ಕ್ರಿಕೆಟ್ ಆಸ್ಟ್ರೇಲಿಯಾದ ಮೇಲೆ ಸಿಡುಕಾಡಿದ ನಿಷೇಧಿತ ಆಟಗಾರ ಸ್ಮಿತ್!

ಮೆಲ್ಬರ್ನ್, ಡಿಸೆಂಬರ್ 26: ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಒಂದು ವರ್ಷದ ನಿಷೇಧದಲ್ಲಿರುವ ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಅವರು ಕ್ರಿಕೆಟ್ ಆಸ್ಟ್ರೇಲಿಯಾದ ಮೇಲೆ ಮತ್ತೆ ಅಸಮಾಧಾನ ಹೊರಹಾಕಿದ್ದಾರೆ. ಆಟಗಾರರ ಮೇಲೆ ಒತ್ತಡ ಹೇರುವ 'ಸಿಎ'ಯ ಸಂಸ್ಕೃತಿಯ ಬಗ್ಗೆ ಅವರು ಸಿಡುಕಾಡಿದ್ದಾರೆ.
ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ 'ಏನೇ ಆದರೂ ತಂಡ ಗೆಲ್ಲಲೇಬೇಕು' ಎಂಬ ಕೆಟ್ಟ ಸಂಸ್ಕೃತಿ ಒಕ್ಕರಿಸಿಕೊಂಡಿದೆ. ಇದು ಆಟಕ್ಕೆ ಮತ್ತು ಆಟಗಾರರಿಗೂ ಮಾರಕವಾಗಿದೆ ಎಂದು ಮಾಜಿ ಆಟಗಾರ ಆ್ಯಡಮ್ ಗಿಲ್‌ಕ್ರಿಸ್ಟ್ ಆಯೋಜಿಸಿದ್ದ ಸಂದರ್ಶನದಲ್ಲಿ ಫಾಕ್ಸ್ ಕ್ರಿಕೆಟ್ ಜೊತೆ ಮಾತನಾಡುತ್ತ ಸ್ಮಿತ್ ಹೇಳಿದರು.
ಚೆಂಡು ವಿರೂಪ ಪ್ರಕರಣಕ್ಕೆ ಸಂಬಂಧಿಸಿ ಮಾತನಾಡಿದ ಸ್ಮಿತ್, 'ಏನಾದರೂ ಸರಿ ಒಟ್ಟಿನಲ್ಲಿ ಗೆಲ್ಲಲೇಬೇಕು ಎಂಬ ಸಂಸ್ಕೃತಿ ಕ್ರಿಕೆಟ್ ಆಸ್ಟ್ರೇಲಿಯಾದಲ್ಲಿ ಹಬ್ಬಲು ಕಾರ್ಯನಿರ್ವಾಹಕರಾಗಿರುವ ಜೇಮ್ಸ್ ಸುದರ್ಲ್ಯಾಂಡ್ ಮತ್ತು ಪ್ಯಾಟ್ ಹೋವರ್ಡ್ ಪ್ರಮುಖ ಪಾತ್ರಧಾರಿಗಳು' ಎಂದರು.
2016 ನವೆಂಬರ್‌ನಲ್ಲಿನ ಕ್ಷಣವನ್ನು ನೆನಪಿಸಿಕೊಂಡ ಸ್ಟೀವ್, 'ದಕ್ಷಿಣ ಆಫ್ರಿಕಾ ವಿರುದ್ಧ ಆವತ್ತು ನಾವು ಸೋತಿದ್ದೆವು. ಶ್ರೀಲಂಕಾ ವಿರುದ್ಧವೂ ಟೆಸ್ಟ್‌ನಲ್ಲಿ ಹಿನ್ನಡೆ ಅನುಭವಿಸಿದ್ದೆವು. ಆ ಸಂದರ್ಭ ನಮ್ಮ ರೂಮಿಗೆ ಬಂದ ಸುದರ್ಲ್ಯಾಂಡ್ ಮತ್ತು ಹೋವರ್ಡ್, ನಾವು ನಿಮಗೆ ಸಂಬಳ ಕೊಡೋದು ಆಡೋದಕ್ಕಲ್ಲ, ಗೆಲ್ಲಲು ಅಂತ ಗದರಿದ್ದರು' ಎಂದು ವಿವರಿಸಿದರು.
ಕಳೆದ ಮಾರ್ಚ್ ಅಂತ್ಯದಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಫ್ರಿಕಾ ವಿರುದ್ಧ ಆಸೀಸ್‌ನ ಸ್ಮಿತ್, ಡೇವಿಡ್ ವಾರ್ನರ್ ಮತ್ತು ಕ್ಯಮರಾನ್ ಬ್ಯಾನ್‌ಕ್ರಾಫ್ಟ್ ಬಾಲ್ ಟ್ಯಾಂಪರಿಂಗ್‌ನಲ್ಲಿ ಪಾಲ್ಗೊಂಡು ನಿಷೇಧಕ್ಕೆ ಒಳಗಾಗಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications