ಪಾಕಿಸ್ತಾನ ವಿರುದ್ಧ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಪ್ರಕಟ: 18 ವರ್ಷದ ಆಟಗಾರನಿಗೆ ಸ್ಥಾನ
ಪಾಕಿಸ್ತಾನ ಕ್ರಿಕೆಟ್ ತಂಡ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈ ವೇಳೆ ಆತಿಥೇಯ ತಂಡದ ವಿರುದ್ಧ ಮೂರು ಫಾರ್ಮೆಟ್‌ಗಳಲ್ಲಿ ಮೈದಾನಕ್ಕೆ ಇಳಿಯಲಿದೆ. ಈಗಾಗಲೇ ಟಿ20 ಸರಣಿ ಮುಗಿದಿದ್ದು, ಆತಿಥೇಯ ತಂಡ ಚುಟಕು ಸರಣಿ ಗೆದ್ದಿದೆ. ಇನ್ನು ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಇದಾದ ಬಳಿಕ ಉಭಯ ದೇಶಗಳ ನಡುವೆ ಎರಡು ಟೆಸ್ಟ್ ಪಂದ್ಯಗಳು ನಡೆಯಲಿವೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಡಿಯಲ್ಲಿ ಈ ಸರಣಿ ಆಡಲಾಗುತ್ತಿದೆ.
ಡಿಸೆಂಬರ್ 26 ರಿಂದ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ 2 ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ. ಈ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ತಲುಪುವ ಉದ್ದೇಶದಿಂದ ತುಂಬ ಮಹತ್ವ ಪಡೆದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಟೆಸ್ಟ್ ಸರಣಿಗೆ ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಇಬ್ಬರು ಯುವ ಆಟಗಾರರಿಗೆ ಸ್ಥಾನ ನೀಡಲಾಗಿದೆ.

ಇಬ್ಬರು ಯುವಕರಿಗೆ ಸ್ಥಾನ
ದಕ್ಷಿಣ ಆಫ್ರಿಕಾದ ಪರ ಸೀಮಿತ ಓವರ್‌ಗಳ ಪಂದ್ಯದಲ್ಲಿ ಪದಾರ್ಪಣೆ ಮಾಡಿ ಭರವಸೆ ಮೂಡಿಸಿರುವ 18 ವರ್ಷದ ಯುವ ಎಡಗೈ ಆಟಗಾರ ಕ್ವೆನಾ ಮಫಾಕಾ ಅವರಿಗೆ ಟೆಸ್ಟ್ ತಂಡದಲ್ಲಿ ಸ್ಥಾನ ಲಭಿಸಿದೆ. ಮೊದಲ ಬಾರಿಗೆ, ವೇಗದ ಬೌಲರ್ ಆಲ್ ರೌಂಡರ್ ಕಾರ್ಬಿನ್ ಬಾಷ್ ಕೂಡ ಮೊದಲ ಬಾರಿಗೆ ಆಫ್ರಿಕನ್ ಟೆಸ್ಟ್ ತಂಡದಲ್ಲಿ ಸೇರ್ಪಡೆಗೊಂಡಿದ್ದಾರೆ. ತವರಿನಲ್ಲಿ ಇತ್ತೀಚಿಗೆ ನಡೆದ ಟಿ20 ಸರಣಿಯಲ್ಲಿ ಮಫಕಾ ಅದ್ಭುತ ಪ್ರದರ್ಶನ ನೀಡಿದ್ದರಿಂದ ಟೆಸ್ಟ್ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರು ಪ್ರಥಮ ದರ್ಜೆಯ 6 ಪಂದ್ಯಗಳಲ್ಲಿ 20.92 ಸರಾಸರಿಯಲ್ಲಿ ಒಟ್ಟು 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಇವರು ವೇಗಿ ಜೆರಾಲ್ಡ್ ಕೊಟ್ಜೆ ಅವರ ಬದಲಿಗೆ ತಂಡ ಸೇರಿದ್ದಾರೆ.
ಫೈನಲ್ ತಲುಪಲು ಈ ಸರಣಿ ಮಹತ್ವ ಪಡೆದಿದೆ
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಅರ್ಹತೆ ಪಡೆಯುವ ಉದ್ದೇಶವನ್ನು ಹೊಂದಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ, ತವರಿನಲ್ಲಿ ನಡೆಯವ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಇನ್ನು ಈ ಸರಣಿಯ ಆಧಾರದ ಮೇಲೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್‌ಗೆ ಟಿಕೆಟ್ ನಿರ್ಣಯವಾಗಲಿದೆ. ದಕ್ಷಿಣ ಆಫ್ರಿಕಾ ತಂಡವು ಡಬ್ಲ್ಯುಟಿಸಿ ಅಂಕ ಪಟ್ಟಿಯಲ್ಲಿ ಪ್ರಸ್ತುತ ಮೊದಲ ಸ್ಥಾನದಲ್ಲಿದ್ದು 63.33 ಶೇಕಡಾ ವಾರು ಗೆಲುವು ದಾಖಿಸಿದೆ. ಈ ಸರಣಿಯಲ್ಲಿ ಆಫ್ರಿಕಾ ಗೆಲುವು ಸಾಧಿಸಿದ್ದೇ ಆದಲ್ಲಿ ಫೈನಲ್‌ಗೆ ತುಂಬ ಹತ್ತಿರವಾಗುತ್ತದೆ.

ಪಾಕಿಸ್ತಾನ ವಿರುದ್ದದ ಸರಣಿಗೆ ಪ್ರಕಟಿತ ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಡೇವಿಡ್ ಬೆಡಿಂಗ್‌ಹ್ಯಾಮ್, ಟ್ರಿಸ್ಟಾನ್ ಸ್ಟಬ್ಸ್, ಕಾರ್ಬಿನ್ ಬಾಷ್, ಕೈಲ್ ವೆರ್ರಿನ್ನೆ (ವಿಕೆಟ್ ಕೀಪರ್), ಮ್ಯಾಥ್ಯೂ ಬ್ರಿಟ್ಜ್‌ಕೆ, ಟೋನಿ ಡಿ ಜೊರ್ಜಿ, ಮಾರ್ಕೊ ಯಾನ್ಸನ್, ಕೇಶವ್ ಮಹಾರಾಜ್, ಕ್ವೆನಾ ಮಫಕಾ, ಐಡೆನ್ ಮೆಕ್ರಂ, ವಿಯಾನ್ ಮುಲ್ಡರ್, ಸೆನುರಾನ್ ಮುತ್ತುಸಾಮಿ ರಬಾಡ, ರಯಾನ್ ರಿಕಲ್ಟನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications