For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ನ ಬಳಿಕ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ ದಕ್ಷಿಣ ಆಫ್ರಿಕಾದ ಸ್ಟಾರ್ ಕ್ರಿಕೆಟಿಗ

ದಕ್ಷಿಣ ಆಫ್ರಿಕಾದ ಅನುಭವಿ ಬ್ಯಾಟರ್ ಕ್ವಿಂಟನ್ ಡಿಕಾಕ್ ಮುಂಬರುವ ಏಕದಿನ ವಿಶ್ವಕಪ್‌ನ ಬಳಿಕ ಏಕದಿನ ಮಾದರಿಗೆ ನಿವೃತ್ತಿ ಘೋಷಣೆ ಮಾಡಲಿದ್ದಾರೆ. ಈ ವಿಚಾರವನ್ನು ಸ್ವತಃ ಕ್ರಿಕೆಟ್ ದಕ್ಷಿಣ ಆಫ್ರಿಕಾ ಬಹಿರಂಗ ಪಡಿಸಿದೆ. ವಿಶ್ವಕಪ್ ಟೂರ್‌ಇಗೆ ಇಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ 15 ಆಟಗಾರರ ಬಳಗವನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಈ ವಿಚಾರವನ್ನು ಮಾಧ್ಯಮಗಳ ಮುಂದೆ ಹಂಚಿಕೊಂಡಿದೆ.

ಕ್ವಿಂಟನ್ ಡಿ ಕಾಕ್ 2013ರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ದಕ್ಷಿಣ ಆಫ್ರಿಕಾ ಪರವಾಗಿ ಮೊದಲ ಪಂದ್ಯವನ್ನು ಆಡಿದ್ದರು. ಅಂದಿನಿಂದ ಈವರೆಗೆ ಡಿಕಾಕ್ ದಕ್ಷಿಣ ಆಫ್ರಿಕಾ ಪರವಾಗಿ 140 ಪಂದ್ಯಗಳನ್ನು ಆಡಿದ್ದು 44.85 ರ ಸರಾಸರಿಯಲ್ಲಿ 96.08 ರ ಸ್ಟ್ರೈಕ್ ರೇಟ್‌ ಹೊಂದಿದ್ದು 5966 ರನ್ ಗಳಿಸಿದ್ದಾರೆ. ಈ ಅನುಭವಿ ಆಟಗಾರ 17 ಶತಕ ಮತ್ತು 29 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಏಕದಿನ ಮಾದರಿಯಲ್ಲಿ ಕ್ವಿಂಟನ್ ಡಿಕಾಕ್ ಅವರ ಗರಿಷ್ಠ ಸ್ಕೋರ್ 178 ಆಗಿದೆ.

South Africa star batter Quinton De Kock Set To Retire From ODIs After 2023 World Cup

ಇನ್ನು ದಕ್ಷಿಣ ಆಫ್ರಿಕಾ ಇಂದು ವಿಶ್ವಕಪ್ ಟೂರ್ನಿಗಾಗಿ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು ಟೆಂಬಾ ಬವುಮಾ ತಂಡವನ್ನು ಮುನ್ನಡೆಸಲಿದ್ದಾರೆ. ಈ ತಂಡದಲ್ಲಿರುವ ಗಮನಾರ್ಹ ಹೆಸರೆಂದರೆ ಈ ವರ್ಷಾರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಗೆರಾಲ್ಡ್ ಕೊಯೆಟ್ಜಿ. ಕೇವಲ ಎರಡು ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳನ್ನು ಆಡಿರುವ ಇವರು ಒಂದು ಮೂರು ವಿಕೆಟ್‌ಗಳ ಗೊಂಚಲು ಸೇರಿದಂತೆ ಒಟ್ಟು 5 ವಿಕೆಟ್ ಪಡೆದುಕೊಂಡಿದ್ದಾರೆ.

ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಅವರಂತಹ ಅನುಭವಿ ಬ್ಯಾಟರ್‌ಗಳನ್ನು ಈ ತಂಡ ಒಳಗೊಂಡಿದೆ. ವೇಗದ ಬೌಲಿಂಗ್ ವಿಭಾಗವನ್ನು ಕಗಿಸೊ ರಬಾಡ ಮುನ್ನಡೆಸಲಿದ್ದು ಅನ್ರಿಚ್ ನಾರ್ಕಿಯಾ ಮತ್ತು ಲುಂಗಿ ಎನ್‌ಗಿಡಿ ಅವರಂಥಾ ಪ್ರತಿಭಾನ್ವಿತರು ತಂಡದಲ್ಲಿದ್ದಾರೆ. ಇನ್ನು ಕೇಶವ್ ಮಹಾರಾಜ್ ಮತ್ತು ತಬ್ರೈಜ್ ಶಮ್ಸಿ ಸ್ಪಿನ್ನರ್ಗಳಾಗಿ ತಂಡದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ: ದಕ್ಷಿಣ ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಜೆರಾಲ್ಡ್ ಕೊಯೆಟ್ಜಿ, ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಮಾರ್ಕೊ ಜಾನ್ಸೆನ್, ಹೆನ್ರಿಚ್ ಕ್ಲಾಸೆನ್, ಸಿಸಂದಾ ಮಗಾಲಾ, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡುಸ್ಸೆನ್.

Story first published: Tuesday, September 5, 2023, 19:24 [IST]
Other articles published on Sep 5, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+