Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್‌: ಭಾರತ ವಿರುದ್ಧದ ಪಂದ್ಯಕ್ಕೆ ದಕ್ಷಿಣ ಆಫ್ರಿಕಾದ ಈ ಬೌಲರ್‌ ಫಿಟ್‌!

IPL ಬಿಟ್ಟು ಹೋದ ಆಟಗಾರರು ಇಂದು ಫಿಟ್ ಅಂಡ್ ಫೈನ್ ಆಗಿದ್ದಾರೆ..!? | Oneindia Kannada
South Africas Rabada set to be fit for World Cup opener against India

ಜೊಹಾನ್ಸ್‌ಬರ್ಗ್‌, ಮೇ 12: ದಕ್ಷಿಣ ಆಫ್ರಿಕಾ ತಂಡದ ಸ್ಟಾರ್‌ ವೇಗದ ಬೌಲರ್‌ ಕಗಿಸೊ ರಬಾಡ ಗಾಯದ ಸಮಸ್ಯೆಯಿಂದ ಚೇತರಿಸುತ್ತಿದ್ದು, ಇಂಗ್ಲೆಂಡ್‌ ಮತ್ತು ವೇಲ್ಸ್‌ ಆತಿಥ್ಯದಲ್ಲಿ ಮೇ 30ರಿಂದ ಆರಂಭವಾಗಲಿರುವ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ನಲ್ಲಿಆಡುವುದು ಖಚಿತವಾಗಿದೆ

2019ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಮಿಂಚಿದ್ದ 22 ವರ್ಷದ ಬಲಗೈ ವೇಗದ ಬೌಲರ್‌ ರಬಾಡ, ಆಡಿದ 12 ಪಂದ್ಯಗಳಿಂದ 25 ವಿಕೆಟ್‌ಗಳನ್ನು ಉರುಳಿಸಿದ್ದರು. ಆದರೆ, ಲೀಗ್‌ನ ಅಂತ್ಯದ ಹೊತ್ತಿಗೆ ಬೆನ್ನು ನೋವಿನ ಸಮಸ್ಯೆಗೆ ತುತ್ತಾದರು. ವಿಶ್ವಕಪ್‌ ಹತ್ತಿರದಲ್ಲಿರುವ ಕಾರಣ ದಕ್ಷಿಣ ಆಫ್ರಿಕಾ ಕ್ರಿಕೆಟ್‌ ಮಂಡಳಿ ರಬಾಡಗೆ ಕೂಡಲೇ ಹಿಂದಿರುಗುವಂತೆ ಸೂಚನೆ ನೀಡಿತ್ತು. ಅಂತೆಯೇ ಕ್ಯಾಪಿಟಲ್ಸ್‌ ತಂಡವನ್ನು ತೊರೆದ ರಬಾಡ ತಾಯ್ನಾಡಿಗೆ ಹಿಂದಿರುಗಿದ್ದರು.

ಇದೀಗ ಜೂನ್‌ 5ರಂದು ಸೌತ್‌ಹ್ಯಾಂಪ್ಟನ್‌ನಲ್ಲಿ ನಡೆಯಲಿರುವ ಭಾರತ ವಿರುದ್ಧದ ವಿಶ್ವಕಪ್‌ ಪಂದ್ಯದ ಹೊತ್ತಿಗೆ ರಬಾಡ ಸಂಪೂರ್ಣ ಫಿಟ್‌ ಆಗಿರಲಿದ್ದಾರೆ ಎಂದು ತಂಡದ ವೈದ್ಯಾಧಿಕಾರಿ ಮೊಹಮ್ಮದ್‌ ಮೂಸಾಜೀ ಹೇಳಿದ್ದಾರೆ.

"ರಬಾಡ ಅವರ ವಿಷಯದಲ್ಲಿ ಎರಡು ಸಂಗತಿಗಳ ಬಗ್ಗೆ ಹೆಚ್ಚು ಜಾಗರೂಕರಾಗಿದ್ದೇವೆ. ಮೊದಲಿಗೆ ಅವರು ಸತತವಾಗಿ ಬೆನ್ನು ನೋವಿನ ಸಮಸ್ಯೆ ಎದುರಿಸಿದ್ದಾರೆ. ಎರಡನೇಯದಾಗಿ ತಂಡದಲ್ಲಿ ಅವರ ಉಪಸ್ಥಿತಿ ಅತ್ಯಂತ ಪ್ರಮುಖವಾಗಲಿದೆ. ಮೂರರಿಂದ ನಾಲ್ಕು ವಾರಗಳ ಅವಧಿಯಲ್ಲಿ ರಬಾಡ ಸಂಪೂರ್ಣ ಚೇತರಿಸಲಿದ್ದಾರೆ. ವಿಶ್ವಕಪ್‌ ಹೊತ್ತಿಗೆ ಅವರು ಸಂಪೂರ್ಣ ಫಿಟ್‌ ಆಗಲಿದ್ದಾರೆಂದು ಆಶಿಸುತ್ತೇವೆ,'' ಎಂದು ಮೂಸಾಜಿ ಹೇಳಿದ್ದಾರೆ.

ಇದೇ ವೇಳೆ ಗಾಯದ ಸಮಸ್ಯೆ ಎದುರಿಸುತ್ತಿರುವ ಮತ್ತಿಬ್ಬರು ವೇಗಿಗಳಾದ ಡೇಲ್‌ ಸ್ಟೇನ್‌ ಮತ್ತು ಲುಂಗಿ ಎನ್ಗಿಡಿ ವಿಶ್ವಕಪ್‌ ಹೊತ್ತಿಗೆ ಚೇತರಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೂ, ವಿಶ್ವಕಪ್‌ ತಂಡದ ಜೊತೆಗೆ ಈ ಇಬ್ಬರೂ ವೇಗಿಗಳು ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದ್ದಾರೆ. ಈ ಆಟಗಾರರು ಚೇತರಿಸದೇ ಇದ್ದಲ್ಲಿ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಅವರ ಸ್ಥಾನ ತುಂಬಬಲ್ಲ ಸಮರ್ಥರು ಇದ್ದರೆ ಎಂದು ಮೂಸಾಜಿ ಹೇಳಿದ್ದಾರೆ.

Story first published: Sunday, May 12, 2019, 19:21 [IST]
Other articles published on May 12, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+