IND vs PAK: ಭಾರತೀಯ ಆಟಗಾರ್ತಿಯರು ಅಭ್ಯಾಸ ಮಾಡುವ ವೇಳೆ ಕಾಣಿಸಿಕೊಂಡ ಹಾವು
ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕಾಗಿ ಆಟಗಾರರು ನೆಟ್ಸ್‌ನಲ್ಲಿ ಅಭ್ಯಾಸವನ್ನು ನಡೆಸುವಾಗ ಅಘಾತಕಾರಿ ಸುದ್ದಿ ಒಂದು ಹೊರ ಬಂದಿದೆ. ಶುಕ್ರವಾರ ಸಂಜೆ ಭಾರತದ ಆಟಗಾರರು ಶ್ರೀಲಂಕಾದ ಕೊಲಂಬೊದಲ್ಲಿ ಅಭ್ಯಾಸವನ್ನು ನಡೆಸುತ್ತಿದ್ದರು. ಈ ವೇಳೆ ಆಟಗಾರರು ಅಭ್ಯಾಸ ನಡೆಸುವ ವೇಳೆ ಹಾವು ಕಾಣಿಸಿಕೊಂಡಿದ್ದು ಗದ್ದಲ ಸೃಷ್ಟಿಯಾಗಿತ್ತು.
ಭಾರತ ಹಾಗೂ ಪಾಕಿಸ್ತಾನ ನಡುವಣ ಜಿದ್ದಾಜಿದ್ದಿನ ಕಾಳಗ ಮುಂಚೆ ನೆಟ್ಸ್‌ನಲ್ಲಿ ಹಾವು ಕಾಣಿಸಿಕೊಂಡಿದ್ದು, ಭಯ ಹುಟ್ಟಿಸಿತು. ಪ್ರೇಮದಾಸ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿದ್ದಾಗ ಹಾವು ಕಾಣಿಸಿಕೊಂಡಿದೆ. ಭಾರತೀಯ ಆಟಗಾರ್ತುಯರು ನೆಟ್ಸ್ ಕಡೆಗೆ ಹೋಗುತ್ತಿದ್ದಾಗ ಮೈದಾನದಲ್ಲಿ ಕಂದು ಬಣ್ಣದ ಹಾವು ಕಾಣಿಸಿತು. ಈ ವೇಳೆ ವಿಕೆಟ್ ಕೀಪರ್ ಈ ಹಾವನ್ನು ಗರಂಡಿಯಾ ಎಂದು ಕರೆದರು. ಈ ಬಗೆಯ ಹಾವುಗಳು ಯಾರಿಗೂ ಹಾನಿಯನ್ನು ಉಂಟು ಮಾಡುವುದಿಲ್ಲ. ಈ ಬಗೆಯ ಹಾವುಗಳು ಇಲಿಗಳನ್ನು ಮಾತ್ರ ತಿನ್ನುತ್ತದೆ ಎಂದು ತಿಳಿದು ಬಂದಿದೆ.

ಭಾರತೀಯ ಆಟಗಾರರು ಮೈದಾನದಲ್ಲಿ ಅಭ್ಯಾಸ ನಡೆಸಲು ಹೋಗುವಾಗ ಮೈದಾನದಲ್ಲಿ ಈ ಹಾವು ಕಾಣಿಸಿಕೊಂಡಿದ್ದು, ಭಯ ಆಗುವ ಬದಲು ಆಟಗಾರರು ಸಿಬ್ಬಂದಿಗಳು ಈ ಹಾವನ್ನು ಆಸಕ್ತಿಯಿಂದ ವೀಕ್ಷಿಸಿದರು. ಈ ಹಾವು ಮೈದಾನದಲ್ಲಿದ್ದ ಆಟಗಾರ್ತಿಯರಿಗೆ ಯಾವುದೇ ಹಾನಿಯನ್ನು ಉಂಟು ಮಾಡಿಲ್ಲ. ಮೈದಾನದ ಅಧಿಕಾರಿ ಈ ಹಾವು ವಿಷಕಾರಿಯಲ್ಲ ಮತ್ತು ಅದು ಕಚ್ಚುವುದಿಲ್ಲ ಎಂದು ಹೇಳಿದ್ದಾರೆ.
ಭಾರತ ಹಾಗೂ ಪಾಕ್ ಮುಖಾಮುಖಿ
ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಅಕ್ಟೋಬರ್ 5 ರಂದು ಕಾದಾಟ ನಡೆಸಲಿವೆ. ಪಾಕಿಸ್ತಾನ ತಂಡ ಭಾರತಕ್ಕೆ ಪ್ರವಾಸ ಬೆಳೆಸದೆ ಇರುವುದರಿಂದ ಈ ಪಂದ್ಯವನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸಲಾಗಿದೆ. ಪಾಕಿಸ್ತಾನ ತನ್ನ ಎಲ್ಲ ಪಂದ್ಯಗಳನ್ನು ಕೊಲಂಬೊದಲ್ಲಿ ಆಡಲಿದೆ. ಭಾರತ ಈ ಪಂದ್ಯವನ್ನು ಆಡಲು ಕೊಲಂಬೊಕ್ಕೆ ಬಂದಿದೆ. ಭಾರತ ಅಂಕಿ ಅಂಶಗಳ ಲೆಕ್ಕಾಚಾದಲ್ಲಿ ಬಲಿಷ್ಠವಾಗಿವೆ. 11 ಬಾರಿ ಉಭಯ ತಂಡಗಳು ಏಕದಿನ ಪಂದ್ಯಗಳಲ್ಲಿ ಮುಖಾಮುಖಿ ಆಗಿದ್ದು, 11 ಪಂದ್ಯಗಳಲ್ಲಿ ಟೀಮ ಇಂಡಿಯಾ ಜಯ ಸಾಧಿಸಿದೆ.
ಭಾರತ ಮಹಿಳಾ ಏಕದಿನ ವಿಶ್ವಕಪ್ ಪಂದ್ಯದಲ್ಲಿ ಭರ್ಜರಿ ಆರಂಭವನ್ನು ಮಾಡಿದೆ. ಶ್ರೀಲಂಕಾ ತಂಡವನ್ನು 59 ರನ್‌ಗಳಿಂದ ಮಣಿಸಿರು ಟೀಮ್ ಇಂಡಿಯಾ ಎರಡನೇ ಗೆಲುವಿನ ಕನಸು ಕಾಣುತ್ತಿದೆ. ಇನ್ನು ಪಾಕ್ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳಿಂದ ಬಾಂಗ್ಲಾ ವಿರುದ್ಧ ಸೋಲು ಕಂಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications