For Quick Alerts
ALLOW NOTIFICATIONS  
For Daily Alerts
 

2 ವಿಕೆಟ್‌ ಪಡೆದು ದಾಖಲೆ ಬರೆದ ಸ್ನೇಹಾ ರಾಣಾ

ಮಹಿಳಾ ಏಕದಿನ ವಿಶ್ವಕಪ್‌ನ ಭಾರತ 88 ರನ್‌ಗಳಿಂದ ಪಾಕಿಸ್ತಾನ ಮಣಿಸಿ, ಟೂರ್ನಿಯಲ್ಲಿ ಎರಡನೇ ಗೆಲುವಿನ ನಗೆ ಬೀರಿದೆ. ಈ ಮೂಲಕ ಭಾರತ ತಂಡ ಟೂರ್ನಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಇದಕ್ಕೂ ಮೊದಲು ಭಾರತ ಶ್ರೀಲಂಕಾ ವಿರುದ್ಧ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸ್ನೇಹಾ ರಾಣಾ 2 ವಿಕೆಟ್‌ ಪಡೆದು ಸಾಧನೆ ಮಾಡಿದರು. ಈ ಮೂಲಕ ಸ್ನೇಹ ಹೊಸ ದಾಖಲೆ ಬರೆದಿದ್ದಾರೆ.

ಪಾಕ್ ವಿರುದ್ಧದ ಪಂದ್ಯದಲ್ಲಿ ಸ್ನೇಹಾ ರಾಣಾ 8 ಓವರ್ ಬೌಲ್ ಮಾಡಿ 38 ರನ್‌ ನೀಡಿ 2 ವಿಕೆಟ್‌ ಕಬಳಿಸಿದರು. ಇವರು ಪಾಕ್ ತಂಡದ ಸಿದ್ರಾ ಅಮೀನ್ ಮತ್ತು ಸಿದ್ರಾ ನವಾಜ್ ಅವರನ್ನು ಪೆವಿಲಿಯನ್‌ಗೆ ಅಟ್ಟುವ ಮೂಲಕ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದಿದ್ದಾರೆ. ಸ್ನೇಹಾ ರಾಣಾ ಪ್ರಸಕ್ತ ವರ್ಷ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಪಡೆದಿದ್ದಾರೆ. ಸ್ನೇಹಾ 2025ರಲ್ಲಿ ಒಟ್ಟು 25 ವಿಕೆಟ್‌ ಪಡೆದಿದ್ದಾರೆ. ಈ ಮೂಲಕ ಸ್ನೇಹಾ ವೆಸ್ಟ್‌ ಇಂಡೀಸ್‌ ತಂಡದ ಆಲಿಯಾ ಅಲೆನ್ ಅವರ ದಾಖಲೆಯನ್ನು ಅಳಿಸಿ ಹಾಕಿದರು. ವಿಂಡೀಸ್‌ ಪರ ಆಡುವ ಆಲಿಯಾ ಬುಟ್ಟಿಯಲ್ಲಿ 24 ವಿಕೆಟ್‌ಗಳು ಇವೆ.

Sneha Rana breaks Aaliyah Alleyne s record India beats Pakistan for second World Cup win

ಭಾರತದ ಪರ 2014ರಲ್ಲಿ ಪದಾರ್ಪಣೆ ಮಾಡಿರುವ ಸ್ನೇಹಾ ರಾಣಾ ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಳ್ಳುತ್ತಾ ಸಾಗಿದ್ದಾರೆ. ಇವರ ಎಸೆತಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ ಬ್ಯಾಟರ್‌ಗಳು ವಿಫಲರಾಗುತ್ತಿದ್ದಾರೆ. ಇವರು ಭಾರತದ ಪರ ಆಡಿದ 40 ಏಕದಿನ ಪಂದ್ಯಗಳಲ್ಲಿ 54 ವಿಕೆಟ್‌ ಕಬಳಿಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಇವರು ಟಿ20 ಕ್ರಿಕೆಟ್‌ನಲ್ಲಿ 24 ವಿಕೆಟ್‌ ಉರುಳಿಸಿದ್ದಾರೆ.

ಕ್ರಾಂತಿ ಅಬ್ಬರ

ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ಭರ್ಜರಿ ಜಯ ಸಾಧಿಸಿದಲ್ಲಿ ವೇಗದ ಬೌಲರ್ ಕ್ರಾಂತಿ ಗೌಡ್ ಅವರ ಪಾತ್ರ ಮುಖ್ಯ. ಕ್ರಾಂತಿ ಗೌಡ್ ಮೂರು ವಿಕೆಟ್‌ಗಳನ್ನು ಕಬಳಿಸಿ ಪಾಕಿಸ್ತಾನದ ಬ್ಯಾಟಿಂಗ್ ಬೆನ್ನೆಲುನ್ನು ಮುರಿದರು. ಇವರ ಅತ್ಯುತ್ತಮ ಪ್ರದರ್ಶನಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಸಹ ಪಡೆದರು.

ಭಾರತ, ಪಾಕಿಸ್ತಾನ ವಿರುದ್ಧ ಆಡಿದ 12 ಪಂದ್ಯಗಳಲ್ಲಿ ಜಯ ಸಾಧಿಸಿದ್ದು, ವಿಶೇಷ ದಾಖಲೆಯನ್ನು ಸಹ ಬರೆದಿದೆ.

Story first published: Monday, October 6, 2025, 13:45 [IST]
Other articles published on Oct 6, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+