ಐಪಿಎಲ್‌ಗಾಗಿ ರಾಷ್ಟ್ರೀಯ ತಂಡದ ಸೇವೆಗೆ ಅಲಭ್ಯರಾದ ದಕ್ಷಿಣ ಆಫ್ರಿಕಾ ಪ್ಲೇಯರ್ಸ್

ಮಾರ್ಚ್ 26ರಿಂದ ಆರಂಭಗೊಳ್ಳಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ಗೆ ಕ್ಷಣಗಣನೆ ಶುರುವಾಗಿದ್ದು, ಐಪಿಎಲ್‌ನಲ್ಲಿ ಆಡುವ ಸಲುವಾಗಿ ದಕ್ಷಿಣ ಆಫ್ರಿಕಾ ಆಟಗಾರರು ತಮ್ಮ ರಾಷ್ಟ್ರೀಯ ತಂಡದ ಸೇವೆಗೆ ಅಲಭ್ಯರಾಗಿದ್ದಾರೆ.
ಐಪಿಎಲ್‌ನಲ್ಲಿ ಭಾಗವಹಿಸುವ ಆಟಗಾರರನ್ನ ಬಾಂಗ್ಲಾದೇಶ ವಿರುದ್ಧದ ಮುಂಬರುವ ಟೆಸ್ಟ್ ಸರಣಿಯಲ್ಲಿ ಆಯ್ಕೆಗೆ ಪರಿಗಣಿಸಿಲ್ಲ. ಈ ಮೂಲಕ ಪ್ರಮುಖ ಆಟಗಾರರಾದ ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಮಾರ್ಕೊ ಜಾನ್ಸನ್, ಬ್ಯಾಟ್ಸ್‌ಮನ್‌ಗಳಾದ ಏಡನ್ ಮಕ್ರಾಮ್, ರಾಸ್ಸಿ ವ್ಯಾನ್ ಡರ್ ಡಸೆನ್ ಅವರು ಬಾಂಗ್ಲಾದೇಶ ಪ್ರವಾಸದ ಬದಲು ಐಪಿಎಲ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೀಗಾಗಿ ಈ ಆಟಗಾರರನ್ನ ಬಾಂಗ್ಲಾ ವಿರುದ್ಧದ ಟೆಸ್ಟ್ ಸರಣಿಯಿಂದ ಕೈ ಬಿಡಲಾಗಿದೆ.
ಈ ಆಟಗಾರರಷ್ಟೇ ಅಲ್ಲದೆ ಐಪಿಎಲ್‌ನಲ್ಲಿ ಭಾಗಿಯಾಗಬೇಕಿದ್ದ ಎನ್ರಿಚ್ ನೊರ್ಕಿಯಾ ಗಾಯಾಳುವಾಗಿರುವುದರಿಂದ ಐಪಿಎಲ್‌ನಲ್ಲಿ ಆಡುವುದು ಅನುಮಾನವಾಗಿದೆ.
ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಮಾರ್ಚ್ 31ರಿಂದ ಆರಂಭಗೊಳ್ಳಲಿದ್ದು, ಡರ್ಬನ್‌ನಲ್ಲಿ ಮೊದಲ ಟೆಸ್ಟ್ ನಡೆಯಲಿದೆ. ಇದಾದ ಬಳಿಕ ಏಪ್ರಿಲ್ 7ರಿಂದ ಪೋರ್ಟ್ ಎಲಿಜಬೆತ್‌ನಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯಲಿದೆ.
ದಕ್ಷಿಣ ಆಫ್ರಿಕಾ ಟೆಸ್ಟ್ ತಂಡ:
ಡೀನ್ ಎಲ್ಗರ್ (ನಾಯಕ), ತೆಂಬಾ ಬವುಮಾ (ಉಪನಾಯಕ), ಡ್ಯಾರಿನ್ ಡುಪಾವಿಲನ್, ಸರೆಲ್ ಎರ್ವಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್, ವಿಯಾನ್ ಮಲ್ದಾರ್, ಡುವಾನ್ ಒಲಿವಿಯರ್, ಕೀಗನ್ ಪೀಟರ್ಸಸನ್, ರಯಾನ್ ರಿಕೆಲ್ಟನ್, ಲುತೊ ಸಿಪಾಮ್ಲಾ, ಗ್ಲೆಂಟನ್ ಸ್ಟರ್‌ಮನ್, ಕೈಲ್ ವೆರೆಯನ್(ವಿಕೆಟ್ ಕೀಪರ್), ಲಿಝಾದ್ ವಿಲಿಯಮ್ಸ್, ಖಾಯೊ ಜೊಂಡೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications