ವೆಸ್ಟ್ ಇಂಡೀಸ್ ಸರಣಿಗೆ ಈ ಆಟಗಾರ ಇಲ್ಲದ್ದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಗಂಗೂಲಿ

ಕೋಲ್ಕತ್ತಾ, ಜುಲೈ 24: ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಯುವ ಬ್ಯಾಟ್ಸ್ಮನ್ ಶುಭ್‌ಮಾನ್ ಗಿಲ್‌ಗೆ ಸ್ಥಾನ ನೀಡದ್ದಕ್ಕಾಗಿ ಭಾರತದ ಕ್ರಿಕೆಟ್ ದಂತಕತೆ, ಮಾಜಿ ನಾಯಕ ಸೌರವ್ ಗಂಗೂಲಿ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಜಿಂಕ್ಯ ರಹಾನೆಯನ್ನು ಏಕದಿನ ತಂಡದಲ್ಲಿ ಸೇರಿಸಬೇಕಿತ್ತು ಎಂದೂ ಗಂಗೂಲಿ ಹೇಳಿಕೊಂಡಿದ್ದಾರೆ.
ಆಗಸ್ಟ್ 3ರಿಂದ ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ಪಂದ್ಯಗಳು ಆರಂಭವಾಗಲಿದ್ದು, ವಿರಾಟ್ ಕೊಹ್ಲಿ ಪಡೆ 3 ಟಿ20, 3 ಏಕದಿನ ಪಂದ್ಯಗಳು, 2 ಟೆಸ್ಟ್ ಪಂದ್ಯಗಳನ್ನಾಡಲಿದೆ. ಈ ಸರಣಿಗಾಗಿ ಬಿಸಿಸಿಐ ಜುಲೈ 21ರಂದು ತಂಡ ಪ್ರಕಟಿಸಿತ್ತು. ಪ್ರಕಟಿತ ಯಾವ ತಂಡದಲ್ಲೂ ಶುಭ್‌ಮಾನ್ ಗಿಲ್ ಹೆಸರು ಇರಲಿಲ್ಲ.
ವೆಸ್ಟ್ ಇಂಡೀಸ್ ಪ್ರವಾಸ ಸರಣಿಯಲ್ಲಿ ಟೀಮ್ ಇಂಡಿಯಾವನ್ನು ವಿರಾಟ್ ಕೊಹ್ಲಿ ಮುನ್ನಡೆಸುತ್ತಿದ್ದಾರೆ. ತಂಡದಲ್ಲಿ ಸ್ಥಾನ ಲಭಿಸಿರುವ ಬಗ್ಗೆ ಗಿಲ್ ಕೂಡ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವೇ ಆಟಗಾರರ ಆಯ್ಕೆ
ಟ್ವಿಟರ್‌ನಲ್ಲಿ ಗಂಗೂಲಿ, 'ಲಯ ಮತ್ತು ಆತ್ಮವಿಶ್ವಾಸ ಹೆಚ್ಚಿಸುವುದಕ್ಕಾಗಿ ಎಲ್ಲಾ ಮಾದರಿಗಳಲ್ಲೂ ಕೆಲವೇ ಆಟಗಾರರನ್ನು ಆಯ್ಕೆದಾರರು ಆರಿಸುತ್ತಿದ್ದಾರೆ. ಕೆಲವೇ ಕೆಲವು ಆಟಗಾರರು ಮಾತ್ರ ಎಲ್ಲಾ ಮಾದರಿಗಳಲ್ಲೂ ಆಡುತ್ತಿದ್ದಾರೆ. ಶ್ರೇಷ್ಠ ತಂಡದಲ್ಲಿ ಸ್ಥಿರ ಆಟಗಾರರಿರುತ್ತಾರೆ' ಎಂದು ಬರೆದುಕೊಂಡಿದ್ದಾರೆ.

ಅತ್ಯುತ್ತಮ ಆಟಗಾರರ ಆಯ್ಕೆಯಾಗಲಿ
ಮುಂದೆ ಗಂಗೂಲಿ, 'ಆದರೆ ಒಬ್ಬರೇ ಆಟಗಾರರನ್ನು ಆರಿಸಿದರೆ ಎಲ್ಲರಿಗೂ ಖುಷಿಯೆನಿಸಲಾರದು. ದೇಸಿ ತಂಡಕ್ಕಾಗಿ ಅತ್ಯುತ್ತಮ ಮತ್ತು ಸ್ಥಿರ ಎರಡೂ ಆಟಗಾರರನ್ನೂ ಆರಿಸಬೇಕಿದೆ' ಎಂದು ಬರೆದುಕೊಂಡಿದ್ದಾರೆ. ಪರೋಕ್ಷವಾಗಿ ಇಲ್ಲಿ ಶುಭ್‌ಮಾನ್ ಗಿಲ್ ಅವರ ಕುರಿತು ಅಭ್ರಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಿಲ್ ಹೆಸರಿಲ್ಲದ್ದು ಅಚ್ಚರಿ ಮೂಡಿಸಿತು
ಮತ್ತೊಂದು ಟ್ವೀಟ್‌ನಲ್ಲಿ, 'ಎಲ್ಲಾ ಮಾದರಿಗಳಲ್ಲೂ ಆಡಬಲ್ಲ ಸಾಕಷ್ಟು ಆಟಗಾರರು ತಂಡದಲ್ಲಿದ್ದಾರೆ. ಆದರೆ ಶುಭ್‌ಮಾನ್ ಗಿಲ್ ಅವರು ತಂಡದಲ್ಲಿ ಕಾಣದಿದ್ದುದು ಅಚ್ಚರಿ ಮೂಡಿಸಿತು. ರಹಾನೆ ಕೂಡ ಬರೀ ಏಕದಿನ ತಂಡದಲ್ಲಿದ್ದರು' ಎಂದು ಗಂಗೂಲಿ ತಿಳಿಸಿದ್ದಾರೆ.

ಯುವ ಬ್ಯಾಟ್ಸ್ಮನ್ ಬೇಸರ
ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಹಿರಿಯರ ತಂಡಗಳನ್ನು ಪ್ರಕಟಿಸುವುದನ್ನೇ ನಾನು ಭಾನುವಾರ ಕಾಯುತ್ತಿದ್ದೆ. ಯಾವುದಾದರೂ ಒಂದು ತಂಡದಲ್ಲಾದರೂ ಆಯ್ಕೆಯಾಗುವುದನ್ನು ನಿರೀಕ್ಷಿಸಿದ್ದೆ' ಎಂದು ಶುಭ್‌ಮಾನ್ ಗಿಲ್ ಬೇಸರ ವ್ಯಕ್ತಪಡಿಸಿದ್ದರು. ವಿಂಡೀಸ್ 'ಎ' ವಿರುದ್ಧದ ಏಕದಿನ ಸರಣಿಯಲ್ಲಿ ಶುಭ್‌ಮಾನ್ 2 ಶತಕಗಳೂ (62, 77 ರನ್) ಒಟ್ಟು 218 ರನ್ ಬಾರಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications