
ಮುಂಬೈ, ಮೇ 17: ವಾಂಖೆಡೆ ಸ್ಟೇಡಿಯಂನಲ್ಲಿ ಐಪಿಎಲ್ ಕ್ವಾಲಿಫೈಯರ್-1ಕ್ಕೂ ಮುಂಚಿತವಾಗಿ ನಡೆಯಲಿರುವ ವನಿತಾ ಟಿ20 ಚಾಲೆಂಜ್ ನಲ್ಲಿ ಐಪಿಎಲ್ ಟ್ರೈಯಲ್ ಬ್ಲೇಸರ್ ಮತ್ತು ಐಪಿಎಲ್ ಸೂಪರ್ ನೋವಾ ತಂಡಗಳನ್ನು ಕ್ರಮವಾಗಿ ಸ್ಮೃತಿ ಮಂಧನಾ ಮತ್ತು ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ.
ವನಿತಾ ಟಿ20 ಚಾಲೆಂಜ್ ಬಗ್ಗೆ ಮಾತನಾಡುತ್ತಾ ಐಪಿಎಲ್ ಅಧ್ಯಕ್ಷ ರಾಜೀವ್ ಶುಕ್ಲಾ, 'ಇನ್ನೊಂದಿಷ್ಟು ದಿನ ಐಪಿಎಲ್ ಕಾವು ಉಳಿಯಲಿದೆ. ವನಿತಾ ವಿಭಾಗದಲ್ಲೂ ಇಂಥದ್ದೇ ಒಂದು ಕ್ರಿಕೆಟ್ ಮಾದರಿಯನ್ನು ತರುವ ಸಲುವಾಗಿ ನಾವು ಹಲವಾರು ಮಂಡಳಿಗಳಲ್ಲಿ ವಿನಂತಿಸಿಕೊಂಡಿದ್ದೇನೆ. ಅಂತೆಯೇ ಅದಕ್ಕೀಗ ಅವಕಾಶ ಒದಗಿದೆ' ಎಂದರು.
ಮೇ 22ರ ಐಪಿಎಲ್ ಪ್ಲೇ-ಆಫ್ ಪಂದ್ಯಕ್ಕೂ ಮುನ್ನ ಪ್ರದರ್ಶನ ಪಂದ್ಯ ರೀತಿಯಲ್ಲಿ ಈ ಟಿ20 ಚಾಲೆಂಜ್ ಪಂದ್ಯ ನಡೆಯಲಿದೆ.
ತಂಗಳು ಇಂತಿವೆ
ಐಪಿಎಲ್ ಟ್ರೈಯಲ್ ಬ್ಲೇಸರ್: ಸ್ಮೃತಿ ಮಂಧನಾ (ನಾಯಕಿ), ಅಲಿಸ್ಸಾ ಹೀಲಿ, ಸುಜಿ ಬೇಟ್ಸ್, ದೀಪ್ತಿ ಶರ್ಮ, ಬೆತ್ ಮೂನಿ, ಜೆಮಿನಾ ರೋಡ್ರಿಗಸ್, ಡೇನಿಯೆಲ್ ಹಝೆಲ್, ಶಿಖಾ ಪಾಂಡೆ, ಲಿಯ ತಹುಹು, ಜೂಲನ್ ಗೋಸ್ವಾಮಿ, ಎಕ್ತಾ ಬಿಸ್ಟ್, ಪೂನಂ ಯಾದವ್, ಡಿ ಹೇಮಲತಾ.
ಐಪಿಎಲ್ ಸೂಪರ್ ನೋವಾ: ಹರ್ಮನ್ ಪ್ರೀತ್ ಕೌರ್ (ನಾಯಕಿ), ಡೇನಿಯೆಲ್ ವ್ಯಾಟ್, ಮಿಥಾಲಿ ರಾಜ್, ಮೆಗ್ ಲ್ಯಾನಿಂಗ್, ಸೋಫಿ ಡಿವೈನ್, ಎಲಿಸೆ ಪೆರ್ರಿ, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್, ಪೂಜಾ ವಸ್ತ್ರಕಾರ್, ಮೇಘನ್ ಸ್ತುತ್, ರಾಜೇಶ್ವರಿ ಗಾಯಕ್ವಾಡ್, ಅನುಜಾ ಪಾಟಿಲ್, ತಾನಿಯಾ ಭಾಟಿಯಾ.