SMAT 2022: ಅಸ್ಸಾಂ ವಿರುದ್ಧ 61 ಎಸೆತಗಳಲ್ಲಿ 134 ರನ್ ಚಚ್ಚಿದ ಪೃಥ್ವಿ ಶಾ

ಇಂದೋರ್‌ನ ಎಮರಾಲ್ಡ್ ಹೈಸ್ಕೂಲ್ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಪೃಥ್ವಿ ಶಾ ಅಬ್ಬರಿಸಿ ಬೊಬ್ಬಿರಿದಿದ್ದಾನೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ ತಂಡವು ಪೃಥ್ವಿ ಶಾ ಅಮೋಘ ಆಟದ ನೆರವಿನಿಂದ ಬೃಹತ್ ಮೊತ್ತ ಕಲೆಹಾಕಿತು. ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ ಮುಂಬೈ 230ರನ್ ಕಲೆಹಾಕಿದೆ.
ಅಸ್ಸಾಂ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ ಪೃಥ್ವಿ ಶಾ ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ್ರು. 61 ಎಸೆತಗಳಲ್ಲಿ 134 ರನ್ ಸಿಡಿಸಿದ ಪೃಥ್ವಿ ಶಾ 219.67ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ರು. ಪೃಥ್ವಿ ಶಾ ಇನ್ನಿಂಗ್ಸ್‌ನಲ್ಲಿ 13 ಬೌಂಡರಿ ಮತ್ತು 9 ಅಮೋಘ ಸಿಕ್ಸರ್‌ಗಳು ಒಳಗೊಂಡಿದ್ದವು.
ಮುಂಬೈ ಪರ ಮೊದಲಿಗೆ ಅಮನ್ ಹಕೀಮ್ ಖಾನ್ 15ರನ್‌ಗಳಿಸಿ ಔಟಾದ ಬಳಿಕ ಎರಡನೇ ವಿಕೆಟ್‌ಗೆ ಯಶಸ್ವಿ ಜೈಸ್ವಾಲ್ ಜೊತೆಗೂಡಿ ಶತಕದ ಜೊತೆಯಾಟವಾಡಿದ್ರು. ಜೈಸ್ವಾಲ್ 30 ಎಸೆತಗಳಲ್ಲಿ 40 ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು. ಇದಾದ ಬಳಿಕ ಅಬ್ಬರಿಸಿದ ಪೃಥ್ವಿ ಅತಿ ವೇಗದಲ್ಲಿ ಶತಕ ಕೂಡ ಪೂರೈಸಿದ್ದಲ್ಲದೆ ತಂಡದ ಸ್ಕೋರನ್ನ 200ರ ಗಡಿದಾಟಿಸಿದ್ರು.

134ರನ್ ಕಲೆಹಾಕಿದ ಪೃಥ್ವಿ, 17.4 ಓವರ್‌ನಲ್ಲಿ ರಜ್ಜಾಕುದ್ದೀನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ಅದಾಗಲೇ ತಂಡದ ಸ್ಕೋರ್ 206/3 ಆಗಿತ್ತು. ಅಂತಿಮವಾಗಿ ಸರ್ಫರಾಜ್ ಖಾನ್ 15, ಶಿವಂ ದುಬೆ 17ರನ್‌ಗಳ ಕೊಡುಗೆಯಿಂದ ಮುಂಬೈ 230ರನ್‌ಗಳ ಬೃಹತ್ ಮೊತ್ತ ದಾಖಲಿಸಿತು.
ಇದಕ್ಕುತ್ತರವಾಗಿ ಬ್ಯಾಟಿಂಗ್ ಆರಂಭಿಸಿದ ಅಸ್ಸಾಂ 5 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 37ರನ್ ಕಲೆಹಾಕಿದೆ.
ಉಭಯ ತಂಡಗಳ ಪ್ಲೇಯಿಂಗ್ 11
ಅಸ್ಸಾಂ: ಡೆನಿಶ್ ದಾಸ್, ರಾಹುಲ್ ಹಜಾರಿಕಾ, ನಿಹಾರ್ ನರಹ್, ರಿಯಾನ್ ಪರಾಗ್, ರಿಶವ್ ದಾಸ್, ಮೃನ್ಮೋಯ್ ದತ್ತಾ (ನಾಯಕ), ವಾಸಿಕುರ್ ರೆಹಮಾನ್ (ವಿಕೆಟ್ ಕೀಪರ್), ರೋಶನ್ ಆಲಂ, ಧರಣಿ ರಭಾ, ಮುಖ್ತಾರ್ ಹುಸೇನ್, ರಜ್ಜಕುದ್ದೀನ್ ಅಹ್ಮದ್, ಅಭಿಷೇಕ್ ಠಾಕುರಿ
ಬೆಂಚ್: ಸುಭಮ್ ಮಂಡಲ್, ನಿಪಾನ್ ದೇಕಾ
ಮುಂಬೈ: ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಸರ್ಫರಾಜ್ ಖಾನ್, ಅಮನ್ ಹಕೀಮ್ ಖಾನ್, ಹಾರ್ದಿಕ್ ತಮೋರ್ (ವಿಕೆಟ್ ಕೀಪರ್), ಶಿವಂ ದುಬೆ, ಶಮ್ಸ್ ಮುಲಾನಿ, ತನುಷ್ ಕೋಟ್ಯಾನ್, ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಸಾಯಿರಾಜ್ ಪಾಟೀಲ್
ಬೆಂಚ್: ಅಜಿಂಕ್ಯ ರಹಾನೆ, ಸೂರ್ಯಾಂಶ್ ಶೆಡ್ಗೆ, ಮೋಹಿತ್ ಅವಸ್ತಿ, ಪೃಥ್ವಿಪಾಲ್ ಸೋಲಂಕಿ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications