For Quick Alerts
ALLOW NOTIFICATIONS  
For Daily Alerts
 

ಹೊಡಿಬಡಿ ಆಟಕ್ಕೆ ಡಬಲ್‌ ಸೂಪರ್ ಓವರ್ ರೋಮಾಂಚನ: ಥ್ರಿಲರ್‌ ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾ

ಅಹಮದಾಬಾದ್‌: ಕೊನೆಯ ಕ್ಷಣದವರೆಗೂ ಕುರ್ಚಿಯ ತುದಿಯಲ್ಲಿ ಕುಳಿತುಕೊಳ್ಳುವಂತೆ ಮಾಡಿದ್ದ ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ "ಡಿ" ಗುಂಪಿನ ಪಂದ್ಯ ಸೂಪರ್‌ ಓವರ್‌ನತ್ತ ಮುಖ ಮಾಡಿತ್ತು. ಜಿದ್ದಾಜಿದ್ದಿನಿಂದ ಕೂಡಿದ್ದ ಮೊದಲ ಸೂಪರ್‌ ಒವರ್‌ನಲ್ಲಿ ಉಭಯ ತಂಡಗಳಿ ತಲಾ 17 ರನ್‌ಗಳಿಂದ ಸಿಡಿಸಿದ್ದರಿಂದ ಮತ್ತೊಂದು ಸೂಪರ್‌ ಓವರ್‌ ನಡೆಸಲಾಯಿತು.

ಎರಡನೇ ಸೂಪರ್‌ ಓವರ್‌ನಲ್ಲಿ ಟ್ರಿಸ್ಟನ್‌ ಸ್ಟಬ್ಸ್‌ ಹಾಗೂ ಡೇವಿಡ್‌ ಮಿಲ್ಲರ್ ಜೋಡಿ ಆರ್ಭಟ ನಡೆಸಿತು. ಈ ಜೋಡಿ ಅಜ್ಮತುಲ್ಲಾ ಒಮರ್ಜೈ ಅವರು ಎಸೆದ ಓವರ್‌ನಲ್ಲಿ 23 ರನ್‌ ಸೇರಿಸಿತು. ಅಫ್ಘಾನಿಸ್ತಾನ ಎರಡನೇ ಸೂಪರ್‌ ಓವರ್‌ನಲ್ಲಿ ಬ್ಯಾಟಿಂಗ್ ಮಾಡಿ ಎರಡನೇ ಎಸೆತದಲ್ಲಿ ವಿಕೆಟ್‌ ಕಳೆದುಕೊಂಡಿತು. ನಂತರದ ಮೂರು ಎಸೆತಗಳನ್ನು ಗುರ್ಬಾಜ್‌ ಮೂರು ಸಿಕ್ಸರ್‌ ಬಾರಿಸಿ ರೋಚಕತೆ ಹೆಚ್ಚಿಸಿದರು. ಕೊನೆಯಲ್ಲಿ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾಗಿ ವಿಕೆಟ್‌ ಒಪ್ಪಿಸಿದರು. ಅಫ್ಘಾನಿಸ್ತಾನ ಸೋಲು ಕಂಡಿತು.

South Africa Afghanistan T20 World Cup 2026

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ನಾಯಕ ಐಡನ್ ಮಾರ್ಕ್ರಾಮ್‌ ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಕ್ವಿಂಟನ್‌ ಡಿಕಾಕ್‌ ಹಾಗೂ ರಯಾನ್‌ ರಿಕಲ್ಟನ್‌ ಜೋಡಿ 61 ಎಸೆತಗಳಲ್ಲಿ 114 ರನ್‌ ಸೇರಿಸಿತು. ಈ ವೇಳೆ ಕ್ವಿಂಟನ್‌ ಡಿಕಾಕ್‌ 41 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್‌ ಸಹಾಯದಿಂದ 59 ರನ್‌ ಸಿಡಿಸಿ ಔಟ್ ಆದರು. ರಯಾನ್‌ ರಿಕಲ್ಟನ್‌ 61 ರನ್‌ ಸಿಡಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.

ಡೇವಾಲ್ಡ್ ಬ್ರೆವಿಸ್‌ 23, ಡೇವಿಡ್‌ ಮಿಲ್ಲರ್‌ 20 ರನ್‌ ಸೇರಿಸಿದರು. ಅಂತಿಮವಾಗಿ ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 187 ರನ್‌ ಸೇರಿಸಿತು.

ಗುರ್ಬಾಜ್ ಆರ್ಭಟ

ಸ್ಪರ್ಧಾತ್ಮಕ ಮೊತ್ತವನ್ನು ಹಿಂಬಾಲಿಸಿದ ಅಫ್ಘಾನಿಸ್ತಾನ ತಂಡದ ಆರಂಭ ಭರ್ಜರಿಯಾಗಿತ್ತು. ಆರಂಭಿಕ ರಹಮಾನುಲ್ಲಾ ಗುರ್ಬಾಜ್ ಹಾಗೂ ಇಬ್ರಾಹಿಂ ಜದ್ರಾನ್ (12) ರನ್ ಕಲೆ ಹಾಕುವಲ್ಲಿ ವಿಫಲರಾದರು. ಆದರೆ ಮೊದಲ ವಿಕೆಟ್‌ಗೆ 51 ರನ್‌ಳ ಜಿತೆಯಾಟದ ಕಾಣಿಕೆ ನೀಡಿತು. 1 ರನ್‌ ಅಂತರದಲ್ಲಿ ಮೂರು ಪ್ರಮಖ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ದರ್ವಿಶ್ ರಸೂಲಿ ಹಾಗೂ ರಹಮಾನುಲ್ಲಾ ಗುರ್ಬಾಜ್ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿದರು.

ದರ್ವಿಶ್ ಮತ್ತು ಗುರ್ಬಾಜ್ ಜೋಡಿ 4ನೇ ವಿಕೆಟ್‌ಗೆ 69 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ ರನ್‌ ವೇಗಕ್ಕೆ ಚುರುಕು ಮುಟ್ಟಿಸಲು ಹೋಗಿ ಗುರ್ಬಾಜ್ ಔಟ್ ಆದರಯ. ಇವರು 42 ಎಸೆತಗಳಲ್ಲಿ 4 ಬೌಂಡರಿ, 7 ಸಿಕ್ಸರ್ ಸಹಾಯದಿಂದ 84 ರನ್‌ ಬಾರಿಸಿ ಅಬ್ಬರಿಸಿದರು.

ಕೆಳ ಕ್ರಮಾಂಕದಲ್ಲಿ ಅಜ್ಮತುಲ್ಲಾ ಒಮರ್ಜೈ 22 ರನ್ ಬಾರಿಸಿದರು. ನಾಯಕ ರಾಶೀದ್ ಖಾನ್ (20), ನೂರ್ ಅಹ್ಮದ್ ಅಜೇಯ 15 ರನ್ ಸಿಡಿಸಿ ತಂಡಕ್ಕೆ ಆಧಾವಾದರು. ಕೊನೆಯ 3 ಎಸೆತದಲ್ಲಿ 3 ರನ್‌ ಬಾರಿಸುವಲ್ಲಿ ವಿಫಲರಾದ ಅಫ್ಘಾನಿಸ್ತಾನ ಬ್ಯಾಟರ್‌ ನಿರಾಸೆ ಅನುಭವಿಸಿದರು. ಕೊನೆಯ ಓವರ್‌ನಲ್ಲಿ ಎರಡು ನೋಬಾಲ್‌ ಆದರೂ, ಇದರ ಸಂಪೂರ್ಣ ಲಾಭವನ್ನು ಪಡೆಯಲು ವಿಫಲರಾದರು.

ಸೂಪರ್ ಓವರ್‌

ಮೊದಲ ಸೂಪರ್ ಓವರ್‌ನಲ್ಲಿ ಅಜ್ಮತುಲ್ಲಾ ಓಮರ್ಜಾಯಿ 16 ರನ್‌ ಬಾರಿಸಿದರು. ಪರಿಣಾಮ ಅಫ್ಘಾನಿಸ್ತನ ಈ ಓವರ್‌ನಲ್ಲಿ 17 ರನ್ ಸೇರಿಸಿತು. ಇದಕ್ಕುತ್ತರಾಗಿ ಬ್ಯಾಟ್ ಮಾಡಿದ ಸಹ ಇಷ್ಟೇ ರನ್‌ ಸಿಡಿಸಿತು. ಎರಡನೇ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಆಫ್ರಿಕಾ 23 ರನ್ ಬಾರಿಸಿತು. ಆದರೆ ಅಫ್ಘಾನಿಸ್ತಾನ 4 ರನ್‌ ಅಂತರದ ಸೋಲು ಕಂಡಿತು.

Story first published: Wednesday, February 11, 2026, 15:27 [IST]
Other articles published on Feb 11, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+