ರೋಹಿತ್ ಶರ್ಮಾ ದಾಖಲೆ ಅಳಿಸಿದ ಸ್ಮೃತಿ ಮಂಧಾನ
ಭಾರತದ ಮಹಿಳಾ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ವೇಳೆ ಉಭಯ ತಂಡಗಳ ನಡುವೆ ಟಿ20 ಸರಣಿ ನಡೆಯುತ್ತಿದೆ. ಈ ಸರಣಿಯ ಮೊದಲ ಪಂದ್ಯ ಡರ್ಬನ್‌ನ ಕಿಂಗ್ಸ್‌ಮೀಡ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧಾನ ಕಣಕ್ಕೆ ಇಳಿದರು. ಶುಕ್ರವಾರ ನಡೆದ ಪಂದ್ಯದಲ್ಲಿ ಸ್ಮೃತಿ ದೊಡ್ಡ ಇನಿಂಗ್ಸ್ ಕಟ್ಟದೇ ಇದ್ದರೂ ಸಹ ದೊಡ್ಡ ದಾಖಲೆಯನ್ನು ಬರೆದಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ಮೊದಲು ಬ್ಯಾಟಿಂಗ್ ಮಾಡಿತು. ಈ ವೇಳೆ ಸ್ಮೃತಿ ಮಂಧಾನ 13 ರನ್ ಬಾರಿಸಿ ಔಟ್ ಆದರು. ಮೊದಲ ಟಿ20 ಪಂದ್ಯದಲ್ಲಿ ಚಿಕ್ಕ ಇನಿಂಗ್ಸ್ ಕಟ್ಟಿದ ಸ್ಮೃತಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಸ್ಮೃತಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಪುರುಷ ಮತ್ತು ಮಹಿಳಾ) ಭಾರತದ ಅತಿ ಹೆಚ್ಚು ರನ್ ಗಳಿಸಿದ ಆಟಗಾರ್ತಿ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಈ ದಾಖಲೆ ಈ ಮೊದಲು ಟೀಮ್ ಇಂಡಿಯಾದ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರ ಹೆಸರಿನಲ್ಲಿತ್ತು.

ಸ್ಮೃತಿ ದೊಡ್ಡ ದಾಖಲೆ
ರೋಹಿತ್ ಶರ್ಮಾ ಸದ್ಯ ಟೀಮ್ ಇಂಡಿಯಾದ ಪರ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿದ್ದಾರೆ. ಇವರು 2024ರ ಟಿ20 ವಿಶ್ವಕಪ್ ಬಳಿಕ ಚುಟುಕು ಫಾರ್ಮೆಟ್‌ಗೆ ವಿದಾಯ ಹೇಳಿದ್ದಾರೆ. ಇನ್ನು ಟೆಸ್ಟ್‌ಗೂ ರೋಹಿತ್ ಗುಡ್ ಬೈ ಹೇಳಿದ್ದಾರೆ. ಇವರು ಟಿ20 ಸ್ವರೂಪದಲ್ಲಿ 159 ಪಂದ್ಯಗಳಲ್ಲಿ 5 ಶತಕ ಹಾಗೂ 32 ಅರ್ಧಶತಕ ಸೇರಿದಂತೆ 4231 ರನ್ ಸಿಡಿಸಿದ್ದಾರೆ. ಸ್ಮೃತಿ ಈ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಸ್ಮೃತಿ 161 ಟಿ20 ಪಂದ್ಯಗಳಲ್ಲಿ 30.53 ಸರಾಸರಿಯಲ್ಲಿ 4,244 ರನ್ ಗಳಿಸಿದ್ದು, 1 ಶತಕ ಮತ್ತು 33 ಅರ್ಧಶತಕ ಸೇರಿವೆ.
ಮಹಿಳಾ ಟಿ20 ಕ್ರಿಕೆಟ್‌ನಲ್ಲಿ ಸ್ಮೃತಿ ಅತಿ ಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನ್ಯೂಜಿಲೆಂಡ್ ತಂಡದ ಸೂಜಿ ಬೇಟ್ಸ್ ಇದ್ದು, ಇವರು 181 ಪಂದ್ಯಗಳಲ್ಲಿ 4,717 ರನ್ ಗಳಿಸಿದ್ದಾರೆ. ಟೀಮ್ ಇಂಡಿಯಾದ ಹರ್ಮನ್‌ಪ್ರೀತ್ ಕೌರ್ ಮೂರನೇ ಸ್ಥಾನದಲ್ಲಿದ್ದು, ಇವರು 191 ಪಂದ್ಯಗಳಲ್ಲಿ 3869 ರನ್ ಗಳಿಸಿದ್ದಾರೆ. ಶ್ರೀಲಂಕಾದ ಚಾಮರಿ ಅಥಪತ್ತು 154 ಪಂದ್ಯಗಳಲ್ಲಿ 3637 ರನ್‌ಗಳೊಂದಿಗೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ, ನ್ಯೂಜಿಲೆಂಡ್‌ನ ಸೋಫಿ ಡಿವೈನ್ 151 ಪಂದ್ಯಗಳಲ್ಲಿ 3587 ರನ್ ಗಳಿಸಿ ಐದನೇ ಸ್ಥಾನದಲ್ಲಿದ್ದಾರೆ.

ಪಂದ್ಯದ ಫಲಿತಾಂಶ
ಭಾರತದ ಮಹಿಳಾ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 157 ರನ್ ಕಲೆ ಹಾಕಿತು. ಈ ವೇಳೆ ಶಫಾಲಿ ವರ್ಮಾ 34, ಜೆಮಿಮಾ ರೊಡ್ರಿಗಸ್ 36, ಹರ್ಮನ್ ಪ್ರೀತ್ ಕೌರ್ 47 ರನ್ ಬಾರಿಸಿ ತಂಡಕ್ಕೆ ನೆರವಾದರು. ದಕ್ಷಿಣ ಆಫ್ರಿಕಾದ ಪರ ಅಯಬೊಂಗಾ ಖಾಕಾ 3 ವಿಕೆಟ್ ಕಬಳಿಸಿದರು. ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ 19.1 ಓವರ್‌ಗಳಲ್ಲಿ 4 ವಿಕೆಟ್‌ಗೆ 158 ರನ್ ಕಲೆ ಹಾಕಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications