ಜಮ್ಮು ಕಾಶ್ಮೀರಕ್ಕೆ 'ವಿಧ್ವತ್ ಶಾಕ್': ಅಮೋಘ ಗೆಲುವು ಸಾಧಿಸಿದ ಕರ್ನಾಟಕ

ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಕರ್ನಾಟಕ ಇಂದು ನಾಲ್ಕನೇ ಪಂದ್ಯವನ್ನಾಡಿದ್ದು ಮೂರನೇ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಜಮ್ಮು ಕಾಶ್ಮೀರ ವಿರುದ್ಧ ನಡೆದ ಈ ಪಂದ್ಯದಲ್ಲಿ ಆರಂಭದಲ್ಲಿ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡುವ ಮೂಲಕ ಆಘಾತ ಅನುಭವಿಸಿದ ಕರ್ನಾಟಕ ಬಳಿಕ ಚೇತರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ನಂತರ ಬೌಲಿಂಗ್ ವಿಭಾಗದಲ್ಲಿ ಅಮೋಘ ಪ್ರದರ್ಶನ ನೀಡುವ ಮೂಲಕ ಭರ್ಜರಿಯಾಗಿ ಈ ಪಂದ್ಯದಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದರೂ ಕರ್ನಾಟಕದ ಆರಂಭದಲ್ಲಿಯೇ ಎಡವಿತ್ತು. ಕನಿಷ್ಠ ಮೊತ್ತಕ್ಕೆ ಆಲೌಟ್ ಆಗುವ ಭೀತಿ ಮೂಡಿಸಿದ್ದರೂ ಬಳಿಕ ಕೆಳ ಕ್ರಮಾಂಕದ ಆಟಗಾರರು ಸಮಯೋಚಿತ ಪ್ರದರ್ಶನ ನಿಡುವ ಮೂಲಕ ತಂಡವನ್ನು ಒಂದು ಹಂತಕ್ಕೆ ಕಾಪಾಡುವಲ್ಲಿ ಯಶಸ್ವಿಯಾದರು. ಆದರೆ ಮಯಾಂಕ್ ಪಡೆಯ ಭರ್ಜರಿ ಗೆಲುವಿಗೆ ಕಾರಣವಾಗಿದ್ದು ಮಾತ್ರ ವೇಗದ ಬೌಲರ್ ವಿಧ್ವತ್ ಕಾವೇರಪ್ಪ.

ಬ್ಯಾಟಿಂಗ್‌ನಲ್ಲಿ ಕಾಪಾಡಿದ ಶ್ರೇಯಸ್, ಮನೋಜ್
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಕರ್ನಾಟಕ ತಂಡ 59 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಕರ್ನಾಟಕದ ಅಗ್ರ ಕ್ರಮಾಂಕದ ಆಟಗಾರರನ್ನು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ಮಾಡುವಲ್ಲಿ ಜಮ್ಮು ಕಾಶ್ಮೀರ ಬೌಲರ್‌ಗಳು ಯಶಸ್ವಿಯಾಗಿದ್ದರು. ಮಯಾಂಕ್, ಮನೀಶ್, ಅಭಿನವ್ ಮನೋಹರ್ ಒಂದಂಕಿಗೆ ವಿಕೆಟ್ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿದ್ದರು. ಆದರೆ ಶ್ರೇಯಸ್ ಗೋಪಾಲ್ ಹಾಗೂ ಮನೋಜ್ ಬಂಗಡೆ ಅದ್ಭುತ ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಆಸರೆಯಾದರು. ಶ್ರೇಯಸ್ ಗೋಪಾಲ್ 48 ರನ್‌ಗಳಿಸಿ ಅಜೇಯವಾಗುಳಿದರೆ ಮನೋಜ್ 41 ರನ್‌ಗಳಿಸಿದರು. ಈ ಮೂಲಕ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 147 ರನ್‌ಗಳಿಸಿತು ಕರ್ನಾಟಕ.

ಜಮ್ಮು ಕಾಶ್ಮೀರಕ್ಕೆ 'ವಿಧ್ವತ್' ಶಾಕ್
ಇನ್ನು ಕರ್ನಾಟಕ ತಂಡವನ್ನು ಸಾಧಾರಣ ಮೊತ್ತಕ್ಕೆ ನಿಯಂತ್ರಿಸಿದ ಸಂತಸದಲ್ಲಿದ್ದ ಜಮ್ಮು ಕಾಶ್ಮೀರಕ್ಕೆ ಈ ಖುಷಿ ಹೆಚ್ಚು ಹೊತ್ತು ಇರಲಿಲ್ಲ. ಕರ್ನಾಟಕದ ವೇಗಿ ವಿಧ್ವತ್ ಕಾವೇರಪ್ಪ ಜಮ್ಮು ಕಾಶ್ವೀರಕ್ಕೆ ಆಘಾತದ ಮೇಲೆ ಆಘಾತ ನೀಡಿದರು. ಕೇವಲ 5 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು ಜಮ್ಮು ಕಾಶ್ಮೀರ. ಈ ಬಿಗಿ ಹಿಡಿತವನ್ನು ಮತ್ತೆ ಮುಂದುವರಿಸುವಲ್ಲಿ ಕರ್ನಾಟಕ ಯಶಸ್ವಿಯಾಯಿತು. ಜಮ್ಮು ಕಾಶ್ಮೀರದ ಮಧ್ಯಮ ಕ್ರಮಾಂಕದ ಆಟಗಾರ ವಿವ್ರಾಂತ್ ಶರ್ಮಾ ಅರ್ಧ ಶತಕ ಸಿಡಿಸಿ ಏಕಾಂಗಿಯಾಗಿ ಹೋರಾಟ ನಡೆಸಿದರು. ಅವರಿಗೆ ಅಬಿದ್ ಮುಷ್ತಾಕ್ ಒಂದು ಹಂತದಲ್ಲಿ ಸಾಥ್ ನೀಡಿದ ಕಾರಣ ತಂಡದ ಮೊತ್ತ ನೂರರ ಗಡಿ ದಾಟಲು ಸಾಧ್ಯವಾಯಿತು. 113 ರನ್‌ಗಳಿಗೆ ಜಮ್ಮು ಕಾಶ್ಮೀರ ಆಲೌಟ್ ಆಗಿತ್ತು. ಕರ್ನಾಟಕ ತಂಡದ ಪರವಾಗಿ ವಿಧ್ವತ್ ಕಾವೇರಪ್ಪ 5 ವಿಕೆಟ್ ಪಡೆದು ಮಿಂಚಿದರೆ ಅವರಿಗೆ ವಾಸುಕಿ ಕೌಶಿಕ್ ಹಾಗೂ ವೈಶಾಕ್ ತಲಾ ಎರಡು ವಿಕೆಟ್ ಕಿತ್ತು ಉತ್ತಮ ಸಾಥ್ ನೀಡಿದರು.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಜಮ್ಮು ಕಾಶ್ಮೀರ: ಶುಭಂ ಖಜುರಿಯಾ, ಜತಿನ್ ವಾಧ್ವಾನ್, ಶುಭಂ ಪುಂಡೀರ್ (ನಾಯಕ), ಅಬ್ದುಲ್ ಸಮದ್, ಮುಜ್ತಾಬಾ ಯೂಸುಫ್, ಪರ್ವೇಜ್ ರಸೂಲ್, ಯುದ್ವೀರ್ ಸಿಂಗ್ ಚರಕ್, ಅಬಿದ್ ಮುಷ್ತಾಕ್, ಫಾಜಿಲ್ ರಶೀದ್ (ವಿಕೆಟ್ ಕೀಪರ್), ಉಮ್ರಾನ್ ಮಲಿಕ್, ರಿತಿಕ್ ಸಿಂಗ್, ವಿವ್ರಾಂತ್ ಶರ್ಮಾ
ಬೆಂಚ್: ಹೆನಾನ್ ನಜೀರ್ ಮಲಿಕ್, ಔಕಿಬ್ ನಬಿ, ಕಮ್ರಾನ್ ಇಕ್ಬಾಲ್, ಲೋನ್ ನಾಸಿರ್ ಮುಜಾಫರ್, ಶಿವಾಂಶ್ ಶರ್ಮಾ
ಕರ್ನಾಟಕ: ದೇವದತ್ ಪಡಿಕ್ಕಲ್, ಮಯಾಂಕ್ ಅಗರ್ವಾಲ್ (ನಾಯಕ), ಮನೀಷ್ ಪಾಂಡೆ, ಲುವ್ನಿತ್ ಸಿಸೋಡಿಯಾ (ವಿಕೆಟ್ ಕೀಪರ್), ಅಭಿನವ್ ಮನೋಹರ್, ಮನೋಜ್ ಬಂಡಗೆ, ಕೃಷ್ಣಪ್ಪ ಗೌತಮ್, ಜಗದೀಶ ಸುಚಿತ್, ವಿಜಯಕುಮಾರ್ ವೈಶಾಕ್, ವಾಸುಕಿ ಕೌಶಿಕ್, ವಿಧ್ವತ್ ಕಾವೇರಪ್ಪ, ಶ್ರೇಯಸ್ ಗೋಪಾಲ್
ಬೆಂಚ್: ಶರತ್ ಬಿಆರ್, ಮುರಳೀಧರ ವೆಂಕಟೇಶ್, ಎಲ್ ಆರ್ ಚೇತನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications