For Quick Alerts
ALLOW NOTIFICATIONS  
For Daily Alerts
 

ಕ್ವಿಂಟನ್ ಡಿಕಾಕ್ ನಿವೃತ್ತಿಯ ಬಗ್ಗೆ ಗೊತ್ತೇ ಇರಲಿಲ್ಲ ಎಂದ ದ. ಆಫ್ರಿಕಾ ನಾಯಕ

ದಕ್ಷಿಣ ಆಪ್ರಿಕಾದ ಅನುಭವಿ ಆಟಗಾರ ಕ್ವಿಂಟನ್ ಡಿಕಾಕ್ ಮುಂದಿನ ವಿಶ್ವಕಪ್‌ನ ಬಳಿಕ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಮಾಹಿತಿ ನೀಡಿದೆ. ಮಂಗಳವಾರ ವಿಶ್ವಕಪ್‌ಗೆ ತಂಡವನ್ನು ಪ್ರಕಟಿಸಿದ ಬಳಿಕ ಕ್ರಿಕೆಟ್ ದಕ್ಷಿಣ ಆಫ್ರಿಕಾ ಈ ವಿಚಾರವನ್ನು ಬಹಿರಂಗಪಡಿಸಿತ್ತು. ಆದರೆ ಈ ವಿಚಾರವಾಗಿ ಸ್ವತಃ ನಾಯಕ ಟೆಂಬಾ ಬವುಮಾ ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇರಲಿಲ್ಲ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಆರಂಭಕ್ಕೂ ಮುನ್ನ ಮಾತನಾಡಿದ ಟೆಂಬಾ ಬವುಮಾ ಅನುಭವಿ ಆಟಗಾರ ಡಿಕಾಕ್ ಅವರ ಈ ನಿರ್ಧಾರ ಹಠಾತ್ ಮತ್ತು ಅನಿರೀಕ್ಷಿತ ಎಂದು ಹೇಳಿದ್ದಾರೆ. ಅಂದಹಾಗೆ ಡಿಕಾಕ್ 2021ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದರು ಅದಾದ ಎರಡು ವರ್ಷಕ್ಕೂ ಮುನ್ನವೇ ಏಕದಿನ ಮಾದರಿಗೂ ನಿವೃತ್ತಿ ಹೇಳಿದ್ದಾರೆ.

South Africa skipper Temba Bavuma said he had no idea about Quinton de Kock retirement

"ನನಗೆ ಆತ ಈ ಬಗ್ಗೆ ಯೋಚಿಸುತ್ತಿದ್ದಾನೆ ಎನ್ನುವ ಸುಳಿವೇ ಇರಲಿಲ್ಲ. ಕ್ವಿಂಟನ್ ಅವರಿಂದ ಯಾವ ಸಂದರ್ಭದಲ್ಲಿ ಯಾವುದನ್ನೂ ಕೂಡ ನಿರೀಕ್ಷೆ ಮಾಡಬಹುದು. ಆತ ಯಾವತ್ತೂ ಬದಲಾಗುವುದಿಲ್ಲ. ನಮ್ಮ ಶಾಲಾ ದಿನಗಳಲ್ಲಿ ಅಂಡರ್ 15 ಕಾಲದಿಮದಲೂ ನಾವು ಜೊತೆಯಾಗಿ ಆಡುತ್ತಿದ್ದು ಆತನ ಜೊತೆಗೆ ಆಡಿರುವುದು ಅದ್ಭುತ ಅನುಭವ. ಆತನೋರ್ವ ಅದ್ಭುತವಾದ ಪ್ರತಿಭೆ ಮತ್ತು ಆಟಗಾರ. ಕನಿಷ್ಠ ಏಕದಿನ ವಿಚಾರವಾಗಿ ಆತನ ನಿವೃತ್ತಿ ದಕ್ಷಿಣ ಆಫ್ರಿಕಾಗೆ ದೊಡ್ಡ ನಷ್ಟ" ಎಂದು ಹೇಳಿಕೆ ನೀಡಿದ್ದಾರೆ ಟೆಂಬಾ ಬವುಮಾ.

"ರಣತಂತ್ರದ ದೃಷ್ಟಿಕೋನದಿಂದ ನಾನು ಇಷ್ಟ ಪಡುವ ವ್ಯಕ್ತಿಗಳಲ್ಲಿ ಆತ ಕೂ ಒಬ್ಬ. ಆತ ತಂಡದಲ್ಲಿ ಇರುವುದಿಲ್ಲ ಎಂದಾದರೆ ಸ್ವಲ್ಪ ಸವಾಲು ಸಹಜವಾಗಿಯೇ ಇರುತ್ತದೆ. ಆದರೆ ಅದರಿಂದ ನಾವು ಹೊರಬರಬೇಕಾಗುತ್ತದೆ" ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ಟೆಂಬಾ ಬವುಮಾ ಹೇಳಿಕೆ ನೀಡಿದ್ದಾರೆ.

ಕ್ವಿಂಟನ್ ಡಿ ಕಾಕ್ 2013ರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಮೊದಲ ಪಂದ್ಯವನ್ನು ಆಡಿದ್ದರು. ಅಂದಿನಿಂದ ಈವರೆಗೆ ಡಿಕಾಕ್ ದಕ್ಷಿಣ ಆಫ್ರಿಕಾ ಪರವಾಗಿ 140 ಪಂದ್ಯಗಳನ್ನು ಆಡಿದ್ದು 44.85 ರ ಸರಾಸರಿಯಲ್ಲಿ 96.08 ರ ಸ್ಟ್ರೈಕ್ ರೇಟ್‌ ಹೊಂದಿದ್ದು 5966 ರನ್ ಗಳಿಸಿದ್ದಾರೆ. ಈ ಅನುಭವಿ ಆಟಗಾರ 17 ಶತಕ ಮತ್ತು 29 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಏಕದಿನ ಮಾದರಿಯಲ್ಲಿ ಕ್ವಿಂಟನ್ ಡಿಕಾಕ್ ಅವರ ಗರಿಷ್ಠ ಸ್ಕೋರ್ 178 ಆಗಿದೆ.

ಇನ್ನು ದಕ್ಷಿಣ ಆಫ್ರಿಕಾ ಇಂದು ವಿಶ್ವಕಪ್ ಟೂರ್ನಿಗಾಗಿ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಟೆಂಬಾ ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ತಂಡದಲ್ಲಿರುವ ಗಮನಾರ್ಹ ಹೆಸರೆಂದರೆ ಈ ವರ್ಷಾರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗೆರಾಲ್ಡ್ ಕೊಯೆಟ್ಜಿ. ಕೇವಲ ಎರಡು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಇವರು ಒಂದು ಮೂರು ವಿಕೆಟ್‌ಗಳ ಗೊಂಚಲು ಸೇರಿದಂತೆ ಒಟ್ಟು 5 ವಿಕೆಟ್ ಪಡೆದುಕೊಂಡಿದ್ದಾರೆ.

ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರಂತಹ ಅನುಭವಿ ಬ್ಯಾಟರ್‌ಗಳನ್ನು ಈ ತಂಡ ಒಳಗೊಂಡಿದೆ. ವೇಗದ ಬೌಲಿಂಗ್ ವಿಭಾಗವನ್ನು ಕಗಿಸೊ ರಬಾಡ ಮುನ್ನಡೆಸಲಿದ್ದು ಅನ್ರಿಚ್ ನಾರ್ಕಿಯಾ ಮತ್ತು ಲುಂಗಿ ಎನ್‌ಗಿಡಿ ಅವರಂಥಾ ಪ್ರತಿಭಾನ್ವಿತರು ತಂಡದಲ್ಲಿದ್ದಾರೆ. ಇನ್ನು ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಸ್ಪಿನ್ನರ್ಗಳಾಗಿ ತಂಡದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಸಿಸಂದಾ ಮಗಾಲಾ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸ್ಸೆನ್.

Story first published: Wednesday, September 6, 2023, 20:22 [IST]
Other articles published on Sep 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+