IPL 2025 LSG: ದಕ್ಷಿಣ ಆಫ್ರಿಕಾ ಪ್ಲೇಯರ್ ಅಬ್ಬರ ಕಂಡು ಎಲ್‌ಎಸ್‌ಜಿ ಫ್ಯಾನ್ಸ್ ಖುಷ್: ಪಾಕ್ ವೇಗದ ಬೌಲರ್ ದಾಖಲೆ
ಪಾಕಿಸ್ತಾನ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ವೇಳೆ ಮೊದಲ ಟಿ20 ಪಂದ್ಯವನ್ನು ಮಂಗಳವಾರ ಆಡಲಾಯಿತು. ಈ ವೇಳೆ ದಕ್ಷಿಣ ಆಫ್ರಿಕಾ 11 ರನ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಪಾಕ್ ಸೋಲು ಕಂಡಿದ್ದರೂ, ಪಾಕಿಸ್ತಾನ ತಂಡದ ಅನುಭವಿ ವೇಗದ ಬೌಲರ್ ದಾಖಲೆ ಬರೆದಿದ್ದಾರೆ.
ಡರ್ಬನ್‌ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 9 ವಿಕೆಟ್‌ಗೆ 183 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕ್ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಸಿಡಿಸಿ ಸೋಲು ಕಂಡಿತು.

ಮಿಲ್ಲರ್ ಅಬ್ಬರ
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ಪರ ಸ್ಟಾರ್ ಆಟಗಾರ ಡೇವಿಡ್ ಮಿಲ್ಲರ್, ಅಬ್ಬರಿಸಿದರು. ಇವರ ಈ ಆಟವನ್ನು ಕಂಡು ಲಕ್ನೋ ಸೂಪರ್ ಜೈಂಟ್ಸ್ ತಂಡದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇವರು ಕೇವಲ 40 ಎಸೆತಗಳಲ್ಲಿ 4 ಬೌಂಡರಿ, 8 ಸಿಕ್ಸರ್ ಸಹಾಯದಿಂದ 82 ರನ್ ಬಾರಿಸಿದರು. ಇನ್ನು ಜಾರ್ಜ್ ಲಿಂಡೆ 24 ಎಸೆತಗಳಲ್ಲಿ 3 ಬೌಂಡರಿ, 4 ಸಿಕ್ಸರ್ ಸಹಾಯದಿಂದ 48 ರನ್ ಸಿಡಿಸಿ ಔಟ್ ಆದರು.
ಆಫ್ರಿದಿ 100 ವಿಕೆಟ್
ಇದೇ ಪಂದ್ಯದಲ್ಲಿ ಪಾಕ್ ತಂಡದ ಸ್ಟಾರ್ ಆಟಗಾರ ಶಾಹೀನ್ ಶಾ ಅಫ್ರಿದಿ ಮೂರು ವಿಕೆಟ್ ಪಡೆದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಸಾಧನೆ ಮಾಡಿದ ಹಿರಿಮೆ ತಮ್ಮದಾಗಿಸಿಕೊಂಡರು. ಈ ಮೂಲಕ ಕ್ರಿಕೆಟ್‌ನ ಮೂರು ಫಾರ್ಮೆಟ್‌ಗಳಲ್ಲಿ 100 ವಿಕೆಟ್‌ಗಳನ್ನು ಪಡೆದ ಮೊದಲ ಪಾಕಿಸ್ತಾನದ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲದೆ ಈ ಸಾಧನೆ ಮಾಡಿದ ವಿಶ್ವದ ನಾಲ್ಕನೇ ವೇಗದ ಬೌಲರ್. ಈ ಪಟ್ಟಿಯಲ್ಲಿ ಲಸಿತ್ ಮಾಲಿಂಗ, ನ್ಯೂಜಿಲೆಂಡ್‌ನ ಟಿಮ್ ಸೌಥಿ ಮತ್ತು ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಕೂಡ ಸಹ ಇದ್ದಾರೆ.

ಪಾಕ್ ತಂಡದ ಆಟ ಹೇಗಿತ್ತು?
ಮೊದಲ ಟಿ20 ಪಂದ್ಯದಲ್ಲಿ ಸ್ಟಾರ್ ಆಟಗಾರ ಬಾಬರ್ ಅಜಮ್ ಸೊನ್ನೆ ಸುತ್ತಿದರು. ಆದರೆ ನಾಯಕ ಮೊಹಮ್ಮದ್ ರಿಜ್ವಾನ್ 62 ಎಸೆತಗಳಲ್ಲಿ 5 ಬೌಂಡರಿ, 3 ಸಿಕ್ಸರ್ ಸಹಾಯದಿಂದ 74 ರನ್ ಸಿಡಿಸಿ ಅಬ್ಬರಿಸಿದರು. ಸಾಯಮ್ ಅಯೂಬ್ 7 ಬೌಂಡರಿ ಸಹಾಯದಿಂದ 31, ತಯಾಬ್ ತಹೀರ್ 18 ರನ್‌ಗಳಿಸಿದರೂ ಗೆಲುವಿಗೆ ಸಾಕಾಗಲಿಲ್ಲ. ಪರಿಣಾಮ ಪಾಕಿಸ್ತಾನ ಮೊದಲ ಪಂದ್ಯದಲ್ಲಿ ಸೋಲು ಕಂಡಿತು. ದಕ್ಷಿಣ ಆಫ್ರಿಕಾ ಪರ ಜಾರ್ಜ್ ಲಿಂಡೆ 21 ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು.
ಎಲ್‌ಎಸ್‌ಜಿ ಪರ ಆಡಲಿರುವ ಮಿಲ್ಲರ್
ಡೇವಿಡ್ ಮಿಲ್ಲರ್ ಅವರನ್ನು ಸೌದಿಯಲ್ಲಿ ನಡೆದ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಖರೀದಿಸಿತು. ಈ ವೇಳೆ ಅವರ ಮೂಲ ಬೆಲೆ 1.50 ಕೋಟಿ ಆಗಿತ್ತು. ಆದರೆ ಇವರಿಗೆ 7.50 ಕೋಟಿ ನೀಡಿ ಲಕ್ನೋ ಮಿಲ್ಲರ್ ಅವರನ್ನು ಖರೀದಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications