SMAT: ಟಿ20 ಸಮರದಲ್ಲಿ ಇಂದು ಕರ್ನಾಟಕಕ್ಕೆ ಮಹಾರಾಷ್ಟ್ರ ಎದುರಾಳಿ: ಶುಭಾರಂಭದ ನಿರೀಕ್ಷೆಯಲ್ಲಿ ಮಯಾಂಕ್ ಪಡೆ

2022-23ನೇ ಸಾಲಿನ ಸೈಯದ್ ಮುಷ್ತಾಕ್ ಅಲಿ ಟೂರ್ನಿ ಇಂದಿನಿಂದ ಆರಂಭವಾಗುತ್ತಿದೆ. ಮೊದಲ ಸುತ್ತಿನ ಆರಂಭಿಕ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ ಮಹಾರಾಷ್ಟ್ರ ಎದುರಾಳಿಯಾಗಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ. ಈ ಬಾರಿಯ ಟೂರ್ನಿಯಲ್ಲಿ ಮಯಾಂಕ್ ಅಗರ್ವಾಲ್ ನೇತೃತ್ವದಲ್ಲಿ ಕರ್ನಾಟಕ ತಂಡ ಕಣಕ್ಕಿಳಿಯುತ್ತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಕರ್ನಾಟಕ ತಂಡ ಅನುಭವಿ ಹಾಗೂ ಯುವ ಆಟಗಾರರ ಅತ್ಯುತ್ತಮ ಸಂಯೋಜನೆಯೊಂದಿಗೆ ಕಣಕ್ಕಿಳಿಯುತ್ತಿದೆ. ಕಳೆದ ವರ್ಷದ ಟೂರ್ನಿಯಲ್ಲಿ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದ ಕರ್ನಾಟಕ ಈ ಬಾರಿ ಟ್ರೋಫಿಯ ಮೇಲೆ ಕಣ್ಣಿಟ್ಟಿರುವುದರಲ್ಲಿ ಅನುಮಾನವಿಲ್ಲ. ಹೀಗಾಗಿ ಕರ್ನಾಟಕ ತಂಡ ಶುಭಾರಂಭಕ್ಕೆ ಹಾತೊರೆಯುತ್ತಿದ್ದು ಮೊದಲ ಪಂದ್ಯದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳ ನಡುವಿನ ಈ ಪಂದ್ಯ ಪಂಜಾಬ್‌ನ ಮೊಹಾಲಿಯಲ್ಲಿ ನಡೆಯಲಿದ್ದು ಯಾವುದೇ ವಾಹಿನಿಯಲ್ಲಿ ಪಂದ್ಯ ನೇರಪ್ರಸಾರವಾಗುವುದಿಲ್ಲ.

100ನೇ ಟಿ20 ಪಂದ್ಯವಾಡಲಿದೆ ಕರ್ನಾಟಕ
ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಈ ಆವೃತ್ತಿಯ ಮೊದಲ ಪಂದ್ಯವವನ್ನು ಕರ್ನಾಟಕ ಮಹಾರಾಷ್ಟ್ರ ವಿರುದ್ಧ ಆಡಲು ಸಜ್ಜಾಗಿದೆ. ಈ ಪಂದ್ಯ ಕರ್ನಾಟಕ ತಂಡಕ್ಕೆ ದೇಶಿಯ ಕ್ರಿಕೆಟ್‌ನಲ್ಲಿ 100ನೇ ಟಿ20 ಪಂದ್ಯ ಎಂಬುದು ಗಮನಾರ್ಹ ಅಂಶ. ಮಯಾಂಕ್ ಅಗರ್ವಾಲ್ ಈ ಪಂದ್ಯದಲ್ಲಿ ತಂಡವನ್ನು ಮುನ್ನಡೆಸುವವುದು ಬಹುತೇಕ ಖಚಿತ. ಚುಟುಕು ಮಾದರಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸುವ 10ನೇ ನಾಯಕ ಎನಿಸಿಕೊಳ್ಳಲಿದ್ದಾರೆ ಮಯಾಂಕ್ ಅಗರ್ವಾಲ್. ಇನ್ನು ಕರ್ನಾಟಕ ಹಾಗೂ ಮಹಾರಾಷ್ಟ್ರ ತಂಡಗಳು ಟಿ20 ಮಾದರಿಯಲ್ಲಿ ಮೂರನೇ ಬಾರಿಗೆ ಈ ಪಂದ್ಯದಲ್ಲಿ ಮುಖಾಮುಖಿಯಾಗಿತ್ತಿದೆ. ಈ ಹಿಂದಿನ ಎರಡು ಪಂದ್ಯಗಳಲ್ಲಿ ಎರಡು ತಮಡಗಳು ಕೂಡ ತಲಾ ಒಂದೊಂದು ಸೋಲು ಗೆಲುವಿನ ರುಚಿ ಕಂಡಿದೆ.

ಮಿಂಚಲಿದ್ದಾರಾ ಸ್ಟಾರ್ ಆಟಗಾರರು
ಕರ್ನಾಟಕ ತಂಡ ನಾಯಕ ಮಯಾಂಕ್ ಅಗರ್ವಾಲ್ ಸೇರಿದಂತೆ ಸಾಕಷ್ಟು ಸ್ಟಾರ್ ಆಟಗಾರರನ್ನು ಒಳಗೊಂಡಿದೆ. ಮಾಜಿ ನಾಯಕ ಮನೀಶ್ ಪಾಂಡೆ ತಂಡಕ್ಕೆ ಪ್ರಮುಖ ಅಸ್ತ್ರವಾಗಿದ್ದರೆ ದೇವದತ್ ಪಡಿಕ್ಕಲ್, ಅಭಿನವ್ ಮನೋಹರ್ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಸಾಕಷ್ಟು ಖ್ಯಾತಿ ಗಳಿಸಿರುವ ಆಟಗಾರರಾಗಿದ್ದಾರೆ. ಇನ್ನು ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್ ಕೌಶಿಕ್, ವೈಶಾಕ್ ಮೊದಲಾದ ಆಟಗಾರರಿಂದ ಕೂಡ ಅತ್ಯುತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿದ್ದಾರೆ ಕರ್ನಾಟಕದ ಅಭಿಮಾನಿಗಳು

ತಂಡದಿಂದ ಹೊರಬಿದ್ದ ಅನುಭವಿ ಕರುಣ್ ನಾಯರ್
ಕರ್ನಾಟಕ ತಂಡದ ಹಿರಿಯ ಆಟಗಾರ ಹಾಗೂ ಮಾಜಿ ನಾಯಕ ಕರುಣ್ ನಾಯರ್ ಈ ಬಾರಿಯ ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಆಯ್ಕೆಯಾಗುವಲ್ಲಿ ವಿಫಲವಾಗಿದ್ದಾರೆ. ಈ ಬಾರಿಯ ಸಂಭಾವ್ಯ ತಂಡದಿಂದಲೇ ಕರುಣ್ ಹೊರಬಿದ್ದಿದ್ದರು. ಫಾರ್ಮ್ ಕೊರತೆ ಹಾಗೂ ರನ್‌ಗಳಿಸಲು ಪರದಾಡುತ್ತಿರುವ ಹಿನ್ನೆಲೆಯಲ್ಲಿ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು ಕರುಣ್. ಹೀಗಾಗಿ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯಿಂದ ಅವರು ಹೊರಬಿದ್ದಿದ್ದಾರೆ.

ಇತ್ತಂಡಗಳ ಸ್ಕ್ವಾಡ್ ಹೀಗಿದೆ
ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಚೇತನ್ ಎಲ್‌ಆರ್, ಅಭಿನವ್ ಮನೋಹರ್, ಮನೋಜ್ ಬಂಡಾಗೆ, ಕೃಷ್ಣಪ್ಪ ಗೌತಮ್, ಶ್ರೇಯಸ್ ಗೋಪಾಲ್, ಸುಚಿತ್ ಜೆ, ಲಿನಿತ್ ಸಿಸೋಡಿಯಾ(ವಿಕೆಟ್ ಕೀಪರ್), ಶರತ್ ಬಿಆರ್(ವಿಕೆಟ್ ಕೀಪರ್), ಕೌಶಿಕ್ ವಿ, ವೈಶಾಕ್ ವಿ, ವಿದ್ವತ್ ಕಾವೇರಪ್ಪ, ವೆಂಕಟೇಶ್ ಎಂ
ಮಹಾರಾಷ್ಟ್ ಸ್ಕ್ವಾಡ್: ಋತುರಾಜ್ ಗಾಯಕ್ವಾಡ್ (ನಾಯಕ), ರಾಹುಲ್ ತ್ರಿಪಾಠಿ, ಸತ್ಯಜೀತ್ ಬಚಾವ್, ಶಂಶುಜಾಮ ಕಾಜಿ, ನೌಶಾದ್ ಶೇಖ್, ದಿವ್ಯಾಂಗ್ ಹಿಂಗಾನೇಕರ್, ಆಶಯ್ ಪಾಲ್ಕರ್, ಪವನ್ ಶಾ, ರಾಜವರ್ಧನ್ ಹಂಗರ್ಗೇಕರ್, ಯಶ್ ನಹರ್, ಮನೋಜ್ ಇಂಗಳೆ, ಅಜೀಂ ಕಾಜಿ, ಸಿದ್ಧೇಶ್ ವೀರ್, ಯಶ್ ಕ್ಷೀರಸಾಗರ್, ಕೌಶಲ್ ತಾಂಬೇರ್, ಕೌಶಲ್ ತಾಂಬೇಕರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications