ಎಂಎಸ್‌ಎಲ್ ಟಿ20: ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಭಾರತದ ಅಧಿಕೃತ ಪ್ರಸಾರಕ

ನವದೆಹಲಿ, ನವೆಂಬರ್ 14: ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನವೆಂಬರ್ 16ರಿಂದ ಆರಂಭಗೊಳ್ಳಲಿರುವ ಮಝನ್ಸಿ ಸೂಪರ್ ಲೀಗ್ ಟಿ20 ಟೂರ್ನಿಯ ಭಾರತದ ಅಧಿಕೃತ ಪ್ರಸಾರಕವಾಗಿ 'ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ'ವನ್ನು ಹೆಸರಿಸಲಾಗಿದೆ.
ಕ್ರಿಕೆಟ್ ಸೌತ್ ಆಫ್ರಿಕಾ ಮತ್ತು ಗ್ಲೋಬಲ್ ಸ್ಪೋರ್ಟ್ಸ್ ಕಾಮರ್ಸ್ ಬುಧವಾರ (ನವೆಂಬರ್ 14) ಪತ್ರಿಕಾ ಪ್ರಕಟನೆಯಲ್ಲಿ ಭಾರತ ಮತ್ತು ಉಪಖಂಡದಲ್ಲಿ ಮಝನ್ಸಿ ಸೂಪರ್ ಲೀಗ್ ಟಿ20 ಟೂರ್ನಿಯ ಅಧಿಕೃತ ಪ್ರಸಾರಕವಾಗಿ 'ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್' ಅನ್ನು ಘೋಷಿಸಿತು.
ಭಾರತದಾತ್ಯಂತ ಕ್ರೀಡಾ ಪ್ರಸಾರಕವಾಗಿ ಹಕ್ಕನ್ನು ಪಡೆದಿರುವ ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್, ಆಸ್ಟ್ರೇಲಿಯಾ, ಸೌತ್ ಆಫ್ರಿಕಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕ್ರಿಕೆಟ್ ಪ್ರಸಾರಿಸುವ ಹಕ್ಕನ್ನು ಹೊಂದಿದೆ.

ಯಾವ್ ಯಾವ್ ಚಾನೆಲ್?
ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಒಳಗೊಂಡಿರುವ ಕ್ರೀಡಾ ಚಾನೆಲ್ ಗಳಾದ ಸೋನಿ ಸಿಕ್ಸ್, ಸೋನಿ ಟೆನ್, ಸೋನಿ ಇಎಸ್‌ಪಿಎನ್ ಚಾನೆಲ್ ಗಳು ಎಂಎಸ್‌ಎಲ್ ಟಿ20 ಪಂದ್ಯಗಳನ್ನು ಪ್ರಸಾರ ಮಾಡಲಿವೆ. ಪಂದ್ಯಗಳೆಂದರೆ ಇದರಲ್ಲಿ ಪ್ಲೇ ಆಫ್ ಮತ್ತು ಫೈನಲ್ ಪಂದ್ಯವೂ ಸೇರಿವೆ.

6 ತಂಡಗಳ ನಡುವೆ ಕಾದಾಟ
ನವೆಂಬರ್ 16ರಿಂದ ದಕ್ಷಿಣ ಆಫ್ರಿಕಾದಲ್ಲಿ ಆರಂಭಗೊಳ್ಳಲಿರುವ ಈ ಕುತೂಹಲಕಾರಿ ಮಝನ್ಸಿ ಸೂಪರ್ ಲೀಗ್ ಟಿ20 ಟೂರ್ನಿಯಲ್ಲಿ ಒಟ್ಟು 6 ತಂಡಗಳು ಪಾಲ್ಗೊಳ್ಳಲಿವೆ. ಜೋಸಿ ಸ್ಟಾರ್ಸ್, ಷ್ವಾನೆ ಸ್ಪಾರ್ಟನ್ಸ್, ಡರ್ಬನ್ ಹೀಟ್, ಕೇಪ್ ಟೌನ್ ಬ್ಲಿಟ್ಜ್, ಪಾರ್ಲ್ ರಾಕ್ಸ್ ಮತ್ತು ನೆಲ್ಸನ್ ಮಂಡೇಲಾ ಬೇ ಜೈಂಟ್ಸ್ ಎಂದು ತಂಡಗಳನ್ನು ಹೆಸರಿಸಲಾಗಿದೆ.

18 ತಿಂಗಳ ಶ್ರಮ
ಸುಮಾರು 18 ತಿಂಗಳಿನಿಂದಲೂ ಇಂಥದ್ದೊಂದು ಟೂರ್ನಮೆಂಟ್ ಆರಂಭಿಸಬೇಕೆಂದು ಕ್ರಿಕೆಟ್ ಸೌತ್ ಆಫ್ರಿಕಾ (ಸಿಎಸ್‌ಎ) ಪಟ್ಟ ಶ್ರಮ, ಕಂಡ ಕನಸು ಈ ಬಾರಿ ಈಡೇರಿದಂತಾಗಿದೆ. ನವೆಂಬರ್ 16ರಂದು ಆರಂಭಗೊಂಡು ಡಿಸೆಂಬರ್ 16ರಂದು ಕೊನೆಗೊಳ್ಳಲಿರುವ ಈ ಟೂರ್ನಿ ಸ್ಟಾರ್ ಆಟಗಾರರ ಮೂಲಕ ರಂಜಿಸಲಿದೆ.

ಸ್ಟಾರ್ ಬಣ
ಈ ಬಾರಿ ಆರಂಭಗೊಳ್ಳುತ್ತಿರುವ ಮೊದಲ ಮಝನ್ಸಿ ಸೂಪರ್ ಲೀಗ್ ಟಿ20 ಟೂರ್ನಿಯ ಆವೃತ್ತಿಯಲ್ಲಿ ಅಘ್ಘಾನ್ ಸ್ಟಾರ್ ರಶೀದ್ ಖಾನ್, ಡೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್, ಡ್ವೇನ್ ಬ್ರಾವೋ, ಸೌತ್ ಆಫ್ರಿಕಾ ಸ್ಫೋಟಕ ಬ್ಯಾಟ್ಸ್ಮನ್ ಎಬಿಡಿವಿಲಿಯರ್ಸ್, ಡೇಲ್ ಸ್ಟೇನ್, ಡೇವಿಡ್ ಮಿಲ್ಲರ್ ಸೇರಿದಂತೆ ಅನೇಕ ಆಕರ್ಷಣೀಯ ಆಟಗಾರರು ಕಣಕ್ಕಿಳಿಯುವುದರಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications