Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸ್ಮೃತಿ ಮಂದಾನ ಸ್ಫೋಟಕ 48 ರನ್, ಡೈಮಂಡ್ಸ್ ಸೋಲಿಸಿದ ಸ್ಟೋರ್ಮ್

Smriti Mandhana Shines on KSL Debut With 20-ball 48 as Storm Thrash Diamonds

ಟೌನ್ಟನ್, ಜುಲೈ 23: ಇಂಗ್ಲೆಂಡ್ ನ ಟೌನ್ಟನ್ ನಲ್ಲಿ ನಡೆದ ವನಿತಾ ಕ್ರಿಕೆಟ್ ಸೂಪರ್ ಲೀಗ್ ನಲ್ಲಿ ಭಾರತದ ಸ್ಮೃತಿ ಮಂದಾನ ಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಹಾಲಿ ಚಾಂಪಿಯನ್ ವೆಸ್ಟರ್ನ್ ಸ್ಟೋರ್ಮ್ ತಂಡ ಯಾರ್ಕ್ ಶೈರ್ ಡೈಮಂಡ್ಸ್ ತಂಡವನ್ನು 7 ವಿಕೆಟ್ ನಿಂದ ಸೋಲಿಸಿದೆ.

ಭಾನುವಾರ (ಜುಲೈ 22) ನಡೆದ 3ನೇ ಪಂದ್ಯದಲ್ಲಿ ಮಂಧನಾ, 20 ಎಸೆತಗಳಿಗೆ ಭರ್ಜರಿ 48 ರನ್ ಪೇರಿಸಿ ಗಮನ ಸೆಳೆದರು. ಈ ವೇಳೆ ಸ್ಮೃತಿ ಬ್ಯಾಟ್ ನಿಂದ 5 ಸಿಕ್ಸರ್, 3 ಬೌಂಡರಿಗಳು ಸಿಡಿದಿದ್ದವು. ತಂಡದ ನಾಯಕಿ ಹೀದರ್ ನೈಟ್ ಕೂಡ ತಂಡದ ಗೆಲುವಿಗೆ ಕಾರಣರಾದರು. 62 ಎಸೆತಗಳಿಗೆ ನೈಟ್ ಸ್ಫೋಟಕ 97 ರನ್ ಪೇರಿಸಿ ಆ್ಯಲಿಸ್ ಡೇವಿಡ್ ಸನ್ ರಿಚರ್ಡ್ಸ್ ಓವರ್ ನಲ್ಲಿ ವಿಕೆಟ್ ಒಪ್ಪಿದರು.

ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಯಾರ್ಕ್ ಶೈರ್ ಡೈಮಂಡ್ಸ್ ತಂಡ 20 ಓವರ್ ಗಳಿಗೆ 5 ವಿಕೆಟ್ ಕಳೆದು 162 ರನ್ ಪೇರಿಸಿ ವೆಸ್ಟರ್ನ್ ಸ್ಟೋರ್ಮ್ ಗೆ 163 ರನ್ ಗುರಿ ನೀಡಿತ್ತು. ತಂಡದ ಪರ ಲಾರೆನ್ ವಿನ್ಫೀಲ್ಡ್ 41 (29), ಆ್ಯಲಿಸ್ ಡೇವಿಡ್ಸನ್ 33 (33), ಡೆಲಿಸ್ಸಾ ಕಿಮ್ಮಿನ್ಸ್ 55 (41) ರನ್ ಪೇರಿಸಿದರು.

ಚೇಸಿಂಗ್ ಗೆ ಇಳಿದ ವೆಸ್ಟರ್ನ್ ಸ್ಟೋರ್ಮ್ 15.3 ಓವರ್ ಗಳಲ್ಲಿ 3 ವಿಕೆಟ್ ಕಳೆದು 166 ರನ್ ಪೇರಿಸಿತು. ಮಂದಾನ 48 (20), ನೈಟ್ 97 (62), ಸ್ಟಾಫನಿ ಟೇಲರ್ ಅಜೇಯ 12 (12) ರನ್ ಪೇರಿಸಿ ತಂಡವನ್ನು ಗೆಲ್ಲಿಸಿಕೊಟ್ಟರು.

Story first published: Monday, July 23, 2018, 16:06 [IST]
Other articles published on Jul 23, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+