Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

SMAT 2022: ಹಿಮಾಚಲ ಪ್ರದೇಶ ವಿರುದ್ಧ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

SMAT 2022 Final

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಶನಿವಾರ(ನ.5) ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ T20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಹಿಮಾಚಲ ಮೊದಲು ಬ್ಯಾಟಿಂಗ್ ಮಾಡಬೇಕಿದೆ.

2007ರಿಂದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ ಆರಂಭವಾದಾಗಿನಿಂದಲೂ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿರುವ ಮುಂಬೈ ಹಾಗೂ ಹಿಮಾಚಲ ಪ್ರದೇಶ ತಂಡಗಳು ಪ್ರಶಸ್ತಿ ಗೆಲುವಿನ ಮೇಲೆ ಕಣ್ಣಿಟ್ಟಿವೆ. ಸೆಮಿಫೈನಲ್‌ ಆಡಿದ ತಂಡದ ಆಟಗಾರರನ್ನೇ ಬಹುತೇಕ ಉಭಯ ತಂಡಗಳು ಮುಂದುವರಿಸಿವೆ.

ಮೊದಲ ಸೆಮಿಫೈನಲ್‌ನಲ್ಲಿ ಪಂಜಾಬ್ ವಿರುದ್ಧ ಹಿಮಾಚಲ ಪ್ರದೇಶ 13ರನ್‌ಗಳಿಂದ ಗೆಲ್ಲುವ ಮೂಲಕ ಫೈನಲ್ ಪ್ರವೇಶಿಸಿತು. ಹಿಮಾಚಲ ಪ್ರದೇಶ ನೀಡಿದ್ದ 177ರನ್ ಗುರಿ ಬೆನ್ನಟ್ಟಿದ ಪಂಜಾಬ್ ತಂಡವು ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 163ರನ್‌ಗೆ ಇನ್ನಿಂಗ್ಸ್ ಮುಗಿಸಿತು. ಇದ್ರಿಂದಾಗಿ 13ರನ್‌ಗಳಿಂದ ಗೆಲುವು ಸಾಧಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

ಮತ್ತೊಂದೆಡೆ ಎರಡನೇ ಸೆಮಿಫೈನಲ್‌ನಲ್ಲಿ ವಿದರ್ಭ ವಿರುದ್ಧ ಮುಂಬೈ ಗೆದ್ದು ಫೈನಲ್ ಪ್ರವೇಶಿಸಿದೆ. ವಿದರ್ಭ ನೀಡಿದ್ದ 165ರನ್ ಗುರಿ ಬೆನ್ನತ್ತಿದ ಮುಂಬೈ ಐದು ವಿಕೆಟ್‌ಗಳ ಗೆಲುವು ಸಾಧಿಸಿತು. ತಂಡದ ಪರ ಪೃಥ್ವಿ ಶಾ 21 ಎಸೆತಗಳಲ್ಲಿ 35ರನ್‌ ಸಿಡಿಸಿದ್ರೆ, ಶ್ರೇಯಸ್ ಅಯ್ಯರ್ ಸ್ಫೋಟಕ ಬ್ಯಾಟಿಂಗ್ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಶ್ರೇಯಸ್ ಅಯ್ಯರ್ 44 ಎಸೆತಗಳಲ್ಲಿ 73ರನ್ ಸಿಡಿಸುವ ಮೂಲಕ ಮಿಂಚಿದರು.

ಮುಂಬೈ ಮತ್ತು ಹಿಮಾಚಲ ಪ್ರದೇಶ ಪ್ಲೇಯಿಂಗ್ ಇಲೆವೆನ್

ಹಿಮಾಚಲ ಪ್ರದೇಶ: ಪ್ರಶಾಂತ್ ಚೋಪ್ರಾ, ಅಂಕುಶ್ ಬೇನ್ಸ್ (ವಿಕೆಟ್ ಕೀಪರ್), ಸುಮೀತ್ ವರ್ಮಾ, ಆಕಾಶ್ ವಸಿಷ್ಟ್, ನಿಖಿಲ್ ಗಂಗ್ಟಾ, ಏಕಾಂತ್ ಸೇನ್, ರಿಷಿ ಧವನ್ (ನಾಯಕ), ಸಿದ್ಧಾರ್ಥ್ ಶರ್ಮಾ, ಮಯಾಂಕ್ ದಾಗರ್, ಕನ್ವರ್ ಅಭಿನಯ್ ಸಿಂಗ್, ವೈಭವ್ ಅರೋರಾ

ಬೆಂಚ್: ಅಭಿಮನ್ಯು ರಾಣಾ, ಪಂಕಜ್ ಜೈಸ್ವಾಲ್, ಗುರ್ವಿಂದರ್ ಸಿಂಗ್, ರಾಘವ್ ಧವನ್, ಅಂಕುಶ್ ಬೇಡಿ, ವಿನಯ್ ಗಲೇಟಿಯಾ, ಆಯುಷ್ ಜಮ್ವಾಲ್, ಶುಭಂ ಅರೋರಾ

ಮುಂಬೈ: ಪೃಥ್ವಿ ಶಾ, ಅಜಿಂಕ್ಯ ರಹಾನೆ (ನಾಯಕ), ಯಶಸ್ವಿ ಜೈಸ್ವಾಲ್, ಶ್ರೇಯಸ್ ಅಯ್ಯರ್, ಸರ್ಫರಾಜ್ ಖಾನ್ (ವಿಕೆಟ್ ಕೀಪರ್), ಶಿವಂ ದುಬೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಅಮನ್ ಹಕೀಮ್ ಖಾನ್, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ

ಬೆಂಚ್: ಪರೀಕ್ಷಿತ್ ವಲ್ಸಂಗಕರ್, ಧವಳ್ ಕುಲಕರ್ಣಿ, ಶಾರ್ದೂಲ್ ಠಾಕೂರ್, ಪೃಥ್ವಿಪಾಲ್ ಸೋಲಂಕಿ, ಸಾಯಿರಾಜ್ ಪಾಟೀಲ್, ಸೂರ್ಯಾಂಶ್ ಶೆಡ್ಗೆ, ಹಾರ್ದಿಕ್ ತಮೋರ್

Story first published: Saturday, November 5, 2022, 16:42 [IST]
Other articles published on Nov 5, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+