನಿಂಗ್ಸ್ ಬಳಿಕ ಜಾರ್ಖಂಡ್ ಪರ ಶಹಬಾಜ್ ನದೀಮ್ ಅದ್ಭುತವಾಗಿ ಸ್ಪೆಲ್ ಮಾಡಿದರು. ನದೀಮ್ ನಾಲ್ಕು ಓವರ್ ಗಳಲ್ಲಿ ಕೇವಲ 21 ರನ್ ನೀಡಿ ಮೂರು ವಿಕೆಟ್ ಪಡೆದರು. 189 ರನ್‌ಗಳ ಗುರಿ ಬೆನ್ನತ್ತಿದ ಒಡಿಶಾ ತಂಡ 19.2 ಓವರ್‌ಗಳಲ್ಲಿ 117 ರನ್‌ಗಳಿಗೆ ಆಲೌಟ್ ಆಯಿತು.
ಇಶಾನ್ ಕಿಶನ್ ಅವರ ಈ ಭರ್ಜರಿ ಆಟದ ನಂತರ, ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಶಂಸೆಗೆ ಒಳಗಾಗಿದ್ದಾರೆ. ಅನೇಕ ಅಭಿಮಾನಿಗಳು ಇಶಾನ್ ಕಿಶನ್ ಅವರ ಸಾಮರ್ಥ್ಯದ ಕುರಿತು ಹೊಗಳಿ ಮಾತನಾಡಿದ್ದು, ಅವರು ವಿಶ್ವಕಪ್‌ನ ತಂಡದ ಸದಸ್ಯರಾಗಿರಬೇಕಿತ್ತು ಎಂದಿದ್ದಾರೆ.
2021ರ ಟಿ20 ವಿಶ್ವಕಪ್ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆದಿದ್ದ ಇಶಾನ್ ಕಿಶನ್ ಸಿಕ್ಕ ಅವಕಾಶದಲ್ಲಿ ಮಿಂಚಲು ವಿಫಲರಾದ್ರು. ಇನ್ನು ಟಿ20 ವಿಶ್ವಕಪ್‌ಗೆ ಸ್ಕ್ವಾಡ್ ಘೋಷಣೆಗೂ ಮುನ್ನ ಅಷ್ಟಾಗಿ ಮಿಂಚಿದ ಇಶಾನ್ ಕಿಶನ್ ಆಯ್ಕೆಗಾರರ ಮನ ಗೆಲ್ಲುವಲ್ಲಿ ವಿಫಲರಾದ್ರು. ಹೀಗಾಗಿ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಇಶಾನ್ ಕಿಶನ್‌ಗೆ ಫಾರ್ಮ್‌ಗೆ ಮರಳಿ ಟೀಂ ಇಂಡಿಯಾದಲ್ಲಿ ಖಾಯಂ ಸ್ಥಾನ ಗಿಟ್ಟಿಸುವ ಯೋಜನೆ ಹೊಂದಿದ್ದಾರೆ.
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಜಾರ್ಖಂಡ್: ಇಶಾನ್ ಕಿಶನ್ (ವಿಕೆಟ್ ಕೀಪರ್), ಪಂಕಜ್ ಕಿಶೋರ್ ಕುಮಾರ್, ವಿರಾಟ್ ಸಿಂಗ್ (ನಾಯಕ), ಕುಮಾರ್ ಸೂರಜ್, ಅನುಕುಲ್ ರಾಯ್, ಆಯುಷ್ ಭಾರದ್ವಾಜ್, ರಾಜನ್‌ದೀಪ್ ಸಿಂಗ್, ಶಹಬಾಜ್ ನದೀಮ್, ವಿಕಾಶ್ ಸಿಂಗ್, ಮನೀಷಿ, ರಾಹುಲ್ ಶುಕ್ಲಾ, ವಿವೇಕಾನಂದ್ ತಿವಾರಿ
ಬೆಂಚ್: ಕುಮಾರ್ ದೇವ್ರತ್, ಕುಮಾರ್ ಕುಶಾಗ್ರ, ಬಾಲ ಕೃಷ್ಣ, ನಾಜಿಮ್ ಸಿದ್ದಿಕಿ, ಸುಪ್ರಿಯೋ ಚಕ್ರವರ್ತಿ
ಒಡಿಶಾ: ಶಂತನು ಮಿಶ್ರಾ, ಅಂಶುಮಾನ್ ರಾತ್, ಸುಭ್ರಾಂಶು ಸೇನಾಪತಿ, ರಾಕೇಶ್ ಪಟ್ನಾಯಕ್, ಅಭಿಷೇಕ್ ರಾವುತ್ (ನಾಯಕ), ಸೂರ್ಯಕಾಂತ್ ಪ್ರಧಾನ್, ಸುಜಿತ್ ಲೆಂಕಾ (ವಿಕೆಟ್ ಕೀಪರ್), ಸುಶೀಲ್ ಬಾರಿಕ್, ರಾಜೇಶ್ ಮೊಹಂತಿ, ಮುಷ್ತಾಕ್ ಬೇಗ್, ತರಣಿ ಸಾ, ಸಮೀರ್ ಮೊಹಂತಿ
ಬೆಂಚ್ :ಆಸಿರ್ವಾದ್ ಸ್ವೈನ್, ದೇಬಬ್ರತ ಪ್ರಧಾನ್, ಜಯಂತ ಬೆಹೆರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications