
ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಿಸಿಸಿಐ ನಡುವಿನ ಇತ್ತೀಚಿನ ಕಿತ್ತಾಟದಲ್ಲಿ ವಿರಾಟ್ ಕೊಹ್ಲಿ ತದ್ದಿರುದ್ದ ಹೇಳಿಕೆಯು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ವಿರಾಟ್ ಕೊಹ್ಲಿ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ತಾನು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಮಾಹಿತಿಯನ್ನು ನೀಡಿದಾಗ ಬಿಸಿಸಿಐ ಯಾವುದೇ ವಿರೋಧವನ್ನು ವ್ಯಕ್ತ ಪಡಿಸದೇ ತನ್ನ ನಿರ್ಧಾರವನ್ನು ಸ್ವಾಗತಿಸಿತು ಎಂದು ಸ್ಪಷ್ಟನೆಯನ್ನು ನೀಡಿದರು.
ಆದರೆ ಈ ಹಿಂದೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ , ಕೊಹ್ಲಿಗೆ ನಾಯಕತ್ವದಿಂದ ಕೆಳಗಿಳಿಯಬೇಡಿ ಎಂದು ನಾನು ಖಾಸಗಿಯಾಗಿ ಮನವಿ ಮಾಡಿದ್ದೇ ಎಂಬ ಹೇಳಿಕೆಯನ್ನ ನೀಡಿದ್ರು. ಆದ್ರೆ ಕೊಹ್ಲಿ ತದ್ದಿರುದ್ದ ಹೇಳಿಕೆಯ ನಡುವೆ ಸೌರವ್ ಗಂಗೂಲಿ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಆದ್ರೆ ಇದೀಗ ಗಂಗೂಲಿ ಅಭಿಮಾನಿಗಳು ದಾದಾಗೆ ಬೆಂಬಲ ಸೂಚಿಸಿದ್ದು, #NationStandsWithDada ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸೌರವ್‌ರನ್ನ ಬೆಂಬಲಿಸಿದ್ದಾರೆ.
ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ), ಡಿಸೆಂಬರ್ 8ರಂದು ಲಿಮಿಟೆಡ್ ಓವರ್ ಫಾರ್ಮೆಟ್‌ಗೆ ರೋಹಿತ್ ಶರ್ಮಾ ನಾಯಕನಾಗಿ ಮುಂದುವರೆಯಲಿದ್ದಾರೆ ಎಮದು ಪ್ರಕಟಿಸಿತು. ಇದು ಟಿ20 ನಾಯಕತ್ವದಿಂದ ಕೆಳಗಿಳಿದಿದ್ದ ವಿರಾಟ್ ಕೊಹ್ಲಿ ಶಾಕಿಂಗ್ ಸುದ್ದಿಯಾಗಿತ್ತು. ವಿರಾಟ್ ಟಿ20 ವಿಶ್ವಕಪ್‌ಗೂ ಮೊದಲೇ , ಟೂರ್ನಿ ಮುಗಿದ ಮೇಲೆ ಚುಟುಕು ಕ್ರಿಕೆಟ್ ನಾಯಕತ್ವ ಬಿಟ್ಟುಕೊಡುವುದಾಗಿ ತಿಳಿಸಿದ್ರು. ಜೊತೆಗೆ ಏಕದಿನ ಮತ್ತು ಟೆಸ್ಟ್ ಕ್ರಿಕೆಟ್ ನಾಯಕತ್ವವನ್ನು ಮುಂದುವರಿಸುವ ಆಸೆ ವ್ಯಕ್ತಪಡಿಸಿದ್ರು. ಆದ್ರೆ ರಾಷ್ಟ್ರೀಯ ಆಟಗಾರರ ಆಯ್ಕೆ ಸಮಿತಿಯು ವೈಟ್ ಬಾಲ್ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಬೇಕು ಎಂಬ ಕಾರಣಕ್ಕಾಗಿ ಏಕದಿನ ಕ್ರಿಕೆಟ್‌ಗೂ ರೋಹಿತ್ ಶರ್ಮಾಗೆ ನಾಯಕನಾಗುವ ಅವಕಾಶ ನೀಡಿತು.
ಇದಾದ ಬಳಿಕ ಸೌರವ್ ಗಂಗೂಲಿ "ಟಿ20 ನಾಯಕತ್ವವನ್ನು ಬಿಟ್ಟುಕೊಡದಂತೆ ನಾನು ಅವರಿಗೆ (ಕೊಹ್ಲಿ) ವೈಯಕ್ತಿಕವಾಗಿ ವಿನಂತಿಸಿದೆ" ಎಂದು ತಿಳಿಸಿದ್ದರು. ಆದ್ರೆ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ''ಏಕದಿನ ನಾಯಕತ್ವ ತ್ಯಜಿಸುವ ಮುನ್ನ ಚರ್ಚೆಗಳು ನಡೆದಿರಲಿಲ್ಲ. ನನಗೆ ವಿಶ್ರಾಂತಿ ಬೇಕಿತ್ತು. ಒಂದೂವರೆ ಗಂಟೆಯ ಮೊದಲು ಆಯ್ಕೆ ಮಂಡಳಿಯ ಐವರು ಸದಸ್ಯರು ನಾಯಕ ಸ್ಥಾನ ಬದಲಿಸಿದ್ದರ ಕುರಿತು ತಿಳಿಸಿದ್ದರು. ಅದು ತೊಂದರೆಯಿಲ್ಲ'' ಎಂದು ಕೊಹ್ಲಿ ಹೇಳಿದ್ದಾರೆ.
ಕೊಹ್ಲಿಯ ಈ ಹೇಳಿಕೆ ಮತ್ತು ಸೌರವ್ ಗಂಗೂಲಿ ಹೇಳಿಕೆ ಬಿಸಿಸಿಐಗೆ ಇರುಸು ಮುರುಸು ಉಂಟು ಮಾಡಿದೆ. ಸುದ್ದಿಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ಜೊತೆಗಿನ ಸಂವಹನ ಕೊರತೆಯನ್ನು ಎತ್ತಿ ತೋರಿಸಿತ್ತು. ಬಿಸಿಸಿಐ ನಡೆಯ ಬಗ್ಗೆ ಅಭಿಮಾನಿಗಳಲ್ಲಿ ಅನುಮಾನಗಳು ಹುಟ್ಟಿಕೊಂಡಿದೆ. ಅಷ್ಟೇ ಅಲ್ಲದೆ ಕೊಹ್ಲಿ ನಾಯಕತ್ವ ಕುರಿತಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನೀಡಿರುವ ಹೇಳಿಕೆಗಳು ಸುಳ್ಳು ಎಂಬ ವಾದಗಳು ಕೇಳಿ ಬರುತ್ತಿವೆ.
ಇದರ ನಡುವೆ ಗಂಗೂಲಿ ಮತ್ತು ಕೊಹ್ಲಿ ವಿಭಿನ್ನ ಮಾತುಗಳೊಂದಿಗೆ ಬರುವುದರಿಂದ, ಟ್ವಿಟರ್‌ನಲ್ಲಿ ಅಭಿಮಾನಿಗಳ ವಾದ ವಿಭಜನೆಯಾಗಿದೆ. ಕೊಹ್ಲಿ ಅವರ ಅಭಿಮಾನಿಗಳಿಂದ ಸಾಕಷ್ಟು ಬೆಂಬಲವನ್ನು ಪಡೆದಿದ್ದರೂ, ಅತ್ಯುತ್ತಮ ಭಾರತೀಯ ನಾಯಕರಲ್ಲಿ ಒಬ್ಬರು ಎಂದು ಪ್ರಶಂಸಿಸಲ್ಪಟ್ಟ ಗಂಗೂಲಿ ಅವರನ್ನು ಬೆಂಬಲಿಸುವ ಅಭಿಮಾನಿಗಳನ್ನು ಹೆಚ್ಚಿದ್ದಾರೆ. ಹೀಗಾಗಿಯೇ #NationStandsWithDada ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಸೌರವ್‌ಗೆ ಬೆಂಬಲ ಸೂಚಿಸಿದ್ದಾರೆ.