ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ದಕ್ಷಿಣ ಆಫ್ರಿಕಾ ಸ್ಟಾರ್ ಆಲ್‌ರೌಂಡರ್

ದಕ್ಷಿಣ ಆಫ್ರಿಕಾ ತಂಡದ ಆಲ್‌ರೌಂಡ್ ಡ್ವೈನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಆಲ್‌ರೌಂಡರ್ ಕೇವಲ 7 ವರ್ಷದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವಾಗುವ ನಿರ್ಧಾರ ಮಾಡಿದ್ದಾರೆ.
ಡ್ವೈನ್ ಪ್ರಿಟೋರಿಯಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯಾಗುತ್ತಿರುವ ವಿಷಯವನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಸೋಮವಾರ ಪ್ರಕಟಿಸಿದೆ. ಪ್ರಿಟೋರಿಯಸ್ 30 ಟಿ20 ಪಂದ್ಯಗಳು, 27 ಏಕದಿನ ಪಂದ್ಯ, ಮತ್ತು 3 ಟೆಸ್ಟ್ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಎರಡು ವಿಶ್ವಕಪ್ ಪಂದ್ಯಾವಳಿಗಳಲ್ಲಿ ಅವರು ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಆಡಿದ್ದಾರೆ.
33 ವರ್ಷದ ಸ್ಟಾರ್ ಆಲ್‌ರೌಂಡರ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಹಿಂದೆ ಸರಿಯುವುದು ಅವರ ವೃತ್ತಿಜೀವನದ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ ಎಂದು ದಕ್ಷಿಣ ಆಫ್ರಿಕಾದ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.
"ಕೆಲವು ದಿನಗಳ ಹಿಂದೆ ನಾನು ನನ್ನ ಕ್ರಿಕೆಟ್ ವೃತ್ತಿಜೀವನದ ಮಹತ್ವದ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನ ಎಲ್ಲಾ ಮಾದರಿಯಿಂದ ನಿವೃತ್ತಿಯಾಗಲು ನಿರ್ಧರಿಸಿದ್ದೇನೆ" ಎಂದು ಡ್ವೈನ್ ಪ್ರಿಟೋರಿಯಸ್ ಹೇಳಿದ್ದಾರೆ.

ಧನ್ಯವಾದ ತಿಳಿಸಿದ ಪ್ರಿಟೋರಿಯಸ್
ನಿವೃತ್ತಿಯಾಗುವ ಸಂದರ್ಭದಲ್ಲಿ ಅವರು ಹಲವು ವ್ಯಕ್ತಿಗಳಿಗೆ ಧನ್ಯವಾದ ಹೇಳಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ತರಬೇತುದಾರರು, ಸಿಬ್ಬಂದಿ, ಬಾಲ್ಯದ ಕೋಚ್, ಫಿಸಿಯೋ, ತಂಡದ ನಾಯಕ ಸೇರಿದಂತೆ ಕ್ರಿಕೆಟ್ ವೃತ್ತಿಜೀವನದಲ್ಲಿ ಸಹಕರಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾ ತಂಡಕ್ಕಾಗಿ ಆಡಬೇಕು ಎನ್ನುವುದು ನನ್ನ ಕನಸಾಗಿತ್ತು. ಕಠಿಣ ಪರಿಶ್ರಮ ಮತ್ತು ದೇವರ ಆಶಿರ್ವಾದದಿಂದ ಅದು ಸಾಧ್ಯವಾಗಿದೆ. ತನ್ನ ಜೊತೆ ತಂಡದಲ್ಲಿ ಆಡಿದ ಎಲ್ಲಾ ಸಹ ಆಟಗಾರರಿಗೂ ಧನ್ಯವಾದ, ನಿಮ್ಮ ಜೊತೆ ಕಳೆದ ಕ್ಷಣಗಳನ್ನು ಮರೆಯಲಾಗದು ಎಂದು ಹೇಳಿದ್ದಾರೆ.
ವಿಶೇಷವಾಗಿ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಪ್ ಡು ಪ್ಲೆಸಿಸ್‌ಗೆ ಧನ್ಯವಾದ ತಿಳಿಸಿದ್ದಾರೆ. "ಮೊದಲ ಬಾರಿಗೆ ಅಂತರಾಷ್ಟ್ರೀಯ ತಂಡದಿಂದ ಕೈಬಿಟ್ಟ ನಂತರ ನನ್ನನ್ನು ತಂಡಕ್ಕೆ ಮರಳಿ ಕರೆತಂದ ಫಾಫ್ ಡು ಪ್ಲೆಸಿಸ್‌ಗೆ ವಿಶೇಷ ಧನ್ಯವಾದ. ನನ್ನನ್ನು ಬೆಂಬಲಿಸಿದ ಮತ್ತು ಉತ್ತಮ ಆಟಗಾರನಾಗಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು." ಎಂದು ಹೇಳಿದ್ದಾರೆ.
ಭಾರತ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಭಾರತಕ್ಕೆ ಆಸಿಸ್ ನಾಯಕನಿಂದ ಎಚ್ಚರಿಕೆ ಸಂದೇಶ

ಟಿ20 ಲೀಗ್‌ಗಳಲ್ಲಿ ಆಡಲಿದ್ದಾರೆ ಪ್ರಿಟೋರಿಯಸ್
ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದರೂ ಅವರು ವಿಶ್ವದ ಹಲವು ಟಿ20 ಲೀಗ್‌ಗಳಲ್ಲಿ ಆಡುವುದನ್ನು ಮುಂದುವರೆಸಲಿದ್ದಾರೆ. ಟಿ20 ಮತ್ತು ಟಿ10 ಮಾದರಿಯ ಕ್ರಿಕೆಟ್ ಕಡೆಗೆ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ಪ್ರಿಟೋರಿಯಸ್ ಹೇಳಿದ್ದಾರೆ.
"ಟಿ20 ಮಾದರಿಯಲ್ಲಿ ನಾನು ಉತ್ತಮ ಆಟಗಾರನಾಗುವ ಗುರಿಯನ್ನು ಹೊಂದಿದ್ದೇನೆ. ವಿವಿಧ ಲೀಗ್‌ಗಳಲ್ಲಿ ಆಡುವುದರಿಂದ ಉತ್ತಮ ಆಟಗಾರನಾಗಲು ಸಹಾಯಕವಾಗಲಿದೆ. ನನ್ನ ವೃತ್ತು ಮತ್ತು ಕುಟುಂಬ ಜೀವನದಲ್ಲಿ ಸಮತೋಲನ ಹೊಂದಲು ಸಾಧ್ಯವಾಗುತ್ತದೆ." ಎಂದು ಹೇಳಿದ್ದಾರೆ.

ಸಿಎಸ್‌ಕೆ ತಂಡಕ್ಕಾಗಿ ಆಡುವ ಪ್ರಿಟೋರಿಯಸ್
2021ರಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 4 ಓವರ್ ಗಳಲ್ಲಿ 17 ರನ್ ನೀಡಿ 5 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾ ಪರವಾಗಿ ಅತ್ಯುತ್ತಮ ದಾಖಲೆ ಮಾಡಿದರು. 2021ರ ಟಿ20 ವಿಶ್ವಕಪ್‌ನಲ್ಲಿ 9 ವಿಕೆಟ್ ಪಡೆದರು, 164.15 ಸ್ಟ್ರೈಕ್‌ರೇಟ್‌ನಲ್ಲಿ 261 ರನ್ ಗಳಿಸಿ ಗಮನ ಸೆಳೆದಿದ್ದರು.
ಆಲ್‌ರೌಂಡರ್ ಪ್ರಿಟೋರಿಯಸ್ ಐಪಿಎಲ್ 2023ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಲಿದ್ದಾರೆ. ಅಲ್ಲದೆ ವಿಶ್ವದ ವಿವಿಧ ಟಿ 20 ಲೀಗ್‌ಗಳಲ್ಲಿ ಬೇಡಿಕೆಯ ಆಟಗಾರನಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications