ದ್ವಿಪಕ್ಷೀಯ ಸರಣಿಗಾಗಿ 11 ವರ್ಷಗಳ ಬಳಿಕ ವೆಸ್ಟ್ ಇಂಡೀಸ್‌ಗೆ ತೆರಳಲಿದೆ ದಕ್ಷಿಣ ಆಫ್ರಿಕಾ!

ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಸುದೀರ್ಘ ಕಾಲದ ಬಳಿಕ ದ್ವಿಪಕ್ಷೀಯ ಸರಣಿ ನಡೆಯಲಿದೆ. ಈ ಸಂಗತಿಯನ್ನು ಕ್ರಿಕೆಟ್ ದಕ್ಷಿಣ ಆಫ್ರಿಕಾ ಶುಕ್ರವಾರ (ಮೇ 14) ಖಾತರಿಪಡಿಸಿದೆ. ವೆಸ್ಟ್ ಇಂಡೀಸ್ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಬರೋಬ್ಬರಿ 11 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ದ್ವಿಪಕ್ಷೀಯ ಸರಣಿ ನಡೆಯಲಿದೆ.
2010ರ ಬಳಿಕ ಇದುವರೆಗೂ ದಕ್ಷಿಣ ಆಫ್ರಿಕಾ ತಂಡ ವೆಸ್ಟ್ ಇಂಡೀಸ್‌ಗೆ ದ್ವಿಪಕ್ಷೀಯ ಸರಣಿಗಾಗಿ ಹೋಗಿಲ್ಲ. 11 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರೋಟಿಯಾಸ್ ಕೆರಿಬಿಯನ್ ನಾಡಿಗೆ ತೆರಳಲಿದೆ. ಇದಕ್ಕೂ ಮುನ್ನ ಇತ್ತಂಡಗಳು ತ್ರಿಕೋನ ಸರಣಿಯಲ್ಲಿ ಪಾಲ್ಗೊಂಡಿದ್ದವು. ಆ ಸರಣಿ ನಡೆದಿದ್ದು ಆಸ್ಟ್ರೇಲಿಯಾದಲ್ಲಿ.
ಈಗ ನಡೆಯಲಿರುವುದು ಅಸಲಿಗೆ 2020 ಸರಣಿ ಮರು ವೇಳಾಪಟ್ಟಿಗೊಂಡಿರುವುದು. ವೆಸ್ಟ್ ಇಂಡೀಸ್-ದಕ್ಷಿಣ ಆಫ್ರಿಕಾ ತಂಡಗಳು ಎರಡು ಟೆಸ್ಟ್ ಪಂದ್ಯಗಳು ಮತ್ತು ಐದು ಟಿ20ಐ ಪಂದ್ಯಗಳಲ್ಲಿ ಕಾದಾಡಲಿವೆ. ಜೂನ್ 10ರಿಂದ ಜುಲೈ 3ರ ವರೆಗೆ ಉದ್ದೇಶಿತ ಸರಣಿ ನಡೆಯಲಿದೆ. ಸೇಂಟ್ ಲೂಸಿಯಾ ಮತ್ತು ಡ್ಯಾರೆನ್ ಸ್ಯಮಿ ಸ್ಟೇಡಿಯಂನಲ್ಲಿ ಸರಣಿಗಳು ನಡೆಯಲಿವೆ.
'ದಕ್ಷಿಣ ಆಫ್ರಿಕಾ ಪುರುಷರ ತಂಡ ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಳ್ಳುತ್ತಿರುವುದು ಖಾತ್ರಿಯಾಗಿರುವುದರಿಂದ ನಮಗೆ ಖುಷಿಯಾಗಿದೆ,' ಎಂದು ಕ್ರಿಕೆಟ್ ಸೌತ್ ಆಫ್ರಿಕಾ ನಿರ್ದೇಶಕ, ಮಾಜಿ ಬ್ಯಾಟ್ಸ್‌ಮನ್ ಗ್ರೇಮ್ ಸ್ಮಿತ್ ಹೇಳಿದ್ದಾರೆ. ವೆಸ್ಟ್ ಇಂಡೀಸ್ ತಂಡ ಈ ವರ್ಷ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನಕ್ಕೂ ಆತಿಥ್ಯ ವಹಿಸಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications