
ಸಾಂಕ್ರಾಮಿಕ ರೋಗದಿಂದಾಗಿ ಮುಂದೂಡಲ್ಪಟ್ಟ ಕ್ರಿಕೆಟ್ ಸರಣಿಗಳು ಒಂದೊಂದಾಗಿ ಪುನಃ ಪ್ರಾರಂಭವಾಗುತ್ತಿವೆ. ದಕ್ಷಿಣ ಆಫ್ರಿಕಾ ತಂಡವು ತವರು ನೆಲದಲ್ಲಿ ನಡೆಯಲಿರುವ ಮುಂಬರುವ ಇಂಗ್ಲೆಂಡ್ ವಿರುದ್ಧದ ಮೂರು ಏಕದಿನ ಪಂದ್ಯ ಹಾಗೂ ಟಿ20 ಸರಣಿಗೆ ತಂಡವನ್ನು ಪ್ರಕಟಿಸಿದೆ.
24 ಮಂದಿಯ ತಂಡವನ್ನು ಆಸ್ಟ್ರೇಲಿಯಾ ವಿರುದ್ಧ 3-0 ವೈಟ್‌ವಾಶ್‌ಗೆ ಮುನ್ನೆಡೆಸಿದ್ದ ಕ್ವಿಂಟನ್ ಡಿಕಾಕ್ ನೇತೃತ್ವದಲ್ಲಿ ನಡೆಯಲಿದೆ. 24 ಮಂದಿಯ ತಂಡದಲ್ಲಿ ಆಸ್ಟ್ರೇಲಿಯಾ ವಿರುದ್ಧ ಉತ್ತಮ ಆಟವಾಡಿದ್ದ ಜನ್ನೆಮನ್ ಮಲನ್ ಮತ್ತು ಹೆನ್ರಿಕ್ ಕ್ಲಾಸೆನ್ ಮೊದಲಾದವರು ಸೇರಿದ್ದಾರೆ. ಇನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯವನ್ನು ತಪ್ಪಿಸಿಕೊಂಡ ಕಗಿಸೊ ರಬಾಡಾ ಮತ್ತು ಫಾಫ್ ಡು ಪ್ಲೆಸಿಸ್ ತಂಡಕ್ಕೆ ಮರಳಿದ್ದಾರೆ.
ದಕ್ಷಿಣ ಆಫ್ರಿಕಾ ಬೌಲಿಂಗ್ ವಿಭಾಗವು ಬಲಿಷ್ಟವಾಗಿದ್ದು, ಅನ್ರಿಕ್ ನೊರ್ಕಿಯಾ, ಕಗಿಸೊ ರಬಾಡಾ, ಜೂನಿಯರ್ ದಾಲಾ, ಬ್ಯೂರನ್ ಹೆಂಡ್ರಿಕ್ಸ್, ಲುಂಗಿ ಎನ್‌ಗಿಡಿ, ಡ್ವೈನ್ ಪ್ರಿಟೋರಿಯಸ್, ಆ್ಯಂಡಿಲೆ ಫೆಹ್ಲುಕ್ವಾಯೊ ಮತ್ತು ಲುಥೋ ಸಿಪಮ್ಲಾ ಇದ್ದಾರೆ. ಜೊತೆಗೆ ಜಾರ್ಜ್ ಲಿಂಡೆ, ತಬ್ರೇಜ್ ಶಮ್ಸಿ, ಕೇಶವ್ ಮಹಾರಾಜ್, ಮತ್ತು ಜಾನ್-ಜಾನ್ ಸ್ಮಟ್ಸ್ ಅವರ ಅರೆಕಾಲಿಕ ಆಯ್ಕೆಯು ಸ್ಪಿನ್-ಬೌಲಿಂಗ್ ವಿಭಾಗವನ್ನು ನಿಭಾಯಿಸುತ್ತದೆ. ತಂಡದಲ್ಲಿ ಕಂಡುಬರುವ ಏಕೈಕ ಹೊಸ ಮುಖವೆಂದರೆ ಮಧ್ಯಮ ವೇಗದ ಬೌಲರ್ ಗ್ಲೆನ್ ಸ್ಟುವರ್ಮನ್.
ದಕ್ಷಿಣ ಆಫ್ರಿಕಾ 24 ಮಂದಿಯ ತಂಡ ಹೀಗಿದೆ:
ಕ್ವಿಂಟನ್ ಡಿ ಕಾಕ್ (ಸಿ), ಟೆಂಬಾ ಬಾವುಮಾ, ಜೂನಿಯರ್ ದಾಲಾ, ಫಾಫ್ ಡುಪ್ಲೆಸಿಸ್, ಜಾರ್ನ್ ಫಾರ್ಚುಯಿನ್, ಬ್ಯೂರನ್ ಹೆಂಡ್ರಿಕ್ಸ್, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಜಾರ್ಜ್ ಲಿಂಡೆ, ಕೇಶವ್ ಮಹಾರಾಜ್, ಜನ್ನೆಮನ್ ಮಲನ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಕ್ ನೊರ್ಕಿಯಾ, ಆ್ಯಂಡಿಲೆ ಫೆಹ್ಲುಕ್ವಾಯೊ, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡಾ, ತಬ್ರೈಜ್ ಶಮ್ಸಿ, ಲುಥೋ ಸಿಪಮ್ಲಾ, ಜಾನ್-ಜಾನ್ ಸ್ಮಟ್ಸ್, ಗ್ಲೆನ್ ಸ್ಟುವರ್ಮನ್, ಪೈಟ್ ವ್ಯಾನ್ ಬಿಲ್ಜಾನ್, ರಾಸ್ಸಿ ವ್ಯಾನ್ ಡೆರ್ ಡುಸೆನ್, ಕೈಲ್ ವೆರೆನ್ನೆ.